ಮಂಗಳೂರು:  ಲೋಕಸಭಾ ಚುನಾವಣೆ ಹಿನ್ನೆಲೆ – 12 ಮಂದಿ ಆರೋಪಿಗಳಿಗೆ ಗಡಿಪಾರು

Spread the love

ಮಂಗಳೂರು:  ಲೋಕಸಭಾ ಚುನಾವಣೆ ಹಿನ್ನೆಲೆ – 12 ಮಂದಿ ಆರೋಪಿಗಳಿಗೆ ಗಡಿಪಾರು
 

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 12 ಮಂದಿ ಆರೋಪಿಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಅಡ್ಯಾರ್‌ಪದವಿನ ಮುಹಮ್ಮದ್ ಅಶ್ರಫ್ (42) ಮತ್ತು ರಿಯಾಝ್ ಅಹ್ಮದ್ (35), ಕದ್ರಿ ಶಿವಭಾಗ್‌ನ ಸಂದೇಶ್ ಕೋಟ್ಯಾನ್ (31), ಸುರತ್ಕಲ್ ಕಾಟಿಪಳ್ಳ ಮದ್ಯದ ವಿಜ್ವಲ್ ಪೂಜಾರಿ (29), ಕಾಟಿಪಳ್ಳ ಚೊಕ್ಕಬೆಟ್ಟುವಿನ ಹರ್ಷದ್ ಯಾನೆ ಹಫೀಝ್ (28), ಉರ್ವಸ್ಟೋರ್‌ನ ವೃಕ್ಷಿತ್ ಯಾನೆ ರಕ್ಷಿತ್ (23) ಮತ್ತು ದುರ್ಗೇಶ್ (25), ಕರಂಗಲ್ಪಾಡಿಯ ಶಿವಕುಮಾರ್(19), ಮಂಕಿಸ್ಟ್ಯಾಂಡ್‌ನ ಧನರಾಜ್ (32) ಮತ್ತು ವಿಗ್ನೇಶ್ ಶೆಟ್ಟಿ (29), ಪಂಜಿಮೊಗರು ಉರುಂದಾಡಿಗುಡ್ಡೆಯ ಚರಣ್‌ರಾಜ್ (27), ಸುರತ್ಕಲ್ ಕಾನಕಟ್ಲದ ಗಿರಿಧರ್ (24) ಗಡಿಪಾರು ಆದೇಶಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.

ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಈ ಕ್ರಮ ಜರಗಿಸಲಾಗಿದೆ.

ಇದರೊಂದಿಗೆ ಈವರೆಗೆ 36 ಮಂದಿಯ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ. ಶಾಂತಿಯುತ ಚುನಾವಣೆಯನ್ನು ನಡೆಸುವ ಸಲುವಾಗಿ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ. ಅದಲ್ಲದೆ 410 ಮಂದಿಯ ವಿರುದ್ಧ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.


Spread the love