Home Mangalorean News Kannada News ಮಂಗಳೂರು: ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: 498 ವಾಹನಗಳಿಂದ ಟಿಂಟ್ ತೆರವು

ಮಂಗಳೂರು: ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: 498 ವಾಹನಗಳಿಂದ ಟಿಂಟ್ ತೆರವು

Spread the love

ಮಂಗಳೂರು: ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: 498 ವಾಹನಗಳಿಂದ ಟಿಂಟ್ ತೆರವು

ಮಂಗಳೂರು: ನಗರ ಪೊಲೀಸ್ ಆಯುಕ್ತರಾದ ಡಾ|ಹರ್ಷಾ ಅವರ ಸೂಚನೆ ಹಾಗೂ ಆದೇಶದ ಮೇರೆಗೆ ನಗರ ಸಂಚಾರ ಅಧಿಕಾರಿಗಳ ನೇತೃತ್ವದ ತಂಡ ನಾಲ್ಕು ದಿನಗಳ ವಿಶೇಷ ಕಾರ್ಯಾಚರಣೆ ನಡೆಸಿ ಸನ್ ಫಿಲ್ಮ್ (ಟಿಂಟ್ ಗ್ಲಾಸ್) ಅಳವಡಿಸಿ ಚಲಾಯಿಸುತ್ತಿದ್ದ 498 ವಾಹನಗಳಿಂದ ಟಿಂಟ್ ಪೇಪರ್ ತೆರವುಗೊಳಿಸಿದ್ದಾರೆ. ಅಲ್ಲದೆ ರೂ 49,800 ದಂಡವನ್ನು ಕೂಡ ವಸೂಲಿ ಮಾಡಿದ್ದಾರೆ.

ವಾಹನಗಳ ಗಾಜುಗಳಿಗೆ ಅಳವಡಿಸಿದ್ದ ಟಿಂಟ್ ಪೇಪರ್ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರತಾಗಿಯೂ ವಾಹನಗಳಿಗೆ ಟಿಂಟ್ ಅಳವಡಿಸುವುದು ಹೆಚ್ಚುತ್ತಿದೆ. ಇದನ್ನರಿತ ಸಂಚಾರ ಎಸಿಪಿ, ಅಧಿಕಾರಿಗಳು ಹಾಗೂ ಸಿಬಂದಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಚಲಾಯಿಸುತ್ತಿದ್ದ 498 ವಾಹನಗಳಿಂದ ಟಿಂಟ್ ಪೇಪರ್ ತೆರವುಗೊಳಿಸಿದ್ದಾರೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಾಹನ ಸವಾರರು ಗಾಜುಗಳಿಗೆ ಕಪ್ಪು ಟಿಂಟ್ ಪೇಪರ್ ಹಾಕುತ್ತಾರೆ. ಆದರೆ ಕೆಲವು ದುಷ್ಕರ್ಮಿಗಳು ಅಪಹರಣ, ಅತ್ಯಾಚಾರ, ದರೋಡೆ ಸಹಿತ ಹಲವು ಅಪರಾಧ ಚಟುವಟಿಕೆಗಳಿಗೆ ಪೂರಕವಾಗಿ ಈ ರೀತಿಯ ಗಾಜನ್ನು ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಹಿನ್ನೆಲೆಯಲ್ಲಿ ವಾಹನಗಳ ಗ್ಲಾಸ್ಗಳಿಗೆ ಟಿಂಟ್ ಬಳಸದಂತೆ ಆದೇಶ ಹೊರಡಿಸಿತ್ತು.


Spread the love

Exit mobile version