ಮಂಗಳೂರು: ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಸಿಸಿಬಿ ಪೋಲಿಸರು ನಾಲ್ಕು ಮಂದಿಯನ್ನು ಅಕ್ಟೋಬರ್ 20 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ರಫೀಕ್, ಪ್ರಾಯ(26), ಅಪ್ರಿಮ್ ಶಿಯಾದ್, ಪ್ರಾಯ(19), ಕೌಶಿಖ್, ನಿಹಾಲ್, ಪ್ರಾಯ(19), ಉಮ್ಮರ್ ಫಾರೂಕ್ ಇರ್ಪಾನ್, ಪ್ರಾಯ(19) ಎಂದು ಗುರುತಿಸಲಾಗಿದೆ.
ಪೋಲಿಸ್ ಮಾಹಿತಿಗಳ ಪ್ರಕಾರ ಮಂಗಳೂರು ನಗರ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ, ಬೈಕ್ ಕಳವು, ದೇವಸ್ಥಾನ ಕಳವು, ಜೈನ ಬಸದಿಯ ಮೂರ್ತಿಗಳ ಕಳವು ದೈವಸ್ಥಾನದಲ್ಲಿ ಕಳವಿಗೆ ಯತ್ನ, ಅಡಿಕೆ ಗೋಡೌನ್ ನಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 6,00,000/ ರೂ ಮೊತ್ತದ ಚಿನ್ನದ ಕರಿಮಣಿ ಸರ ಹಾಗೂ ಚೈನ್ ಹಾಗೂ ರೂ. 9 ಲಕ್ಷ ಮೌಲ್ಯದ 11 ಬೈಕ್ ಹೀಗೆ ಒಟ್ಟು 15 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಜ್ಯಾರಿಯಲ್ಲಿದೆ.
ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಅಧೀಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.