ಮಂಗಳೂರು: ವಿವಿಧ ಕಳವು ಪ್ರಕರಣ ; ಮೂವರು ಆರೋಪಿಗಳ ಬಂಧನ; ರೂ. 4.55 ಲಕ್ಷ ಮೌಲ್ಯದ ಸೊತ್ತು ವಶ

Spread the love

ಮಂಗಳೂರು: ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾದ ಮೂರು ಮಂದಿ ಕಳ್ಳರನ್ನು ಪಾಂಡೇಶ್ವರ ಠಾಣಾ ಪೋಲಿಸರು ಸಪ್ಟೆಂಬರ್ 15 ರಂದು ಮಂಗಳೂರು  ಸೆಂಟ್ರಲ್ ರೈಲ್ವೇ ಸ್ಟೇಶನ್ ಬಳಿ ಬಂಧಿಸಿ ಸುಮಾರು ರೂ. 4.55 ಲಕ್ಷ ಮೌಲ್ಯ ಬೆಳೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನಿಸ್ಸೀಮರಾದ ಹಾವೇರಿಯ ನಾಗಿನಮಟ್ಟಿ ನಿವಾಸಿ ಕಿರಣ್ (21), ಮಂಗಳೂರು ಬಜ್ಪೆ ಪೊರ್ಕೋಡಿ ನಿವಾಸಿ ಸಂದೀಪ್(23) ಹಾಗೂ ತಮಿಳುನಾಡಿನ ಅಶೋಕ್ ಕುಮಾರ್ (28) ಎಂದು ಗುರುತಿಸಲಾಗಿದೆ.

Pandeshwar-police-attest-thieves

ಆರೋಪಿಗಳ ಪೈಕಿ ಕಿರಣ್  ಮತ್ತು ಅಶೋಕ್ ಕುಮಾರ್ ರವರು ಟೆಂಟ್ ವಾಸಿಗಳಾಗಿದ್ದು, ಊರೂರು ಅಲೆಯುತ್ತಾ ಅಪರಾಧಗಳನ್ನು ಎಸಗುವ ಪ್ರವೃತ್ತಿಯವರಾಗಿರುತ್ತಾರೆ. ಇವರಿಗೆ ಮಂಗಳೂರಿನಲ್ಲಿ ಸುಮಾರು ನಾಲ್ಕೈದು ವರ್ಷಗಳ ಹಿಂದೆ   ಆರೋಪಿ ಸಂದೀಪ್ ನ ಪರಿಚಯವಾಗಿರುತ್ತದೆ.  ಬಳಿಕ ಇವರುಗಳು ಗುಜುರಿ ಹೆಕ್ಕುವ ನೆಪದಲ್ಲಿ ಊರೂರು ಅಲೆದಾಡಿ ಹಗಲು ಸಮಯ ಜನರು ವಾಸ್ತವ್ಯವಿಲ್ಲದ ಮನೆಯನ್ನು ಹಾಗೂ ದೈವಸ್ಥಾನಗಳನ್ನು ಗುರುತಿಸಿ, ರಾತ್ರಿ ಸಮಯ ಸದ್ರಿ ಮನೆ ಹಾಗೂ ದೈವಸ್ಥಾನಗಳ  ಬಾಗಿಲುಗಳನ್ನು ಒಡೆದು ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು  ಕಳ್ಳತನ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಆರೋಪಿಗಳಾದ ಕಿರಣ್ ಹಾಗೂ ಸಂದೀಪ್ ಎಂಬವರ ಮೇಲೆ ಮಂಗಳೂರು ಬಂದರು ಠಾಣೆಯಲ್ಲಿ ಹಾಗೂ ಅಶೋಕ್ ಕುಮಾರ್ ನ ಮೇಲೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಈ ಮೊದಲು ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಇವರುಗಳು  ಒಂದು ಪ್ರದೇಶದಲ್ಲಿ  ಕಳ್ಳತನ ಮಾಡಿ, ಬಳಿಕ ರೈಲಿನಲ್ಲಿ  ಬೇರೆ ಊರಿಗೆ ಪಲಾಯನ ಮಾಡುವ ಸ್ವಭಾವದವರಾಗಿರುತ್ತಾರೆ.  ಆರೋಪಿ ಕಿರಣ್ ಕುಮಾರ್ ನ ಅಣ್ಣಂದಿರಾದ ಅಶೋಕ ಹಾಗೂ ಕುಮಾರ ಎಂಬವರು ಕೂಡಾ ಕನ್ನ ಕಳವು ಪ್ರಕರಣಗಳ ಹಳೆ ಆರೋಪಿಗಳಾಗಿದ್ದು, ಕುಮಾರ್ ಪ್ರಸ್ತುತ ಜೈಲಿನಲ್ಲಿರುತ್ತಾನೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಠಾಣೆ, ಸುರತ್ಕಲ್ ಠಾಣೆ, ಪೂರ್ವ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಹಾಸನ ಜಿಲ್ಲೆಯ ಠಾಣೆಗಳಲ್ಲಿ  ವರದಿಯಾದ ಒಟ್ಟು  11 ಕನ್ನ ಕಳವು ಪ್ರಕರಣಗಳನ್ನು ಸಂಬಧಿಸಿ ಬಂಧಿತರಿಂದ, 128 ಗ್ರಾಂ ತೂಕದ ಚಿನ್ನಾಭರಣಗಳು, ತಾಮ್ರದ ಕಟಾರಗಳು-10, ಘಂಟೆಗಳು-5, ಕಾಲುದೀಪ 20, ಲ್ಯಾಪ್ ಟಾಪ್ -2  ಒಟ್ಟು ಸುಮಾರು  4,55,000/- ರೂ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಪೊಲೀಸ್ ಆಯುಕ್ತರಾದ ಶ್ರೀ ,ಎಸ್ ಮುರುಗನ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ ಶಾಂತರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ| ಸಂಜೀವ .ಎಂ ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್,ಆರ್ ಕಲ್ಯಾಣ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿಯರವರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿರುತ್ತಾರೆ. ಆರೋಪಿ ಹಾಗೂ ಸೊತ್ತು ಪತ್ತೆಗೆ ದಕ್ಷಿಣ ಠಾಣಾ ಕಾನೂನು ಸುವ್ಯವಸ್ಥೆಯ ಪಿಎಸ್ಐ ಮಹಮ್ಮದ್ ಶರೀಫ್  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ  ಪತ್ತೆ ವಿಭಾಗದ ಪೊಲೀಸ್  ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ, ಸಿಬ್ಬಂದಿಗಳಾದ, ,ವಿಶ್ವನಾಥ, ಗಂಗಾಧರ, ಧನಂಜಯ, ಸತ್ಯನಾರಾಯಣ  ನೂತನ್ ಕುಮಾರ್,  ಚಂದ್ರಶೇಖರ,  ಪ್ರದೀಪ್ ಕುಮಾರ್ ರೈ ಪುರುಷೋತ್ತಮ,  ಸುನಿಲ್ ಕುಮಾರ್ ಆಕಾಶ ಭವನ,  ವಿಶ್ವನಾಥ ಬುಡೋಳಿ,  ಶರತ್ ಕುಮಾರ್, ನಾಗರಾಜ್, ಬೀಮಪ್ಪ ಉಪ್ಪಾರ್,  ಮಹಿಳಾ ಸಿಬ್ಬಂದಿಗಳಾದ  ವೈಶಾಲಿ, ಜರೀನಾ, ವಿಜಯ ಲಕ್ಷ್ಮಿ, ವಿಜಯ ಗೀತಾ,  ಗಣಕ ಯಂತ್ರ ವಿಭಾಗದ ಮನೋಜ್ ಕುಮಾರ್ ರವರು  ಆರೋಪಿ ಮತ್ತು ಸೊತ್ತು  ಪತ್ತೆಗೆ ಸಹಕರಿಸಿದರು.


Spread the love