ಮಂಗಳೂರು : ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ 30-04-2015 ರಿಂದ ದಿನಾಂಕ:04-05-2015ರ ವರೆಗೆ ನಡೆಯಲಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಥೆ ನಡೆಯುವ ಸಂದರ್ಥಗಳಲ್ಲಿ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಥಾ ವೀಕ್ಷಣೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವಂತೆ ಉಸ್ತುವಾರಿ ಸಚಿವರು ಸೂಚಿಸಿರುತ್ತಾರೆ.ಆದ್ದರಿಂದ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಮ್ಮ ವಲಯಗಳಿಂದ ಫೆಡರೇಷನ್ ಕಪ್ ವೀಕ್ಷಣೆಗೆ ಮಕ್ಕಳು ಭಾಗವಹಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವರೇ ತಮ್ಮ ಅಧೀನದಲ್ಲಿ ಬರುವ ಶಾಲೆಗಳಿಗೆ ನಿರ್ಥೇಶನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ಥೇಶಕರು ಸೂಚಿಸಿರುತ್ತಾರೆ.
ಇದಲ್ಲದೆ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಥೆ ನಡೆಯುವ ಸಂದರ್ಥ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾಥರ್ಿಗಳು ಸ್ಪರ್ಥಾ ವೀಕ್ಷಣೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.
ಅವರು ಈ ಸಂಬಂಧ ಇಂದು ತಮ್ಮ ಕಚೇರಿಯಲ್ಲಿ ವೃತ್ತಿಪರ ಕಾಲೇಜುಗಳ ಸಭೆ ನಡೆಸಿ ತಿಳಿಸಿದರು.
ಆದ್ದರಿಂದ ಜಿಲ್ಲೆಯ ಎಲ್ಲಾ ಕಾಲೇಜು ಆಡಳಿತ ವರ್ಗದವರು ಕಾಲೇಜಿನ ವಾಹನವನ್ನು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿಕೊಟ್ಟು ಇದೊಂದು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ರಿಕ್ಷಾ ಚಾಲಕ/ಮಾಲಕರಿಗೆ ಆರ್.ಟಿ.ಓ.ಸೂಚನೆ
ಮಂಗಳೂರು ನಗರದಲ್ಲಿ ಸಂಚರಿಸುವ ಎಲ್ಲಾ ರಿಕ್ಷಾ ಚಾಲಕ/ ಮಾಲಕರಿಗೆ ಮತ್ತು ಟ್ಯಾಕ್ಸಿ ಚಾಲಕ/ ಮಾಲಕರು ದಿನಾಂಕ:30-04-2015 ರಿಂದ 04-05-2015 ರವರೆಗೆ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ 19ನೇ ಫೆಡರೇಷನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಫ್ ಕ್ರೀಡಾ ಕೂಟಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 1500 ಕ್ರೀಡಾ ಪಟುಗಳು ನಗರಕ್ಕೆ ಆಗಮಿಸುತ್ತಾರೆ. ಎಲ್ಲರೊಂದಿಗೆ ಸೌಜನ್ಯತೆಯಿಂದ ವರ್ತಿಸಿ, ಯಾರಿಂದಲೂ ಹೆಚ್ಚಿನ ದರ ವಸೂಲು ಮಾಡದೇ ಜಿಲ್ಲೆಯ ಗೌರವವನ್ನು ಕಾಪಾಡಬೇಕೆಂದು, ಹಾಗೂ 19ನೇ ಫೆಡರೇಷನ್ ರಾಷ್ಟ್ರೀಯ ಅಥ್ಲೇಟಿಕ್ಸ್ ಚಾಂಪಿಯನ್ಶಿಫ್ ಕ್ರೀಡಾ ಕೂಟವನ್ನು ಅತ್ಯಂತ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಪ್ರಾದೇಶಿಕ ಸಾರಿಗೆ ಉಪ ಸಾರಿಗೆ ಆಯುಕ್ತರು ಕೋರಿದ್ದಾರೆ.