Home Mangalorean News Kannada News ಮಂಗಳೂರು ವಿಶ್ವವಿದ್ಯಾನಿಲಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು ವಿಶ್ವವಿದ್ಯಾನಿಲಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Spread the love

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಪ್ರಾರಂಭಗೊಂಡು ಇಂದಿಗೆ ಸರಿಸುಮಾರು 34 ವರ್ಷಗಳು ಕಳೆಯುತ್ತಾ ಬಂದಿದ್ದು ವರ್ಷದಿಂದ ವರ್ಷಕ್ಕೆ ದೈಹಿಕ ಶಿಕ್ಷಣ ಹಾಗೂ ಕ್ರೀಡಾರಂಗದಲ್ಲಿ ವಿಶ್ವವಿದ್ಯಾನಿಲಯದ ಕೀರ್ತಿ ಬಾನೆತ್ತರಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಬಹಳಷ್ಟು ಸಾಧನೆ ಮಾಡಿದ ಕ್ರೀಡಾಪಟುಗಳಲ್ಲಿ ಕೆಲವರನ್ನು ಹೆಸರಿಸುವುದಾದರೆ, ಒಲಿಂಪಿಯನ್ ವಂದನಾರಾವ್, ಸಹನಾ ಕುಮಾರಿ, ಎಂ.ಆರ್. ಪೂವಮ್ಮ ಅಂತರ್ ರಾಷ್ಟ್ರೀಯ ಕ್ರೀಡಾ ಪಟುಗಳಾದ ಹರ್ಷಿಣಿÂ ಕುಮಾರಿ, ಅಶೋಕ್ ಕೆ.ಎಸ್, ಶ್ರೀಮಾ ಪ್ರಿಯದರ್ಶಿನಿ, ಪುಷ್ಪರಾಜ್ ಹೆಗ್ಡೆ, ಪ್ರಿಯಾಂಕ ಕಲಗಿ, ಅನಿಕೇತ್ ಡಿಸೋಜ, ಧಾರುಣ್, ಅರ್ಜುನ್ ಪ್ರಶಸ್ತಿ ವಿಜೇತರಾದ ಸತೀಶ್ ರೈ, ಮಮತಾ ಪೂಜಾರಿ, ವಂದನಾ ರಾವ್, ಎಂ. ಆರ್. ಪೂವಮ್ಮ, ವಿಶ್ವವಿದ್ಯಾನಿಲಯದ ಕೂಟದ ದಾಖಲೆ ಮಾಡಿದ ಗುರುನಾಥ ಕಲ್ಯಾಣಿ, ಜಮಾಲುದ್ದೀನ್, ದೇಹದಾರ್ಢ್ಯ ಪಟುಗಳಾದ ಅನಿಲ್, ಸನಾಲ್ ಪದ್ಮನಾಭ, ಅಥ್ಲೀಟ್ ವಿಕಾಸ್ ಪುತ್ರನ್, ಜಾಯ್‍ಲಿನ್ ಲೋಬೋ, ವೀರೇಂದ್ರ, ಕಬಡ್ಡಿಯ ಉದಯ ಚೌಟ, ಪವರ್ ಲಿಫ್ಟರ್ ನೇಹಾ ಎಚ್. ಹೀಗೆ ಹತ್ತು ಹಲವು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ ಕೀರ್ತಿ ಮಂಗಳೂರು ವಿಶ್ವವಿದ್ಯಾನಿಲಯದ್ದು.

ನಮ್ಮ ವಿಶ್ವವಿದ್ಯಾನಿಲಯದ ಕ್ರೀಡಾಪಟುಗಳು ಈ ಬಾರಿ ದಕ್ಷಿಣ ಭಾರತ ಮಟ್ಟದಲ್ಲಿ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ.

2015-2016ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ಕ್ರೀಡಾಪಟುಗಳ ಸಾಧನೆ:

ಅಕ್ಟೋಬರ್ 11, 2015ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಆಳ್ವಾಸ್ ಕಾಲೇಜು ಮೂಡಬಿದ್ರಿ ಇಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಓಟದಲ್ಲಿ ಪುರುಷರು ಚಿನ್ನದ ಪದಕ, ಮಹಿಳೆಯರು ಬೆಳ್ಳಿಯ ಪದಕ ಪಡೆದಿರುತ್ತಾರೆ.

ಅಕ್ಟೋಬರ್ 15 ರಿಂದ 19, 2015ರ ವರೆಗೆ ಕುವೆಂಪು ವಿಶ್ವವಿದ್ಯಾನಿಲಯ ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾವಳಿಯ ನಮ್ಮ ತಂಡವು ಪ್ರಥಮ ಸ್ಥಾನವನ್ನು ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಬನಾರಸ್ ಇಲ್ಲಿ ನವೆಂಬರ್ 01 ರಿಂದ 05, 2015 ರವರೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕೂಡಾ ಉತ್ತಮ ಪ್ರದರ್ಶನವನ್ನು ನೀಡಿರುತ್ತಾರೆ.

ನವೆಂಬರ್ 02 ರಿಂದ 06, 2015ರವರೆಗೆ ಮೈಸೂರು ವಿಶ್ವವಿದ್ಯಾನಿಲಯ ಇಲ್ಲಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಮಹಿಳೆಯರ ಹಾಕಿ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯ, ರೊಹತಕ್, ಹರ್ಯಾಣ ಇಲ್ಲಿ ಮಾರ್ಚ್ 17 ರಿಂದ 23, 2016ರವರೆಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

ಡಿಸೆಂಬರ್ 28, 2015 ರಿಂದ ಜನವರಿ 03, 2016 ರವೆರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಅಥ್ಲೀಟ್‍ಗಳು ಪಂಜಾಬಿ ಯೂನಿವರ್ಸಿಟಿ, ಪಾಟಿಯಾಲ ಇಲ್ಲಿ ನಡೆದ ಪಂದ್ಯಾವಳಿಯಲ್ಲಿ ಈ ಬಾರಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ಅಂತರ ವಿಶ್ವವಿದ್ಯಾನಿಲಯ ಅಥ್ಲೀಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 8 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಈ ಕ್ರೀಡಾಕೂಟದಲ್ಲಿ ನಮ್ಮ ವಿಶ್ವವಿದ್ಯಾನಿಲಯವು ಸಂಪೂರ್ಣ ತಂಡ ಪ್ರಶಸ್ತಿಯಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪುರುಷರ ತಂಡ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮತ್ತು ಮಹಿಳೆಯರ ತಂಡ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ

ಜನವರಿ 2 ರಿಂದ 6, 2016ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಬಾಲ್ ಬ್ಯಾಡ್‍ಮಿಂಟನ್ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಚಿನ್ನದ ಪದಕವನ್ನು ಪಡೆದಿರುತ್ತದೆ.

ಜನವರಿ 11 ರಿಂದ 14, 2016ರ ವರೆಗೆ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ, ಗುಂಟೂರು ಇಲ್ಲಿ ನಡೆದ ಅಖಿಲ ಭಾರತ ಅಂತರ್‍ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಪವರ್ ಲಿಫಿû್ಟಂಗ್, ವೆಯ್ಟ್ ಲಿಫಿû್ಟಂಗ್ ಹಾಗೂ ದೇಹದಾರ್ಢ್ಯ ಕ್ರೀಡಾಪಟುಗಳು ದೇಹಧಾರ್ಢ್ಯ ಸ್ಪರ್ಧೆಯಲ್ಲಿ ‘ಮಿ. ಇಂಡಿಯನ್ ಯೂನಿವರ್ಸಿಟಿ’ ಎಂಬ ಬಿರುದನ್ನು ಪಡೆದ ಹೆಮ್ಮೆ ನಮ್ಮ ಕ್ರೀಡಾಪಟುವಿನದು. ಪುರುಷರ ವೆಯ್ಟ್ ಲಿಫ್ಟಿಂಗ್‍ನಲಿ ಮತ್ತು ದೇಹಾಧಾರ್ಢ್ಯ ಸ್ಪರ್ಧೆಯಲ್ಲಿ ತಲಾ ಒಂದು ಚಿನ್ನದ ಪದಕ, ಮಹಿಳೆಯರ ಪವರ್ ಲಿಫ್ಟಿಂಗ್‍ನಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಜನವರಿ 18 ರಿಂದ ಜನವರಿ 22, 2016ರವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಕುಸ್ತಿ ಪಂದ್ಯಾಟದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಮಹಿಳಾ ಕುಸ್ತಿಪಟುಗಳು ಕ್ರಮವಾಗಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಪಡೆದು ಸಾಧನೆ ಮಾಡಿರುತ್ತಾರೆ ಹಾಗೂ ಈ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರ ತಂಡವು ಚತುರ್ಥ ಸ್ಥಾನವನ್ನು ಪಡೆದಿದೆ.

ಮಾರ್ಚ್ 14 ರಿಂದ 19, 2016 ರವರೆಗೆ ಪಂಜಾಬ್ ಯೂನಿವರ್ಸಿಟಿ, ಚಂಢಿಗಢ ಇಲ್ಲಿ ನಡೆದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಪುರುಷರ ಹಾಗೂ ಮಹಿಳೆಯರ ತಂಡಗಳು ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಸೂಪರ್ ಲೀಗ್ ಹಂತಕ್ಕೆ ತಲುಪಿ, ಮಹಿಳೆಯರ ತಂಡ ತೃತೀಯ ಸ್ಥಾನವನ್ನು, ಪುರುಷರ ತಂಡ ಚತುರ್ಥ ಸ್ಥಾನವನ್ನು ಪಡೆದು ಉತ್ತಮ ಪ್ರದರ್ಶನವನ್ನು ನೀಡಿದೆ.

ಜನವರಿ 27 ರಿಂದ 31, 2016 ರವರೆಗೆ ಅಣ್ಣಾಮಲೈ ಯೂನಿವರ್ಸಿಟಿ, ಚಿದಂಬರಮ್ ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಖೋ_ಖೋ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. ಫೆಬ್ರವರಿ 23ರಿಂದ 26, 2016 ರವರೆಗೆ ಅಮಿಟಿ ಯೂನಿವರ್ಸಿಟಿ, ಉತ್ತರ ಪ್ರದೇಶ, ಇಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಿರುತ್ತದೆ.

ಫೆಬ್ರವರಿ 05 ರಿಂದ 15, 2016ರವರೆಗೆ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯ, ತಮಿಳುನಾಡು, ಚೆನ್ನೈ ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಹಿಳೆಯರ ಕಬಡ್ಡಿ ತಂಡವು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಜೊತೆಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕೂಡಾ ಉತ್ತಮ ಪ್ರದರ್ಶನವನ್ನು ನೀಡಿರುತ್ತಾರೆ.

ಫೆಬ್ರವರಿ 23 ರಿಂದ 27, 2016ರವರೆಗೆ ಎಸ್.ಆರ್.ಎಂ. ವಿಶ್ವವಿದ್ಯಾನಿಲಯ ಚೆನ್ನೈನಲ್ಲಿ ನಡೆದ ನಮ್ಮ ವಿಶ್ವವಿದ್ಯಾನಿಲಯದ ಮಹಿಳೆಯರ ಬಾಲ್‍ಬ್ಯಾಡ್‍ಮಿಂಟನ್ ತಂಡವು ಅಖಿಲ ಭಾರತ ಮಟ್ಟದ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ದಾಖಲಾತಿಯನ್ನು ಮಾಡಿದೆ.

ಬಹಳಷ್ಟು ಸಾಧನೆಗೈದ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಪಟುಗಳನ್ನು ವರ್ಣರಂಜಿತ ಕಾರ್ಯಕ್ರಮದಲ್ಲಿ ಮಾರ್ಚ್ 31, 2016ರಂದು ಮಧ್ಯಾಹ್ನ 2.00 ಗಂಟೆಗೆ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಗೌರವಿಸಲಾಗುವುದು. ಆ ದಿನ ನಡೆಯುವ ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವೈಯಕ್ತಿಕ ನೂತನ ದಾಖಲೆ ಮಾಡಿದ ಕ್ರೀಡಾಪಟುಗಳಿಗೆ ರೂ. 30,000/- ನಗದು, ವೈಯಕ್ತಿಕ ಚಿನ್ನದ ಪದಕವನ್ನು ಪಡೆದವರಿಗೆ ರೂ. 25,000/-, ಬೆಳ್ಳಿಯ ಪದಕವನ್ನು ಪಡೆದವರಿಗೆ ರೂ. 20,000/- ಹಾಗೂ ಕಂಚಿನ ಪದಕವನ್ನು ಪಡೆದವರಿಗೆ ರೂ. 15,000/- ಮತ್ತು ತಂಡದ ಆಟಗಾರರಿಗೆ ಪ್ರತಿಯೊಬ್ಬರಿಗೂ ಪ್ರಥಮ ಸ್ಥಾನಕ್ಕೆ 7,000/-, ದ್ವಿತೀಯ ಸ್ಥಾನಕ್ಕೆ 5,000/- ಹಾಗೂ ತೃತೀಯ ಸ್ಥಾನಕ್ಕೆ 3,000 ನಗದು ಮತ್ತು ದಕ್ಷಿಣ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 5,000/-, ದ್ವಿತೀಯ ಸ್ಥಾನ ಪಡೆದವರಿಗೆ 3,000/- ಮತ್ತು ಮೂರನೇ ಸ್ಥಾನ ಪಡೆದವರಿಗೆ ರೂ. 2,000/- ನಗದು ಮತ್ತು ಪ್ರಶಸ್ತಿ ಪತ್ರಗಳೊಂದಿಗೆ ಗೌರವಿಸಲಾಗುವುದು. ಅಲ್ಲದೆ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರತೀ ಸ್ಪರ್ಧೆಯಲ್ಲೂ ರೂ. 1,000/- ಮೊತ್ತ ಹಾಗೂ ಅಂತರಕಾಲೇಜು ಪುರುಷರ ಹಾಗೂ ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕಾಲೇಜಿಗೆ ರೂ. 10,000/-, ದ್ವಿತೀಯ ಸ್ಥಾನಕ್ಕೆ ರೂ. 6000/-, ತೃತೀಯ ಸ್ಥಾನಕ್ಕೆ ರೂ. 4,000/- ಹಾಗೂ ಅಂತರಕಾಲೇಜುಗಳಲ್ಲಿ ಅಥ್ಲೆಟಿಕ್ಸ್, ವೆಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಸ್ವಿಮ್ಮಿಂಗ್ ಇವುಗಳಲ್ಲಿ ದಾಖಲೆ ಮಾಡಿದ ಕ್ರೀಡಾಪಟುವಿಗೆ ಪ್ರತೀ ಕ್ರೀಡೆಯೊಂದಕ್ಕೆ ತಲಾ ರೂ. 1000/- ಮತ್ತು ಟ್ರೋಫಿಗಳೊಂದಿಗೆ ಗೌರವಿಸಲಾಗುವುದು.

ಈ ಬಾರಿ ಗೌರವಾನ್ವಿತ ಕುಲಪತಿಗಳ ಸಮ್ಮತಿ ಮೇರೆಗೆ ನಗದು ಮೊತ್ತವನ್ನು ಹೆಚ್ಚಿಸುವುದರ ಜೊತೆಗೆ ಅಖಿಲ ಭಾರತ ಮಟ್ಟದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ಕ್ರೀಡಾಪಟುಗಳಿಗೆ ಸಂಪೂರ್ಣ ಸಮವಸ್ತ್ರದ ಜೊತೆಗೆ ವಿಶೇಷವಾಗಿ ಶೂಗಳನ್ನು ಕ್ರೀಡಾಪಟುಗಳಿಗೆ ನೀಡಲಾಗುವುದು.

ನಮ್ಮ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪೆÇ್ರಫೆಸರ್ ಕೆ. ಭೈರಪ್ಪರವರ ಅಧ್ಯಕ್ಷತೆಯಲ್ಲಿ ಅಂತರ್ ರಾಷ್ಟ್ರೀಯ, ಅಂತರ್ ವಿಶ್ವವಿದ್ಯಾನಿಲಯ ಮತ್ತು ಅಂತರ್ ಕಾಲೇಜು ಕ್ರೀಡಾಕೂಟಗಳಲ್ಲಿ ಸಾಧನೆ ಗೈದ ಕ್ರೀಡಾ ಸಾಧಕರಿಗೆ ಸನ್ಮಾನಿಸುವ ಸಮಾರಂಭವು ದಿನಾಂಕ 31.03.2016ರಂದು ಸಮಯ ಮಧ್ಯಾಹ್ನ 2.00 ಗಂಟೆಗೆ ಸರಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಜರುಗಲಿರುವುದು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಹಾಕಿ ಕ್ರೀಡಾ ಪಟು ಅರ್ಜುನ್ ಹಾಲಪ್ಪ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಹಾಸ್ಯ ಕಲಾವಿದರಾದ ಪೆÇ್ರಫೆಸರ್ ಕೃಷ್ಣೇಗೌಡ, ಪ್ರಾಂಶುಪಾಲರು, ಸೈಂಟ್ ಫಿಲೋಮಿನಾ ಕಾಲೇಜು, ಮೈಸೂರು ಮತ್ತು ಪೆÇ್ರ. ಕಬಡ್ಡಿ ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ ಮತ್ತು ಸಚಿನ್ ಸುವರ್ಣ ಇವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವರು.

ಅಂತರ್ ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ಇವರಿಂದ ಏಕ ಪಾತ್ರಾಭಿನಯ, ನಾಟಕ, ಎಸ್‍ಡಿಎಮ್ ಕಾಲೇಜು, ಉಜಿರೆ ಇವರಿಂದ ಜಾನಪದನೃತ್ಯಗಳು, ರಂಗೋಲಿ ಹಾಗೂ ಚರ್ಚೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿರುವುದು.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಂತರ ಸಾಯಂಕಾಲ ಗಂಟೆ 6ರಿಂದ ವಿಶೇಷ ಮನರಂಜನೆ ಕಾರ್ಯಕ್ರಮ ನಡೆಯಲಿರುವುದು. ಪೆÇ್ರ. ಕೃಷ್ಣೇಗೌಡ ಇವರು ಹಾಸ್ಯ ಲಹರಿ ಕಾರ್ಯಕ್ರಮ ನೀಡಲಿರುವರು.

ಅಲ್ಲದೆ ಕ್ರೀಡಾಪಟುಗಳ ಸಾಧನೆಗೆ ಬಹಳಷ್ಟು ಪೆÇ್ರೀತ್ಸಾಹ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಮತ್ತು ತರಬೇತಿದಾರರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಹತ್ತು ಹಲವು ಬದಲಾವಣೆಗಳೊಂದಿಗೆ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳೊಂದಿಗೆ ಮುಂದಿನ ದಿನಗಳಲ್ಲಿ ಕ್ರೀಡಾ ಪಟುಗಳಿಗೆ ಇನ್ನು ಹೆಚ್ಚಿನ ವ್ಯವಸ್ಥೆಯನ್ನು ರೂಪಿಸುವ ಭರವಸೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಮುನ್ನಡೆಯಲಿದೆ.


Spread the love

Exit mobile version