ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸೂಟರ್ಪೇಟೆ 1ನೇ ಮತ್ತು 2ನೇ ಅಡ್ಡರಸ್ತೆ ಹಾಗೂ 1ನೇ ಎಡರಸ್ತೆ ಕಾಂಕ್ರೀಟಿಕರಣದ ಕಾಮಗಾರಿಯ ಗುದ್ದಲಿ ಪೂಜೆ ಇಂದು ನಡೆಯಿತು.
ಬಳಿಕ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿರುವ ಮುಖ್ಯ ರಸ್ತೆಗಳ ಆಭಿವೃದ್ಧಿಯ ಜೊತೆಜೊತೆಗೆ ಓಳರಸ್ತೆಗಳ ಕಾಂಕ್ರೀಟಿಕರಕ್ಕೆ ಹೆಚ್ಚು ಅದ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಸ್ಥಳೀಯ ಕಾರ್ಪೋರೇಟರ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜೆಸಿಂತಾ ವಿಜಯ ಆಲ್ಪ್ರೇಡ್, ಕಾರ್ಪೋರೇಟರ್ ಆಪ್ಪಿ, ಮುಖಂಡರಾದ ಟಿ.ಕೆ. ಸುಧೀರ್, ರಾಮನಂದ್ ಪೂಜಾರಿ ಮತ್ತೀತ್ತರು ಉಪಸ್ಥಿತರಿದ್ದರು.
ಶಾಸಕರಾದ ಜೆ. ಆರ್. ಲೋಬೊ ರಿಂದ ಕೊಟ್ಟಾರ ಅಡ್ಡರಸ್ತೆ ಹಾಗೂ ಒಳರಸ್ತೆಯ ಉದ್ಘಾಟನೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಮತ್ತು ಪಾಲಿಕೆಯ ಮಹಾಪೌರರಾದ ಜೆಸಿಂತಾ ವಿಜಯ್ ಆಲ್ಪ್ರೇಡ್ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಕೊಟ್ಟಾರ ಅಡ್ಡರಸ್ತೆಗೆ ಹಾಗೂ ಒಳರಸ್ತೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ, ಸ್ಥಳೀಯ ಕಾರ್ಪೋರೇಟರ್ ನಾಗವೇಣಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಬಿ.ಜಿ ಸುವರ್ಣ, ಪದ್ಮನಾಭ ಆಮೀನ್, ಯುವ ಕಾಂಗ್ರೆಸ್ ಮುಖಂಡ ಚೇತನ್ ಕುಮಾರ್, ಟಿ.ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು.