ಮಂಗಳೂರು: ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು, ಸಿಸಿಬಿ ಪೋಲಿಸರಿಂದ ಐವರ ಬಂಧನ

Spread the love

ಮಂಗಳೂರು: ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸುತ್ತಿದ್ದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೋಲಿಸರು ಗುರುವಾರ ನಗರದ ವೆಲೆನ್ಸಿಯಾ ಸೈಂಟ್ ಜೋಸೆಫ್ ನಗರಕ್ಕೆ ಹೋಗುವ ದ್ವಾರದ ಬಳಿಯಲ್ಲಿ   ಬಂಧಿಸಿದ್ದಾರೆ.

Desktop1 Desktop2 Desktop3

ಬಂಧಿತರನ್ನು ಸಂತೋಷ್ ಕುಮಾರ್, (19), ಗೌತಮ್, (19), ನಿತಿನ್ ಕುಮಾರ್, (24), ಧೀರಜ್, (24), ಧನರಾಜ್,  (19) ಎಂದು ಗುರುತಿಸಲಾಗಿದೆ.

ಬಂಧಿತರು ಜುಲೈ 30 ರಂದು ಮಂಗಳೂರು ನಗರದ ವೆಲೆನ್ಸಿಯಾ ಸೈಂಟ್ ಜೋಸೆಫ್ ನಗರಕ್ಕೆ ಹೋಗುವ ದ್ವಾರದ ಬಳಿಯಲ್ಲಿ  ಕೆಎ-19-ಡಿ-8576 ಸ್ಕಾರ್ಪಿಯೋ ವಾಹನದಲ್ಲಿ  ಯಾವುದೋ ದುಷ್ಕೃತ್ಯವನ್ನು ನಡೆಸಲು ತಿರುಗಾಡುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಮಂಗಳೂರು ನಗರದ ಸಿಸಿಬಿ ಪೊಲೀಸರು ಧಾಳಿ ಮಾಡಿ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಆರೋಪಿಗಳು ತಲವಾರು, ಕಬ್ಬಿಣದ ರಾಡ್ ಗಳನ್ನು ಹೊಂದಿಕೊಂಡು ವೆಲೆನ್ಸಿಯಾ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿ ತಿರುಗಾಡುತ್ತಿದ್ದರು ಎನ್ನಲಾಗಿದ್ದು, ಆರೋಪಿತರುಗಳಿಂದ ಒಂದು ಸ್ಕಾರ್ಪಿಯೋ ಕಾರು, 2 ತಲವಾರು, ಕಬ್ಬಿಣದ ರಾಡ್-1,  ಹಾಗೂ 3  ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳ ಪೈಕಿ ಸಂತೋಷ್ ಕುಮಾರ್ ಎಂಬಾತನು ಈ ಹಿಂದೆ 2014 ನೇ ಇಸವಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಫರಾಜ್, ಶಾರೂಕ್, ಅಫೀಸ್ ಎಂಬವರ ಜೊತೆ ಸೇರಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆ ಮಾಡಿದ್ದನು. ಈ ಪ್ರಕರಣದಲ್ಲಿ ದಸ್ತಗಿರಿಯಾಗಿ 4 ತಿಂಗಳು  ನ್ಯಾಯಾಂಗ ಬಂಧನದಲ್ಲಿದ್ದನು. ಮೇಲ್ಕಂಡ ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.-ಕೆ.ಎಂ. ಶಾಂತರಾಜು,  ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love