Home Mangalorean News Kannada News ಮಕ್ಕಳಿಗೆ ಬದುಕು ಕಲಿಸೋಣ: ವಿದ್ವಾನ್ ಲಕ್ಷ್ಮೀಶ್ ಭಟ್

ಮಕ್ಕಳಿಗೆ ಬದುಕು ಕಲಿಸೋಣ: ವಿದ್ವಾನ್ ಲಕ್ಷ್ಮೀಶ್ ಭಟ್

Spread the love

ಮಕ್ಕಳಿಗೆ ಬದುಕು ಕಲಿಸೋಣ: ವಿದ್ವಾನ್ ಲಕ್ಷ್ಮೀಶ್ ಭಟ್

ಮಂಗಳೂರು: ನಮ್ಮ ಮಕ್ಕಳಿಗೆ ಪ್ರೀತಿಯನ್ನು ಹಂಚುತ್ತಾ ಬದುಕುವ ಕಲೆಯನ್ನು ಹೇಳಿಕೊಡುವುದರ ಮೂಲಕ, ಉತ್ತಮ ಸಾಮಾಜಿಕ ಹಾಗೂ ಕೌಟುಂಬಿಕ ಜೀವನ ನಡೆಸಲು ಕಾರಣರಾಗುತ್ತಾರೆ ಎಂದು ವಿಕಾಸ್ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಉಪನ್ಯಾಸಕ ವಿದ್ವಾನ್ ಲಕ್ಷ್ಮೀಶ್ ಭಟ್ ಹೇಳಿದರು. ಅವರು ಅರೆಹೊಳೆ ಪ್ರತಿಷ್ಠಾನ, ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಹಿಲ್ಸ್ ಮತ್ತು ನಂದಗೋಕುಲ ಸಂಸ್ಥೆಗಳು ಆಯೋಜಿಸಿದ್ದ ದೀಪಾವಳಿ ಸಂಭ್ರಮ ಮತ್ತು ಮಕ್ಕಳ ದಿನಾಚರಣೆಯಲ್ಲಿ ಮಾತಾಡುತ್ತಿದ್ದರು. ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ‘ನಂದಗೋಕುಲ’ ಕಲಾ ತಂಡ, ಒಂದು ಕುಟುಂಬದಂತೆ ಒಗ್ಗಟ್ಟಾಗಿರುವುದು ಸಂತಸದ ವಿಚಾರ ಎಂದೂ ಹೇಳಿದರು

nandagokula-deepavali-1

ಇದೇ ಸಂದರ್ಭದಲ್ಲಿ ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ದೀಪಾವಳಿ ಸಂಭ್ರಮ ಪುರಸ್ಕಾರವನ್ನು ಯುವಗಾಯಕ ಹಾಗೂ ಬಹುಮುಖ ಪ್ರತಿಭೆಯ ನಿಶಾನ್ ರೈ ಮಠಂತ ಬೆಟ್ಟು ಹಾಗೂ ಸರಸ್ವತೀ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಸಂತ ಜೋಸೆಫ್ ಕಾಲೇಜಿನ ಮಾಜಿ ಪ್ರಾಂಶುಪಾಲ ರೆ.ಫಾ.ವಿಲ್ಫ್ರೆಡ್ ಪ್ರಕಾಶ್‍ಡಿಸೋಜಾರಿಗೆ ಪ್ರದಾನಿಸಲಾಯಿತು.

‘ನಂದಗೋಕುಲ’ದ ಕಿರಿಯ ಕಲಾವಿದೆಯರು ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದ್ದರು. ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ., ಲಿಯೋ ಅಧ್ಯಕ್ಷೆ ಅದಿತಿ ಶೆಟ್ಟಿ , ಕರುಣಾಕರ ರೈ, ನಿರತ ಕೆ ರೈ, ಗೀತಾ ರಾವ್, ಶ್ವೇತಾ ಅರೆಹೊಳೆ ಮುಂತಾದವರು ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ಸುಧಾ ಭಟ್ ವಂದಿಸಿದರು. ಸೌಜನ್ಯ ಎನ್ ಮತ್ತು ಚಿನ್ಮಯಿ ವಿ ಭಟ್ ನಿರೂಪಿಸಿದರು.


Spread the love

Exit mobile version