ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್: ಆಳ್ವಾಸ್ ಕಾಲೇಜು ಪ್ರಥಮ
ಮೂಡುಬಿದಿರೆ: ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನ್ಮೆಂಟ್ನಲ್ಲಿ ಆಳ್ವಾಸ್ ಕಾಲೇಜು 29 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು 27 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಹಾಗೂ ಉಜಿರೆ ಎಸ್ಡಿಎಂ ಕಾಲೇಜು ಚತುರ್ಥ ಸ್ಥಾನ ಪಡೆಯಿತು.
ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಎಸ್ಡಿಎಮ್ ಕಾಲೇಜಿನ ಸುಗನ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಗಸ್ಟೀನ್, ಬೆಸ್ಟ್ ಆಲ್ರೌಂಡರ್ ಆಗಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಹರೀಶ ದೇವರಾಡಿ, ಬೆಸ್ಟ್ ಎಟೇಕರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವಿಶ್ವಾಸ್ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹೋರಾಟದಿಂದ ಕೂಡಿದ ಸೋಲು ಎಂದೂ ಸೋಲಲ್ಲ. ಸ್ಪರ್ಧೆಯಲ್ಲಿ ಪ್ರಯತ್ನ ಪಡದೆ ಪರಾಭವವನ್ನು ಹೊಂದಿದರೆ ಅದೇ ನಿಜವಾದ ಸೋಲು. ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳನ್ನು ಸದಾ ಪೋಷಿಸಿ, ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ ವಿನಯ್ ಆಳ್ವ, ಡಾ ಹನಾ ಆಳ್ವ, ಆಳ್ವಾಸ್ ಬಿ.ಪಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.