ಮಂಗಳೂರು ವಿವಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಮಂಗಳೂರು: 1980 ರಿಂದ ಸ್ವತಂತ್ರ ನೆಲೆಯಲ್ಲಿ ಆರಂಭವಾದ ಮಂಗಳೂರು ವಿಶ್ವವಿದ್ಯಾಲಯ ಬಹುಬೇಗನೆ ತನ್ನ ಉತ್ತಮ ಕಾರ್ಯ ನಿರ್ವಹಣೆಯಿಂದ ಒಳ್ಳೆಯ ಹೆಸರು ಗಳಿಸಿ ದೇಶ-ವಿದೇಶಗಲ್ಲಿ ಸುದ್ದಿಮಾಡಿತು. ಆದರೆ ಇದೆಲ್ಲವೂ ಅದರ ಗತವೈಭವದ ಸಂಕಥನ. ಮಂಗಳೂರು ವಿ.ವಿ ಇಂದು “ಕರಾವಳಿಗರ ಹೆಮ್ಮೆ”ಯಾಗಿ ಉಳಿದಿಲ್ಲ-ಅಧಿಕಾರದ ದುರ್ಬಳಕೆ, ಸ್ವಜಾತಿ ಹಾಗೂ ಸ್ವಜನಪಕ್ಷಪಾತ, ಸರ್ಕಾರಿ ಹಣದ ಅಪವ್ಯಯ, ಸಂಪನ್ಮೂಲಗಳ ಲೂಟಿ, ಪರೀಕ್ಷಾ ನಿರ್ವಹಣೆಯ ಹೊರಗುತ್ತಿಗೆ, ಅಂಕಪಟ್ಟಿಯ ಹಗರಣ, ದೂರ ಶಿಕ್ಷಣದ ದಂಧೆ, ವಿದೇಶೀ ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣದ ಹೆಸರಿನಲ್ಲಿ ನಡೆಸಿದ ದುವ್ರ್ಯವಹಾರ, ವಿವಿ ಹಣದ ಲೂಟಿಗೆಂದೇ ನಡೆಸುತ್ತಿರುವ ನಿರುಪಯುಕ್ತ “ಓಪನ್ ಹೌಸ್” ನಾಟಕ, ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ ಬೇಕಾಬಿಟ್ಟಿ ನೇಮಕಾತಿಗಳು. ಇತ್ತೀಚಿನ 2-3 ವರ್ಷಗಳಲ್ಲಿ ನಡೆದ ಈ ಎಲ್ಲಾ ಕುಖ್ಯಾತ ಘಟನೆಗಳ ಬಗ್ಗೆ ಪ್ರತಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಹಲವು ಬಾರಿ ಸುದ್ದಿ ಪ್ರಕಟವಾಗಿದ್ದು ವಿವಿಯ ಪ್ರತಿμÉ್ಠಗೆ ಬಾರೀ ಧಕ್ಕೆಯಾಗಿದೆ. ಇದಕ್ಕೆ ಕಾರಣರಾದ ಹಾಗೂ ಈ ಹಗರಣಕ್ಕೆ ಭಾಗೀದಾರರಾದ ವಿವಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಆಗ್ರಹಿಸುತ್ತಾ ಈ ಎಲ್ಲಾ ಕರ್ಮಕಾಂಡದ ಕುರಿತು ವಿದ್ಯಾರ್ಥಿ ಪರಿಷತ್ ಕೆಲವೇ ಕೆಲವು ಮಾಹಿತಿಗಳನ್ನು ಮುಂದಿರಿಸುತ್ತಿದೆ.
1. ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಪ್ರಕರಣ ಹಾಗೂ ವಿಶ್ವವಿದ್ಯಾನಿಲಯದ ವಿವಿಧ ಕಛೇರಿಗಳಿಗೆ ಖರೀದಿಸಲಾದ ಡೆಸ್ಕ್ಟಾಪ್ ಹಗರಣ:
ಸರಕಾರದ ಆದೇಶದಂತೆ ಪರಿಶಿಷ್ಟಜಾತಿ / ಪಂಗಡದ ವಿದ್ಯಾರ್ಥಿಗಳಿಗೆ ನೀಡಲು 2.5 ಕೋಟಿ ರೂ ಮೊತ್ತದಲ್ಲಿ ಖರೀದಿಸಿದ್ದ ಪ್ರತೀ ಲ್ಯಾಪ್ಟಾಪ್ನ ಮೂಲದರವು 26,000ರೂ ಗಳಷ್ಟಿರಬಹುದಾಗಿದ್ದರೂ. ವಿಶ್ವವಿದ್ಯಾನಿಲಯವು ಪ್ರತೀ ಲ್ಯಾಪ್ಟಾಪ್ಗೆ 50,000 ರೂ. ಗೂ ಆಧಿಕ ಹಣವನ್ನು ವಿನಿಯೋಗಿಸಿದೆ, ಈ ಹೆಚ್ಚುವರಿ ಹಣ ಯಾರಿಗೆ ಹೋಗಿದೆ? ಮುಖ್ಯವಾಗಿ ಈ ಲ್ಯಾಪ್ಟಾಪ್ಗಳಲ್ಲಿ ಆಪರೇಟಿಂಗ್ ಸಿಸ್ಟಂ ಮತ್ತು ತಂತ್ರಾಂಶಗಳೇ ಇಲ್ಲವಾಗಿದೆ.ಆ ಬಳಿಕ ನಕಲಿ ತಂತ್ರಾಂಶಗಳನ್ನು ಅಳವಡಿಸಿ ಕೊಡಲಾಗಿದ್ದರೂ, ಈ ಬಗ್ಗೆ ಹೊರ ಜಗತ್ತಿಗೆ ತಿಳಿಸದಂತೆ ಬೆದರಿಕೆಯನ್ನೊಡ್ಡಲಾಗಿದೆ. ಮೇಲಾಗಿ ಲ್ಯಾಪ್ಟಾಪ್ಗಳು ಪದೇ ಪದೇ ಕೆಟ್ಟುಹೋಗುತ್ತಿದ್ದು ಲ್ಯಾಪ್ ಟಾಪ್ನ ಗುಣಮಟ್ಟವನ್ನೇ ಸಂಶಯಿಸುವಂತಿದೆ. ಅಲ್ಲದೆ ಈ ಎಲ್ಲಾ ಗಣಕಯಂತ್ರಗಳು ಕಛೇರಿ/ವಿಭಾಗಗಳಲ್ಲಿ ಅಳವಡಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ? ಎಂಬುದು ದೃಢೀಕರಣಗೊಳ್ಳುವ ಮೊದಲೇ 2.5ಕೋಟಿ ಮೊತ್ತದ ಪಾವತಿಯನ್ನು ಸರಬರಾಜುದಾರರಿಗೆ ಸಂದಾಯ ಮಾಡಲಾಗಿದೆ.
2. ಪರೀಕ್ಷಾ ಗಣಕೀಕರಣದ ವೈಫಲ್ಯದ ನಡುವೆಯೂ ಸಂಬಂಧಪಟ್ಟಸಂಸ್ಥೆಯ ಬಗ್ಗೆ ಮೃದುಧೋರಣೆ ಏಕೆ?
ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳ ಪರೀಕ್ಷಾ ಗಣಕೀಕರಣವನ್ನು ಈ ಹಿಂದೆ ನಿರ್ವಹಿಸುತ್ತಿದ್ದ ಸಂಸ್ಥೆಯ ಕರಾರಿನ ಅವಧಿ ಮುಗಿದ ನಂತರ ಟೆಂಡರ್ ಪ್ರಕ್ರಿಯೆಯಲ್ಲಿ ಬೆಂಗಳೂರು ಮೂಲದ ಹಾಗೂ ಕುಲಪತಿಗಳ ಆಪ್ತವಲಯದ್ದೆಂದು ಹೇಳಲಾದ ಸಂಸ್ಥೆಗೆ ನವೆಂಬರ್ 2015ನೇ ಸಾಲಿನ ಪರೀಕ್ಷಾ ಗಣಕೀಕರಣದ ಗುತ್ತಿಗೆ ನೀಡಲಾಗಿದ್ದು ಸದರಿ ಸಂಸ್ಥೆಯ ಹಲವು ಬಗೆಯ ತಾಂತ್ರಿಕ ಯಡವಟ್ಟಿನಿಂದಾಗಿ ಈಗಾಗಲೇ ಕಾಲೇಜು/ ವಿದ್ಯಾರ್ಥಿಗಳು ಹೈರಾಣಾಗಿದ್ದು ನಿರಂತರವಾಗಿ ಪತ್ರಿಕೆಯಲ್ಲಿ ಈ ಬಗ್ಗೆ ದೂರುಗಳು ಪ್ರಕಟಗೊಳ್ಳುತ್ತಾ ಬಂದಿದೆ ಆದರೆ ತನ್ನ ಆಪ್ತವಲಯದ ಸಂಸ್ಥೆಯಾದ್ದರಿಂದ ಈವರೆಗೂ ಈ ಸಂಸ್ಥೆಯ ಗುತ್ತಿಗೆಯನ್ನು ರದ್ದುಪಡಿಸುವ ನಿರ್ಧಾರಕ್ಕೆ ಕುಲಪತಿಗಳು ಮುಂದಾಗಿಲ್ಲ; ಅದರ ವಿರುದ್ಧ ಕ್ರಮವನ್ನೂ ಕೈಗೊಂಡಿಲ್ಲ ಏಕೆ?
3. ಸಿಸಿಟಿವಿ ಕ್ಯಾಮರಾ ಅಳವಡಿಕೆಯಲ್ಲಿ ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ ಯಾರ ಲಾಭಕ್ಕಾಗಿ?
ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಮೂಲಕ ಚಿತ್ರೀಕರಣದ ನೆಪವೊಡ್ಡಿ ಭದ್ರತೆಯನ್ನು ಬಿಗಿಗೊಳಿಸುವ ನಾಟಕವಾಡಿ ಸಿಸಿ ಕ್ಯಾಮರಾದ ಅವಶ್ಯಕತೆಯನ್ನು ಬಿಂಬಿಸಿ ಕೆಪಿಟಿಪಿ ಕಾಯ್ದೆಯನ್ನು ಗಾಳಿಗೆ ತೂರಿ ತನ್ನ ಆಪ್ತವಲಯದ ಸಂಸ್ಥೆಗೆ ಸಿಸಿ ಕ್ಯಾಮರಾ ಅಳವಡಿಕೆಯ ಆದೇಶವನ್ನು ನೀಡಿದ್ದು ಯಾರು?
4. ಅನಧಿಕೃತ ಹುದ್ದೆಗಳ ನೇಮಕ ಮತ್ತು ಬೇಕಾಬಿಟ್ಟಿ ಸಂಭಾವನೆ, ಸ್ಥಳೀಯರಿಗೆ ಉದ್ಯೋಗ ವಂಚನೆ!
ಅನಧಿಕೃತ ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸಿ, ನಿಯಮಬಾಹಿರ ಸಂಭಾವನೆ ನಿಗದಿ ಮಾಡಿದ್ದು ಯಾರು? ಮತ್ತು ಹೆಚ್ಚಿನ ಎಲ್ಲ ಹುದ್ದೆಗಳಲ್ಲಿ ವಿಶ್ವವಿದ್ಯಾನಿಲಯ ಶೈಕ್ಷಣಿಕ ವ್ಯಾಪ್ತಿಗೊಳಪಟ್ಟ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯ ನಿರುದ್ಯೋಗಿಗಳನ್ನು ನಿರ್ಲಕ್ಷಿಸಿದ್ದು ಯಾಕಾಗಿ? ಅವರು ಪ್ರತಿಭಾಹೀನರೆ ಅಥವಾ ಅಸಮರ್ಥರೆ? ಇಲ್ಲಿನ ಅರ್ಹ-ಪ್ರತಿಭಾವಂತ ಸ್ಥಳೀಯರನ್ನು ಕೈಬಿಟ್ಟು ಮೈಸೂರು, ಮಂಡ್ಯ, ಹಾಸನಭಾಗದ ತನ್ನ ಜಾತಿಬಾಂಧವರನ್ನು ಸೇರ್ಪಡೆಗೊಳಿಸಿ, ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸಲು ಹುನ್ನಾರ ನಡೆಸಿದವರು ಯಾರು? ಇದಕ್ಕಾಗಿ ಈ ಹಿಂದಿನ ಕುಲಪತಿಗಳು “ಕಿಕ್ಬ್ಯಾಕ್” ಪಡೆದುಕೊಂಡಿದ್ದಾರೆಂಬುದು ನಿಜವೇ?
5. ಇಂದಿಗೂ ಉರಿಯದಿರುವ ಸೋಲಾರ್ ಬೀದಿದೀಪ ಹಗರಣ:
ಎಲ್1-ಕನಿಷ್ಠ ದರ ನಮೂದಿಸಿದ ಸಂಸ್ಥೆಯನ್ನು ಕಡೆಗಣಿಸಿ ಎಲ್2-ಎರಡನೇ ಕನಿಷ್ಠ ದರ (ಅರ್ಥಾತ್, ಹೆಚ್ಚಿನ ದರ) ನಮೂದಿಸಿದ ಸಂಸ್ಥೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬೀದಿದೀಪ ಅಳವಡಿಕೆಗೆ ಆದೇಶ ನೀಡಲಾಗಿದೆ. ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ ಹಾಗೆ ಅಳವಡಿಕೆಯಾಗಿರುವ ಬೀದಿ ದೀಪಗಳು ಉರಿಯದಿರುವುದು ಯಾವುದರ ದ್ಯೋತ್ಯಕ? ಇಲ್ಲಿ ಕಾಣಬರುವ ಸೂರ್ಯಕಿರಣಗಳಿಗೆ ಶಕ್ತಿಯೇ ಇಲ್ಲವೇ? ಅಥವಾ ಗುತ್ತಿಗೆದಾರನ ಕಳಪೆ ಕೆಲಸಕ್ಕೆ ಕೈಗನ್ನಡಿಯೇ?
6.ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಮೀರಿಸಿದ ದೂರಶಿಕ್ಷಣ ದಂಧೆ – ಮಂಗಳೂರು ವಿವಿಯಲ್ಲಿ?
ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಕಾರ್ಯಕ್ರಮದಲ್ಲಿ ಯುಜಿಸಿ ನಿಯಮಾವಳಿಯನ್ನು ಉಲ್ಲಂಘಿಸಿ ಕುಲಪತಿಗಳು ತನ್ನ ಕುಟುಂಬದ ಸದಸ್ಯರಿಂದ ನಿರ್ವಹಿಸಲ್ಪಡುತ್ತಿರುವುದೆಂದು ಹೇಳಲಾದ ಎಸ್ಎಸ್ಬಿಇಟಿ (ಸ್ತ್ರೀ ಸಮಾಜ ಬೆಂಗಳೂರು ಎಜುಕೇಷನ್ ಟ್ರಸ್ಟ್) ಚಾಮರಾಜಪೇಟೆಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗೆ ಅಧ್ಯಯನ ಕೇಂದ್ರದ ಮಾನ್ಯತೆ ನೀಡಿದ್ದಾರೆಯೇ? ಆ ಮೂಲಕ ಪರೀಕ್ಷಾ ಅವ್ಯವಹಾರಗಳಿಗೆ ಕುಮ್ಮಕ್ಕು ನೀಡಿ (ಅರ್ಥಾತ್ ಡಿಗ್ರಿ ಸರ್ಟಿಫಿಕೇಟುಗಳ ಮಾರಾಟಕ್ಕೆ ಅವಕಶ ಕಲ್ಪಿಸಿ) ಮತ್ತೊಂದು ಮುಕ್ತವಿಶ್ವವಿದ್ಯಾನಿಲಯದ ಹಗರಣಕ್ಕೆ ವೇದಿಕೆಯನ್ನು ಕಲ್ಪಿಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ ಆಡುವ ಕೆಲಸವನ್ನು ನಡೆಸುತ್ತಿದ್ದಾರೆಯೇ?
7. ಪರೀಕ್ಷಾ ನೋಂದಾವಣೆಯನ್ನು ಹೊರಗುತ್ತಿಗೆ ನೀಡಿದ ಹಗರಣ – ವಿದ್ಯಾರ್ಥಿಗಳಿಗೆ ಬವಣೆ
ಮಂಗಳೂರು ವಿಶ್ವವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳು ವಿ.ವಿ ಗೆ ನೊಂದಾವಣೆಗೊಳಿಸಿದ ನಂತರ ಪಠ್ಯ ಚಟುವಟಿಕೆ, ಪರೀಕ್ಷೆ ನಡೆಸಿ ಫಲಿತಾಂಶ ನೀಡುವುದು ವಿ.ವಿ ಯ ಜವಾಬ್ದಾರಿ. ಈ ಜವಾಬ್ದಾರಿ ನಿರ್ವಹಿಸದೆ ಅತಿ ಮುಖ್ಯವಾದ ಫಲಿತಾಂಶದಂತಹ ಗೌಪ್ಯ ಕೆಲಸವನ್ನು ಹೊರಗುತ್ತಿಗೆ ನೀಡಿರುವುದೇಕೆ? ಇದು ಅಕ್ಷ್ಯಮ್ಯ ತಪ್ಪು. ಅದರಲ್ಲೂ ಪ್ರತಿ ವಿದ್ಯಾರ್ಥಿಯಿಂದ 100 ರಿಂದ 300ರೂ. ಗಳವರೆಗೆ ಸಂಗ್ರಹ ಮಾಡಿ ಕೊಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಸಾವಿರಾರು ವಿದ್ಯಾಥಿಗಳಿಗೆ ತಪ್ಪು ಅಂಕಪಟ್ಟಿ ನೀಡಿದ್ದಲ್ಲದೆ, ಪರೀಕ್ಷೆ ಬರೆಯದವರಿಗೂ ಅಂಕಪಟ್ಟಿ ನೀಡಿರುವುದು ನಮ್ಮ ವಿಶ್ವವಿದ್ಯಾಲಯದ ಗೌರವವನ್ನು ಬೀದಿಗೆ ಬರುವಂತೆ ಮಾಡಿದೆ. ಅಂಕಪಟ್ಟಿ ದೋಷದಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಉದ್ಯೋಗ ಸಂಬಂಧಿ ಕೆಲಸಕ್ಕೂ ತೊಡಕಾಗಿರುವುದಕ್ಕೆ ಯಾರು ಹೊಣೆ? ಈ ಹೊಣೆಗೇಡಿಗಳಿಗಿಲ್ಲವೆ ಶಿಕ್ಷೆ?
8. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣದಲ್ಲಿ ಅವ್ಯವಹಾರ:
ನಿಕಟಪೂರ್ವ ಕುಲಪತಿಗಳಾದ ದಿವಂಗತ ಟಿ ಸಿ ಶಿವಶಂಕರಮೂರ್ತಿಯವರ ನಿವೃತ್ತಿಯ ನಂತರ ವಿಶ್ವವಿದ್ಯಾನಿಲಯಕ್ಕೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಮದುಮಾಡಿಕೊಂಡು ಅವರಿಂದ ಲಕ್ಷಗಟ್ಟಲೆ ಹಣ ಸಂದಾಯ ಮಾಡಿಕೊಂಡು, ಅವರ ಓಲೈಕೆಗಾಗಿ ಸುಮಾರು 55 ಕೋಟಿ ರೂ ವೆಚ್ಚದ ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯದ ನಿರ್ಮಾಣದ ಕಾರ್ಯಾರಂಭವಾಗಿದೆ. ಕಾಮಗಾರಿಯ ಟೆಂಡರ್ನ ಮಾಹಿತಿಯನ್ನು ಸೋರಿಕೆ ಮಾಡಿ ಕುಲಪತಿಗಳು ನಿರ್ಣಯಿಸಿದ ಮತ್ತು ಅವರ ಆಪ್ತವಲಯದ ಪ್ರಭಾವಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ನಿರ್ಮಾಣದ ಆದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ ಕಾಮಗಾರಿ ಪ್ರಾರಂಭವಾಗುವ ಮೊದಲೇ ಬಹು ಕೋಟಿಯ ಬೃಹತ್ ಮೊತ್ತವು ಮುಂಗಡ ಪಾವತಿಯ ರೂಪದಲ್ಲಿ ಈ ಹಿಂದಿನ ಕುಲಪತಿಗಳ ಜೇಬುಸೇರಿದೆ (ಅಂದರೆ ಒಟ್ಟು ಯೋಜನೆಯ ಶೇಕಡ 10% ಕಮಿಷನ್) ಎಂಬ ಸುದ್ದಿ ದಟ್ಟೈಸಿಕೊಂಡಿದ್ದು ಅದು ನಿಜವೇ?
9. ಓಪನ್ ಹೌಸ್À ಹಗರಣ – ನಿರುಪಯುಕ್ತವಾದ ‘μÉೂೀ’:
ಶೈಕ್ಷಣಿಕ ವರ್ಷದ ಆರಂಭದಲ್ಲಿ ಪದವಿಯ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ವಿಭಾಗಗಳಿಗೆ ಸೆಳೆಯಲು ವಿಶ್ವವಿದ್ಯಾನಿಲಯವು ಎರಡು ದಿನಗಳ ಓಪನ್ ಹೌಸ್ (ತೆರೆದ ಮನೆ) ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ಯೋಜಿಸಿಕೊಂಡು ಬರುತ್ತಿದೆ. ನಾಲ್ಕಾರು ಲಕ್ಷ ಸಾಕಾಗುವ ಈ ಕಾರ್ಯಕ್ರಮಕ್ಕೆ ಸುಮಾರು 1 ಕೋಟಿಗೂ ಅಧಿಕದ ಬೃಹತ್ ಮೊತ್ತಕ್ಕೆ ಅಕ್ರಮ ಬಿಲ್ಲುಗಳನ್ನು ತಯಾರಿಸಿ ವಿಶ್ವವಿದ್ಯಾನಿಲಯದ ಆರ್ಥಿಕ ಸಂಪತ್ತನ್ನು ಲೂಟಿಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಯಾವ ಪುರುμÁರ್ಥಕ್ಕಾಗಿ? ಇಷ್ಟು ಖರ್ಚು ಮಾಡಿಯೂ ಇದರಿಂದ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಯಾವುದೇ ಹೆಚ್ಚಳ ಕೂಡ ಕಂಡುಬಂದಿಲ್ಲ.
10. ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಮತ್ತು ತಾತ್ಕಾಲಿಕ ಡಿ ಗ್ರೂಪ್ಗಳ ಹೊರಗುತ್ತಿಗೆ ಅಕ್ರಮಗಳ ಸರಮಾಲೆ:
ಕುಲಪತಿಗಳು ತನ್ನ ಜಾತಿಬಾಂಧವರೆಂದು ಹೇಳಲಾದ ಶ್ರೀ ಬಾಲಕೃಷ್ಣ ನಿಂಗೇಗೌಡ ಅವರ ಮಾಲಕತ್ವದ ಕ್ಯಾನಾನ್ ಸೆಕ್ಯೂರಿಟಿ ಸರ್ವಿಸಸ್, ಮೈಸೂರು, ಇವರಿಗೆ 2015-16, 2016-17 ಮತ್ತು 2017-18ನೇ ಸಾಲಿಗೆ ಸತತ ಮೂರುಬಾರಿ ಅದೇಶನೀಡಿ (ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಸೋರಿಕೆ ನಡೆಸಿ) ಅಕ್ರಮ ಎಸಗಿರುವುದು ನಿಜವೇ? ಸದರಿ ಸಂಸ್ಥೆಯವರು ಕಾರ್ಮಿಕ ಕಾಯ್ದೆಯ ಅನ್ವಯ ಸಿಬ್ಬಂದಿಗಳಿಗೆ ನೀಡಬೇಕಾದ ಭವಿಷ್ಯ ನಿಧಿ, ಮತ್ತಿತರ ಭತ್ಯೆಗಳನ್ನು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದರೂ ಸಿಬ್ಬಂದಿಗಳಿಗೆ ನೀಡದೆ ಅನ್ಯಾಯ ಮಾಡಿದ್ದಾರೆನ್ನಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡಿದ ಹಲವು ಬಡ ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಿದ್ದು ಮಾತ್ರವಲ್ಲದೆ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಮುಂದೆ ನಡೆದ ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತರಗಳನ್ನು ನಡೆಸಿದ್ದಾರೆ.
“ವಿ.ವಿ ಉಳಿಸಿ” ಹೋರಾಟದ ನಮ್ಮ ಬೇಡಿಕೆಗಳು:
1. ಈ ಮೇಲೆ ಉಲ್ಲೇಖಿಸಿದ ಎಲ್ಲಾ ಹಗರಣಗಳ ಸತ್ಯಾ ಸತ್ಯೆಯನ್ನು ಪರಿಶೀಲಿಸಲು ನಿಷ್ಟಕ್ಷಪಾತವಾದ, ಉನ್ನತ ಮಟ್ಟದ ಸಮಿತಿಯನ್ನು ತಕ್ಷಣ ರಚಿಸಬೇಕು.
2. ಅದು ಕ್ಲಪ್ತ ಅವದಿಯೊಳಗೆ (ಗರಿಷ್ಟ 3 ತಿಂಗಳು) ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮಾಡುವುದು
3. ಸದರಿ ಹಗರಣಗಳಲ್ಲಿ ಭಾಗಿಗಳಾಗಿದ್ದವರು ಅದೆμÉ್ಟೀ ಉನ್ನತ ಸ್ತರದ ಅಧಿಕಾರಿಗಳಾಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತಹ ಸಂದೇಶ ರವಾನಿಸಬೇಕು.
ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ವಿಶ್ವವಿದ್ಯಾನಿಲಯದ ಘನತೆಯನ್ನು ಉಳಿಸಬೇಕೆಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಲ್ಲಿ ವಿದ್ಯಾರ್ಥಿ ಪರಿಷತ್ ವಿನಂತಿಸಿಕೊಳ್ಳುತ್ತದೆ. ಸತ್ಯ ಮತ್ತು ನ್ಯಾಯದ ಸ್ಥಾಪನೆಯಲ್ಲಿ ಸನ್ಮಾನ್ಯ ರಾಜ್ಯಪಾಲರು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ.