ಮಂಗಳೂರು: ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

Spread the love

 ಮಂಗಳೂರು: ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ದಕ್ಷಿಣ  ಪೊಲೀಸ್  ಠಾಣೆಯಲ್ಲಿ ವರದಿಯಾದ  ಸುಲಿಗೆ ಪ್ರಕರಣದ ಆರೋಪಿಗಳಾದ ಆರೀಫ್ ಮತ್ತು ನಾಸೀರ್    ಎಂಬವರನ್ನು  ದಿನಾಂಕ 06-02-2019 ರಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿ, ಸುಲಿಗೆ ಮಾಡಿದ  ಮೊಬೈಲ್ ,ನಗದು ಹಣ ಹಾಗೂ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್  ಒಟ್ಟು 31,250/-ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬಂಟ್ವಾಳ ಪುದು ಗ್ರಾಮದ ಆರೀಫ್ (27) ಮತ್ತು ಕುಂಬಳೆ ನಿವಾಸಿ ನಾಸಿರ್ (43) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ  : ಪಿರ್ಯಾದಿದಾರರು ಕೇರಳ ರಾಜ್ಯದ ಕಣ್ಣೂರಿಗೆ ಹೋಗುವರೇ ಮಂಗಳೂರು ಸರ್ವಿಸ್ ಬಸ್ಸ್ ನಿಲ್ದಾಣಕ್ಕೆ ಬಂದವರನ್ನು ಇಬ್ಬರೂ ಅಪರಿಚಿತ ವ್ಯಕ್ತಿಗಳು ಪರಿಚಯ ಮಾಡಿಕೊಂಡು ಅವರೊಂದಿಗೆ ಮಲೆಯಾಳಿ ಬಾಷೆಯಲ್ಲಿ ಮಾತನಾಡಿ ಪಿರ್ಯಾದಿದಾರರು ರಿಕ್ಷಾದಲ್ಲಿ ದಕ್ಷಿಣ ಧಕ್ಕೆಯ ಬಳಿ ಕರೆದುಕೊಂಡು ಹೋಗಿ ಗೂಡ್ಸ್ ರೈಲುಗಳು ನಿಲ್ಲುವ ಜಾಗದಲ್ಲಿ ಆಟೋವನ್ನು ನಿಲ್ಲಿಸಿ ಪಿರ್ಯಾದಿದಾರರನ್ನು ರಿಕ್ಷಾದಿಂದ ಇಳಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು  ಹೋಗಿ ಪಿರ್ಯಾದಿದಾರರ ಬಳಿ ಇದ್ದ ಮೊಬೈಲ್,ನಗದು ಹಣ 2000/- ಹಾಗೂ ಸುಮಾರು 08 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟನ್ನು ಬಲತ್ಕಾರವಾಗಿ ಸುಲಿಗೆ ಮಾಡಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರಾದ  ಬೈಜು ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

   ಫೆಬ್ರವರಿ 6 ರಂದು ಈ ಪ್ರಕರಣದ ಆರೋಪಿಗಳು ಮಂಗಳೂರು  ದಕ್ಷಿಣ ಧಕ್ಕೆಯ ಬಳಿ ಇರುವ ಬಗ್ಗೆ ಖಚಿತ ವರ್ತಮಾನ ಪಡೆದ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಕೆ.ಎಂ. ಶರೀಫ್ ರವರು ಸಿಬ್ಬಂದಿಗಳ ಸಹಾಯದಿಂದ ಆರೋಫಿಗಳನ್ನು ದಸ್ತಗಿರಿ ಮಾಡಿ ಸುಲಿಗೆ ಮಾಡಿದ ಮೊಬೈಲ್ ,ನಗದು ಹಣ ಹಾಗೂ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್  ಒಟ್ಟು 31,250/-ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರ್ ವಿ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ  ಪೊಲೀಸ್ ನಿರೀಕ್ಷಕರಾದ   ಕೆ.ಎಮ್, ಶರೀಫ್  ರವರು   ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ  ರಾಜೇಂದ್ರ  ಹಾಗೂ ಠಾಣಾ  ಸಿಬ್ಬಂದಿಗಳ ಸಹಕಾರದಿಂದ ಆರೋಪಿಗಳನ್ನು . ದಸ್ತಗಿರಿ ಮಾಡಿರುವುದಾಗಿದೆ.

.


Spread the love