ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” 32ನೇ ಸ್ವಚ್ಛತಾ ಅಭಿಯಾನವನ್ನು ದಿನಾಂಕ 27-12-2015 ರಂದು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7:30ಕ್ಕೆ ಸರಿಯಾಗಿ ತಿರುಪತಿ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿಅನುಪಮಾನಂದಜಿ ಮಹರಾಜ್ ಹಾಗೂ ಮಂಗಳೂರು ಅಂತರಾಷ್ತ್ರಿಯ ವಿಮಾನ ಪ್ರಾಧಿಕಾರದ ಪೂರ್ವ ನಿರ್ದೇಶಕ ಶ್ರೀ ಎಂ ಆರ್ ವಾಸುದೇವ್ ಇವರುಗಳು ಜಂಟಿಯಾಗಿ ಹಸಿರು ನಿಶಾನೆ ತೋರಿ ಅಭಿಯಾನಕ್ಕೆ ಚಾಲನೆ ನೀಡಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಹಾಗೂ ಮಠದ ಇನ್ನಿತರ ಬ್ರಹ್ಮಚಾರಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಸ್ವಾಮಿಜಿದ್ವಯರು ಹಾಗೂ ಎಂ ಆರ್ ವಾಸುದೇವ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಪೆÇರಕೆ ಹಿಡಿದು ಕೆಲವು ಭಾಗಗಳನ್ನು ಶುಚಿಗೊಳಿಸಿದರು. ಹಂಪಣಕಟ್ಟೆ ವೃತ್ತದಿಂದ ಲೈಟ್ ಹೌಸ್‍ರಸ್ತೆಯಲ್ಲಿ ಎರಡು ತಂಡಗಳು, ಜೋಸ್ ಆಲುಕ್ಕಾಸ್ ಎದುರಿನ ವೃತ್ತದಲ್ಲಿ ಒಂಡು ತಂಡ, ಬಲ್ಮಠ ರಸ್ತೆಯಲ್ಲಿ ಎರಡು ತಂಡಗಳು, ಲೈಟ್ ಹೌಸ್ ರಸ್ತೆಯಿಂದ ಬಾವುಟ್‍ಗುಡ್ಡೆಗೆ ತೆರಳುವ ರಸ್ತೆಯಲ್ಲಿ ಒಂದುತಂಡ ಕಳುಹಿಸಿ ರಸ್ತೆಯ ಇಕ್ಕೆಲಗಳನ್ನು ಹಸನುಗೊಳಿಸಲಾಯಿತು. ರಸ್ತೆ ವಿಭಾಜಕಗಳ ಮಧ್ಯೆ ಅನೇಕ ಕಾಲದಿಂದ ಸಂಗ್ರಹವಾಗಿದ್ದ ಕಸವನ್ನು ವಿಭಾಜಕಗಳನ್ನು ಎತ್ತಿ ಶುಚಿಗೊಳಿಸಲಾಗಿದೆ. ಅಭಿಯಾನದ ಕಾರ್ಯಕರ್ತರು ಮಾರ್ಗದಲ್ಲಿ ಹೋಗುತ್ತಿದ್ದ ದಾರಿಹೋಕರಿಗೆ ಹಾಗೂ ಅದೇ ಪರಿಸರದಲ್ಲಿರುವ ಮನೆಮನೆಗೆ ತೆರಳಿ ಸ್ವಚ್ಚ ಪರಿಸರ ಕುರಿತ ಕರಪತ್ರ ಹಂಚಿ ಜಾಗೃತಿ ಮಾಡಿದರು