Home Mangalorean News Kannada News ಮಂಗಳೂರು : 108 ಅಂಬುಲೆನ್ಸ್ ನಲ್ಲಿ ಮಗು ಜನನ

ಮಂಗಳೂರು : 108 ಅಂಬುಲೆನ್ಸ್ ನಲ್ಲಿ ಮಗು ಜನನ

Spread the love

ಮಂಗಳೂರು : 108 ಅಂಬುಲೆನ್ಸ್ ನಲ್ಲಿ ಮಗು ಜನನ

ಮಂಗಳೂರು : ಗರ್ಭಿಣಿಯೊಬ್ಬರು ಹೆರಿಗೆಗಾಗಿ 108 ಅಂಬುಲೆನ್ಸ್ ನಲ್ಲಿ ಸಮೀಪದ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಅಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಫೆಬ್ರವರಿ 6 ರಂದು ಸಂಭವಿಸಿದೆ.

ಫೆಬ್ರವರಿ 6 ರಂದು ಕುಳಾಯಿ ಯಿಂದ ರಾತ್ರಿ ಸುಮಾರು 11.10 ಗಂಟೆಗೆ ಹೆರಿಗೆ ನೋವು ಎಂದು ಕರೆ ಬಂದಾಗ ಸುರತ್ಕಲ್ ನಿಂದ 108 ಆಂಬುಲೆನ್ಸ್ ಕುಳಾಯಿಗೆ ತಲುಪಿದ್ದು ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕುಳ್ಳಿರಿಸಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆ ಹೋಗುವಾಗ ರಸ್ತೆ ಮಾರ್ಗದಲ್ಲಿ ಅಂದರೆ ಪಣಂಬೂರು ಎಂಬಲ್ಲಿ ಹೆರಿಗೆ ನೋವು ಜಾಸ್ತಿ ಕಾಣಿಸಿಕೊಂಡು ಅಂಬುಲೆನ್ಸ್ ಶುಶ್ರೂಷಕ ಅವಿನಾಶ್, ಚಾಲಕ ಬಶೀರ್ ಅಹ್ಮದ್ ಖಾನ್ ಸುರಕ್ಷಿತ ಹೆರಿಗೆ ಆಂಬುಲೆನ್ಸ್ನಲ್ಲಿ ಮಾಡಿದರು.

ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ದಾಖಲು ಮಾಡಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಮಂಗಳೂರು 108 ಅಂಬುಲೆನ್ಸ್ ಸರ್ವಿಸ್, ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.


Spread the love

Exit mobile version