Home Mangalorean News Kannada News ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣೆ: ಕಟೀಲ್ ನಾಯಕತ್ವಕ್ಕೆ ಸತ್ವ ಪರೀಕ್ಷೆ

ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣೆ: ಕಟೀಲ್ ನಾಯಕತ್ವಕ್ಕೆ ಸತ್ವ ಪರೀಕ್ಷೆ

Spread the love

ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣೆ: ಕಟೀಲ್ ನಾಯಕತ್ವಕ್ಕೆ ಸತ್ವ ಪರೀಕ್ಷೆ

ಮಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರ ಸ್ವೀಕರಿಸಿ ಸುಮಾರು 2 ತಿಂಗಳಾಗುತ್ತಾ ಬಂದಿದೆ, ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಕಟೀಲ್ ನಾಯಕತ್ವದ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವ ಸಮಯ ಬಂದಿದೆ.

ನವೆಂಬರ್ 12 ರಂದು ನಡೆಯುವ ಮಂಗಳೂರು ನಗರ ಸಭೆ ಚುನಾವಣೆ ನಡೆಯಲಿದೆ. ಕರಾವಳಿ ಬೆಲ್ಟ್ ನಲ್ಲಿ ಬಿಜೆಪಿ ಪ್ರಾಬಲ್ಯವಿದೆ, ಆದರೆ ನಗರ ಸಭೆ ಚುನಾವಣೆಯಲ್ಲಿ ಹೆಚ್ಚಿನ ಯಶಸ್ವಿಯಾಗಿಲ್ಲ, ಕೇವಲ 2007ರಿಂದ 2017ರ ವರೆಗೆ ಬಿಜೆಪಿ ಪಾಲಾಗಿತ್ತು.

ಕಾಂಗ್ರೆಸ್ ಸೋಲಿಸುವುದರ ಜೊತೆಗೆ ಎಲ್ಲಾ ಬಿಜೆಪಿ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಕಟೀಲ್ ಮೇಲಿದೆ. ಎರಡು ಪಕ್ಷದವರಿಗೊ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ, ಸ್ಥಳೀಯ ವಿಷಯವೇ ಇಬ್ಬರಿಗೂ ಪ್ರಧಾನ ಆದ್ಯತೆ, ಕಳೆದ ಐದು ವರ್ಷಗಳಲ್ಲಿ ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಹೇಳುತ್ತಾ ಬಿಜೆಪಿ ಮತಯಾಚಿಸಲಾಗಿದೆ, ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಹೇಳಿಕೊಳ್ಳಲಿದೆ.

ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಅವರು ನೇಮಿಸಿದ್ದ ಸಿಬ್ಬಂದಿಯನ್ನು ಕಟೀಲ್ ವಜಾಗೊಳಿಸಿದ್ದ ಕಟೀಲಿ ವಿರುದ್ದ ಸೇಡು ತೀರಿಸಿಕೊಳ್ಳಲು ಯಡಿಯೂರಪ್ಪ ಬಣ ಕಾಯುತ್ತಿದೆ, ಯಡಿಯೂರಪ್ಪ ಅವರ ಹಲವು ಅಧಿಕಾರಗಳನ್ನು ಮೊಟಕುಗೊಳಿಸುತ್ತಿರುವ ಬಿಜೆಪಿ, ಬಿಎಲ್ ಸಂತೋಷ್ ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿದ ಮೇಲೆ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ, ಪಕ್ಷದ ರಾಜ್ಯ ಘಟಕವನ್ನು ಕಟೀಲ್ ಮೂಲಕ ನಿಯಂತ್ರಿಸಲು ಸಂತೋಷ್ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ.

ಆರ್ ಎಸ್ ಎಸ್ ಬೆಂಬಲ ಪಡೆಯುತ್ತಿರುವ ಕಟೀಲ್ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿದೆ, ಮೈಸೂರು ಅಥವಾ ಶಿವಮೊಗ್ಗ ಆಗಿದ್ದರೇ ಅಲ್ಲಿನ ವಸ್ತು ಸ್ಥಿತಿಯೇ ಬೇರೆ ಇರುತ್ತಿತ್ತು, ಆದರೆ ಮಂಗಳೂರಿನಲ್ಲಿ ಬಿಜೆಪಿ ಸಾಕಷ್ಟು ಪ್ರಾಬಲ್ಯ ಹೊಂದಿದೆ. ಮಂಗಳೂರು ಬಿಜೆಪಿ ವೋಟ್ ಬ್ಯಾಂಕ್ ಆಗಿದೆ,ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅನಿವಾರ್ಯ, ಏಕೆಂದರೇ ಕಟೀಲ್ ಅವರ ಸಾಮರ್ಥ್ಯ ಪರೀಕ್ಷಿಸುವ ಚುನಾವಣೆ ಇದಾಗಿದೆ ಎಂದು ಹೆಸರು ಹೇಳಲು ಬಯಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಟಿಕೆಟ್ ಗಾಗಿ ಹಲವು ಈಗಾಗಲೇ ಪಕ್ಷಕ್ಕೆ ಸಮಸ್ಯೆಯಾಗಿದ್ದಾರೆ, ಆದರೆ ಇದನ್ನು ಪಕ್ಷದ ನಾಯಕರು ಬಗೆ ಹರಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ, ಅಲ್ಪ ಸಂಖ್ಯಾತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ,

Source : The New Indian Express


Spread the love

Exit mobile version