ಮಂಗಳೂರು: 2.30 ಕೋಟಿ ವೆಚ್ಚದಲ್ಲಿ ಕದ್ರಿ ಕಂಬ್ಳ ಮುಖ್ಯ ರಸ್ತೆ, ಸೇತುವೆ, ಫುಟ್‍ಪಾತ್ ನಿರ್ಮಾಣ

Spread the love

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಕಂಬ್ಳ ಮುಖ್ಯ ರಸ್ತೆಯ ಸೇತುವೆ, ಚರಂಡಿ ಹಾಗೂ ಫುಟ್‍ಪಾತ್ ನಿರ್ಮಾಣ (360 ಮೀಟರ್) ಕಾಮಗಾರಿಯ ಗುದ್ದಲಿ ಪೂಜೆಯನ್ನು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊರವರು ನೇರವೆರಿಸಿದರು.

1-Guddali-puje 2-Guddali-puje-001 3-Guddali-puje-002

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು ಈ ಒಟ್ಟು ಕಾಮಗಾರಿಯು ಮುಖ್ಯಮಂತ್ರಿಯ 2ನೇ ಹಂತದ 100 ಕೋಟಿ ವಿಶೇಷ ಅನುದಾನದಲ್ಲಿ ಸುಮಾರು 2.30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಾಗುವುದು. ಈಗಾಗಲೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೂಡಲೆ ಕಾಮಗಾರಿ ಕೈಗೆತ್ತಿಕೊಂಡು ಮೂರು ತಿಂಗಳೊಳಗೆ ಪೂರ್ತಿಯಾಗುವ ಭರವಸೆ ಇದೆ. ಸುಮಾರು 360 ಮೀಟರ್ ಉದ್ದದ ಚರಂಡಿ ಹಾಗೂ ಫುಟ್‍ಪಾತ್ ಕಾಮಗಾರಿಯು, 10 ಕಲ್ವರ್ಟ್ ಮತ್ತು ಡಕ್ಟ್ ನಿರ್ಮಾಣ, ಕಾಂಕ್ರಿಟ್ ರಸ್ತೆ, ಕಿರು ಸೇತುವೆ ಹಾಗೂ ರಿಟೈನಿಂಗ್ ವಾಲ್ ಕಾಮಗಾರಿಯು ಈ ಯೋಜನೆಯಲ್ಲಿ ಬರಲಿವೆ ಎಂದರು. ಇದಲ್ಲದೆ, ಪ್ರಿಮಿಯಮ್ ಎಫ್.ಎ.ಆರ್. ಹಣವನ್ನು ಬಳಸಿ ನಗರದಲ್ಲಿರುವ ಎಲ್ಲಾ ರಸ್ತೆಗೆ ಉತ್ತಮ ಫುಟ್‍ಪಾತ್ ವ್ಯವಸ್ಥೆಯನ್ನು ಶೀಘ್ರವಾಗಿ ನೀರ್ಮಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸ್ಥಳಿಯ ಕಾರ್ಪೋರೇಟರ್ ಪ್ರಕಾಶ್ ಸಾಲಿಯನ್, ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ಲ್ಯಾನ್ಸಿಲಾಟ್ ಪಿಂಟೊ, ರಾಜನೀಶ್, ಲತೀಫ್ ಮೊದಲಾದವರು ಉಪಸ್ಥಿತರಿದ್ದರು.


Spread the love