ಮಂಗಳೂರು: ರಾಮಕೃಷ್ಣ ಮಿಷನ್ ವತಿಯಿಂದ 15ನೇ ಭಾನುವಾರದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

Spread the love

ಮಂಗಳೂರು: ರಾಮಕೃಷ್ಣ ಮಿಷನ್  ನೇತೃತ್ವದಲ್ಲಿ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” ಎಂಬ ಕಾರ್ಯಕ್ರಮದ 15 ನೇ ವಾರದ ಸ್ವಚ್ಚತಾ ಅಭಿಯಾನವನ್ನು ದಿನಾಂಕ 10-05-2014 ರಂದು ಮಂಗಳೂರಿನ ಮಿಲಾಗ್ರೀಸ್ ವೃತ್ತ ಮತ್ತು ಹಂಪಣಕಟ್ಟೆ ಸುತ್ತಮುತ್ತ  ಕೈಗೊಳ್ಳಲಾಯಿತು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ವೆನ್ಲಾಕ್‍ ಆಸ್ಪತ್ರೆ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Divider_afterGarbage_before Garbage_after 20150510_084659 25 23 17 16

ಆಶ್ರಮದ ಮುಖ್ಯಸ್ಥರಾದಸ್ವಾಮಿಜಿತಕಾಮಾನಂದಜಿಯವರ ಸಮ್ಮುಖದಲ್ಲಿ ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ರಾಘವೇಂದ್ರ ಪ್ರಭು ಹಾಗೂ ಕ್ಯಾಪ್ಟನ್‍ ಗಣೇಶ್‍ಕಾರ್ಣಿಕ್‍ಜಂ ಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ನಿರ್ದೇಶಕರಾದ ಶ್ರೀ ರಾಮಕುಮಾರ್ ಬೆಕಲ್‍ ಅವರ ನೇತೃತ್ವದಲ್ಲಿ ಬ್ಯಾಂಕಿನ ನೌಕರರು, ಸ್ವಯಂ ಸೇವಕರು, ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು, ಸಾರ್ವಜನಿಕರು, ಹಿತೈಷಿಗಳು ಸ್ವಚ್ಚತಾ ಕೈಂಕರ್ಯದಲ್ಲಿ ಭಾಗವಹಿಸಿದರು.

ರಾಮಕೃಷ್ಣ ಮಿಷನ್ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಬಸ್ ತಂಗುದಾಣಗಳ ನವೀಕರಣ, ಬಣ್ಣ ಬಳಿಯುವ ಕಾರ್ಯ, ಸುಂದರಗೊಳಿಸುವಿಕೆ ಒಂದು ಅವಿಭಾಜ್ಯ ಅಂಗವಾಗಿವೆ. ಅಂತೆಯೇ ಮಿಲಾಗ್ರಿಸ್‍ ಚರ್ಚ ಬಳಿಯಿರುವ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಹಚ್ಚಿ ಸುಂದರಗೊಳಿಸಲಾಗಿದೆ. ಅಲ್ಲದೇ “ಸ್ವಚ್ಛತೆಗೆಅದ್ಯತೆ ನೀಡೋಣ.. ಸ್ವಚ್ಛ ಮಂಗಳೂರು ಸಾಕಾರಗೊಳಿಸೋಣ” ಎಂಬ ಸಂದೇಶವುಳ್ಳ ಜಾಗೃತಿ ಫಲಕವನ್ನು ಅಳವಡಿಸಲಾಗಿದೆ.


Spread the love