Home Mangalorean News Kannada News ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !

ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !

Spread the love

ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !

ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ಹೂಳು ತುಂಬಿರುವುದನ್ನು ತೆರವು ಮಾಡಲು ಹೂಳೆತ್ತುವ ಯಂತ್ರ ಬಂದಿದ್ದು ಮುಂದಿನ 90 ದಿನಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.

ಹಳೆಬಂದರಿನಲ್ಲಿ ಹೂಳು ತುಂಬಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕ ಜೆ.ಆರ್.ಲೋಬೊ ಅವರಿಗೆ ಮನವಿ ಮಾಡಿಕೊಂಡ  ಹಿನ್ನೆಲೆಯಲ್ಲಿ ಮುಂಬೈನಿಂದ  ಈ ಹೂಳೆತ್ತುವ ಯಂತ್ರವನ್ನು ತರಿಸಲಾಗಿದೆ.

jr-lobo2

99.50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ನಿಗಧಿಯಾದ 90 ದಿನಗಳ ಅವಧಿಗೆ ಮುನ್ನವೇ ಸುಮಾರು ಎರಡು ತಿಂಗಳ ಒಳಗೇ ಬಂದರಿನಲ್ಲಿ ಹೂಳು ತೆಗೆದು ದೋಣಿಗಳ ಸಾಗಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹೂಳೆತ್ತುವ ಯಂತ್ರದ ಕಾರ್ಯವೈಖರಿಯ ಬಗ್ಗೆ  ಬಂದರು ಅಧಿಕಾರಿಗಳು 2016-17 ನೇ ಸಾಲಿನಲ್ಲಿ ಬಂದರಿನಲ್ಲಿ ಹೂಳುತೆಗೆದು ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಮಾಡಿಕೊಡಲಾಗುವುದು. ಈಗ ಬಂದರಿನಲ್ಲಿ 2.1 ಮೀಟರ್ ಮಾತ್ರ ಆಳವಿದ್ದು ಇದನ್ನು 4 ಮೀಟರಿಗೇರಿಸಲಾಗುವುದು. ಇದರಿಂದ ವಾಣಿಜ್ಯ ವ್ಯವಹಾರ ಹೆಚ್ಚಾಗುವುದು. ಇದರಿಂದ  ಸುಮಾರು 37 ಸಾವಿರ ಕ್ಯೂಸೆಕ್ಸ್ ಮರಳು ತೆಗೆಯಲಾಗುವುದು ಎಂದರು.

ಅಳಿವೆ ಬಾಗಿಲಲ್ಲಿ ಹೂಳು ತೆಗೆದರೆ ದೋಣಿಗಳು ಅವಘಡವಿಲ್ಲದೆ ಸರಾಗವಾಗಿ ಹೋಗಲು ಅನುಕೂಲವಾಗುವುದು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸುವಂತೆ ಮುಂಬೈ ಮೂಲದ ಸಂಸ್ಥೆಗೆ ಹೇಳಲಾಗಿದೆ. ಸಾರ್ವಜನಿಕರು ಇದರ ಬಗ್ಗೆ ಯಾವುದೇ ಸಂಶಯವಿಲ್ಲದಂತೆ ಕೆಲಸ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸುಮಾರು 10 ವರ್ಷಗಳಿಂದ ಹಳಿವೆ ಬಾಗಿಲಲ್ಲಿ ಹೂಳುತುಂಬಿಕೊಂಡು ದೋಣಿಗಳು ಓಡಾಡಲು ಅನಾನುಕೂಲವಾಗುತ್ತಿತ್ತು. ವ್ಯಹಾರ ಸ್ಥಗಿತಗೊಂಡಿತ್ತು. ಈ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಮುತುರ್ವಜಿ ವಹಿಸಿ ಹೂಳೆತ್ತುವ ಯಂತ್ರವನ್ನು ತರಿಸಿದ್ದಾರೆ.

ಈ ಯಂತ್ರದ ಕಾಮಗಾರಿಯನ್ನು ಇಂದು ವಿದ್ಯುಕ್ತವಾಗಿ ಶುರುಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಾಂಗ್ರೆಸ್ ಮುಖಂಡರಾದ ರಮಾನಂದ ಪೂಜಾರಿ, ಅಸ್ಪಂ ಬೆಂಗ್ರೆ, ಆಸೀಫ್ ಬೆಂಗ್ರೆ, ಸಾಧಿಕ್ ಬೆಂಗ್ರೆ, ಅನ್ವರ್ ಪಿ.ಎಸ್, ಅಶ್ರಫ್ ಕುದ್ರೋಳಿ, ಶರೀಫ್ ಉಳ್ಳಾಲ್, ಉಮ್ಮರ್ ಫಾರುಕ್, ಮೊಯ್ದಿನ್ ಬಿಲಾಲ್, ಬಿ.ಜೆ.ಎಂ.ಸಾಲಿ, ಜಾಫರ್ ಶರೀಫ್ ಹಾಗೂ ಪೋರ್ಟ್, ಫಿಶರೀಶ್ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version