ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಬಸವರಾಜ್ ಪಾಟೀಲ್ ಆಯ್ಕೆ
ಮಂಗಳೂರು: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ.
ಅದರಂತೆ ಶನಿವಾರ ಮೂಡಬಿದ್ರೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಬಸವರಾಜ್ ಪಾಟೀಲ್ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ.
ಬಸವರಾಜ್ ಪಾಟೀಲ್ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲೂ ಏಪ್ರಿಲ್ 17 ರಂದು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳಿಗೆ ತುರ್ತು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ರಕ್ತದ ಅಗತ್ಯತೆಯನ್ನು ಮೂಡಬಿದ್ರೆ ಬ್ಲಡ್ ಡೋನರ್ಸ್ ಹೆಲ್ಪ್ ಲೈನ್ ಮೂಖಾಂತರ ಮಾಹಿತಿಯು ತಿಳಿದ ಕೂಡಲೆ ಸ್ವಇಚ್ಛೆಯಿಂದ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ತೆರಳಿ O+ ರಕ್ತವನ್ನು ನೀಡಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಶಿವಪ್ಪ ಆಯ್ಕೆ
ಕೊರೋನ ಲಾಕ್ ಡೌನ್ ಉತ್ತಮ ಕಾರ್ಯನಿರ್ವಹಣೆ – ‘ವಾರಿಯರ್ ಆಫ್ ದಿ ಡೇ’ ಆಗಿ ಪುನೀತ್ ಆಯ್ಕೆ
ಕೊರೊನಾ ವಾರಿಯರ್: ಕೇರಳದ ಮಕ್ಕಳನ್ನು ಕುಟುಂಬ ಸೇರಿಸಿದ ಎಎಸ್ಐ ಸಂತೋಷ್
ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಸೋಮನಗೌಡ ಚೌಧರಿ ಆಯ್ಕೆ
ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ರಂಜನ್ ಕುಮಾರ್ ಆಯ್ಕೆ