Home Mangalorean News Kannada News ಮಕ್ಕಳ ರಕ್ಷಣೆಯೇ ಮುಖ್ಯ- ಶಾಸಕ ಜೆ.ಆರ್. ಲೋಬೊ

ಮಕ್ಕಳ ರಕ್ಷಣೆಯೇ ಮುಖ್ಯ- ಶಾಸಕ ಜೆ.ಆರ್. ಲೋಬೊ

Spread the love

ಮಕ್ಕಳ ರಕ್ಷಣೆಯೇ ಮುಖ್ಯ- ಶಾಸಕ ಜೆ.ಆರ್. ಲೋಬೊ

ಮಂಗಳೂರು: ಶಾಲಾ ಮಕ್ಕಳ ಸಾಗಾಟದಲ್ಲಿ ಕುರಿತು ಸರಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದ್ದರೂ, ವಿವಿಧ ರೀತಿಯಲ್ಲಿ ನಿರ್ಲಕ್ಷ್ಯಗಳು ಮಾತ್ರ ಕಾಣುತ್ತವೆ. ನಮಗೆ ಮಕ್ಕಳ ರಕ್ಷಣೆಯೇ ಮುಖ್ಯ, ಉಳಿದೆಲ್ಲವೂ ನಗಣ್ಯ. ಈ ಬಗ್ಗೆ ಎಲ್ಲರೂ ಎಚ್ಚರವಾಗಿದ್ದುಕೊಂಡು ಕಾನೂನಿನ ಚೌಕಟ್ಟಿನೊಳಗಿದ್ದುಕೊಂಡು ಮಕ್ಕಳ ರಕ್ಷಣೆ ಮಾಡಬೇಕಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.

image012Safety-students-priority-201606287-012

ಸಾರಿಗೆ ಇಲಾಖೆ, ಸಾರಿಗೆ ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪಾಲಿಕೆಯ, ವಾಹನ ಚಾಲಕ ಹಾಗೂ ಮಾಲಕರ ಸಂಘ ಮತ್ತು ಪೋಷಕರ ಸಹಯೋಗದಲ್ಲಿ ನಗರದ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಮಕ್ಕಳ ರಕ್ಷಣೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಮಕ್ಕಳನ್ನು ಕೊಂಡೊಯ್ಯುವ ವಾಹನಗಳು ನಿಯಮ ಪಾಲಿಸಿದಲ್ಲಿ ಶೇ. 50ರಷ್ಟು ತೆರಿಗೆ ಕಡಿತಗೊಳಿಸುವ ಸರಕಾರದ ಯೋಜನೆಯಿದೆ. ಶಾಲಾ ದಿನಗಳಲ್ಲಿ ವಾಹನ ಚಾಲಕರು ಇದರ ಸದುಪಯೋಗಪಡಿಸಿಕೊಂಡು, ರಜಾ ದಿನಗಳಲ್ಲಿ ಇತರ ಕಡೆಗಳಿಗೆ ಬಾಡಿಗೆಗೆ ತೆರಳಬಹುದಾಗಿದೆ. ಶಾಲೆಗೆ ಮಕ್ಕಳನ್ನು ಕೊಂಡೊಯ್ಯುತ್ತಿರುವಾಗ ಪೋಲೀಸರು ವಾಹನಗಳನ್ನು ನಿಲ್ಲಿಸಿ, ಪರಿಶೀಲನೆ ನಡೆಸಬಾರದು. ಇದರಿಂದಾಗಿ ಪೋಷಕರಿಗೆ ಹಾಗೂ ಮಕ್ಕಳಿಗೂ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ನಿಯಮ ಮೀರಿದ ಪ್ರಕರಣಗಳು ಕಂqಡು ಬಂದಲ್ಲಿ ಅಂತಹ ವಾಹನ ಚಾಲಕರ ಸಂಖ್ಯೆಯನ್ನು ಪಡೆದುಕೊಂಡು ಮೊದಲು ತಿಳಿಹೇಳಬೇಕು. ಸಮಸ್ಯೆ ಮುಂದುವರಿದಲ್ಲಿ ಸಂಜೆ ವೇಳೆ ಕರೆಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಶಾಲೆಗಳಲ್ಲಿ ವೀಕ್ಷಣಾ ಸಮಿತಿಗಳನ್ನು ರಚಿಸಬೇಕು. ಈ ಮೂಲಕ ಮಕ್ಕಳನ್ನು ಕರೆದುಕೊಂಡು ಬರುವ ಪ್ರತೊಯೊಂದು ವಾಹನಗಳ ಹಾಗೂ ವಾಹನ ಚಾಲಕರ ಮಾಹಿತಿ ಪಡೆಯಲು ಸಾಧ್ಯ. ಈಗಾಗಲೇ ಸಮಿತಿಗಳಿದ್ದರೆ ಅವುಗಳನ್ನು ಕಾರ್ಯಗತಗೊಳ್ಳುವಂತೆ ಮಾಡಿ. ಬೆಳಗ್ಗಿನ ಅವ„ಯಲ್ಲಿ ಸಂಚಾರ ದಟ್ಟನೆ ಸೇರಿದಂತೆ ಹಲವಾರು ಸಮಸ್ಯೆಗಳಾಗುತ್ತಿವೆ. ಇದರಿಂದಾಗಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲಾ ಅವ„ಯಲ್ಲಿ ಬದಲಾವಣೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಎಂದು ಶಿಕ್ಷಣ ಇಲಾಖೆ ಅಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಖಾಸಗಿ ಶಾಲೆಗಳು ಕೂಡಾ ತಮ್ಮಲ್ಲಿರುವ ಬಸ್‍ಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಯ ಗುಂಡಿಗಳು ಕಾಣುವ ಪ್ರಮೇಯ ಸಾಕಷ್ಟು ಕಡಿಮೆಯಾಗಿದೆ. ವಾಹನ ಚಾಲಕರು ಕೂಡಾ ಸ್ವಲ್ಪ ಮುಂಚಿತವಾಗಿಯೇ ಹೊರಟರೆ ಅವಸರದಿಂದ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಒದಗುವುದಿಲ್ಲ ಎಂದರು.
ರಸ್ತೆ ಸುರಕ್ಷತೆಯ ಬಗ್ಗೆ ಆರ್‍ಟಿಒ ಹಾಗೂ ಸಂಬಂಧಪಟ್ಟ ಅ„ಕಾರಿಗಳು ಹೆಚ್ಚು ಕಠಿಣ ನಿರ್ಧಾರ ಕೈಗೊಳ್ಳಬೇಕು. ರಸ್ತೆಯನ್ನು ಅಗಲೀಕರಣಗೊಳಿಸಲಾಗಿದ್ದರೂ, ಬೇಕಾದೆಡೆ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಡಕ್ಕುಂಟಾಗುತ್ತದೆ. ಫೂಟ್ ಪಾತ್ ವ್ಯವಸ್ಥೆ ಮಾಡಿದ ಬಳಿಕ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಲಾಗಿತ್ತು. ಆದರೆ, ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಗೆ ಸ್ವಲ್ಪ ಮಟ್ಟಿನ ಕಡಿವಾಣ ಅಗತ್ಯವಾಗಿದೆ. ಸುರಕ್ಷತೆಯ ಕುರಿತು ಸುತ್ತೋಲೆ ಹೊರಡಿಸಿದರೆ ಸಾಕಾಗುವುದಿಲ್ಲ. ಅ„ಕಾರಿಗಳ, ವಾಹನ ಚಾಲಕರ ನಡುವೆ ಉತ್ತಮ ಬಾಂಧವ್ಯವೂ ಬೆಳೆಯಬೇಕು. ಸಂಚಾರ ಹಾಗೂ ಮಕ್ಕಳ ಜಾಗರೂಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದರು.
ಮಂಗಳೂರು ಪೋಲಿಸ್ ಕಮಿಷನರೇಟ್ ಸಂಚಾರಿ ವಿಭಾಗದ ಎಸಿಪಿ ಉದಯ ನಾಯಕ್ ಅವರು ಮಾತನಾಡಿ, ನಿರ್ಲಕ್ಷ್ಯ ಮತ್ತು ಸಾರಿಗೆ ನಿಯಮಗಳ ಉಲ್ಲಂಘನೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ತ್ರಾಸಿ ಘಟನೆಯಲ್ಲೂ ಇದು ನಡೆದಿದೆ. ಸಾರಿಗೆ ನಿಯಮ ಹಾಗೂ ಕಾನೂನು ಪಾಲಿಸುವುದು ಎಲ್ಲರ ಕರ್ಥವ್ಯವಾಗಿದೆ. ಇದರಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಮುಂದುಗಡೆ ವಾಹನಗಳು ಬರುತ್ತಿರುವಾಗ ನಾವು ಯಾವಾಗಲೂ ಜಾಗರೂಕರಾಗಿರಬೇಕು. ಪ್ರಸ್ತುತ ಫೋಲೀಸ್ ಇಲಾಖೆಯಿಂದ ಕಠಿಣ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಆದರೆ, ಜಾಗೃತಿ ಮೂಡಿಸುವ ಕೆಸಗಳು ನಡೆಯುತ್ತಿವೆ. ವಾಹನಗಳಿಗೆ ಹಳದಿ ಬಣ್ಣ ಬಳಿಯುವ ವಿಷಯಗಳು ಸರಕಾರದ ಮಟ್ಟದಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆದರೆ, ಜಿಲ್ಲಾ ವ್ಯಾಪ್ತಿಯಲ್ಲಿ ಈ ಮೂಲಕ ಬದಲಾವಣೆಗೆ ಪ್ರಯತ್ನಿಸುತ್ತಿರುವುದಕ್ಕೆ ಎಲ್ಲರೂ ಸ್ಪಂದನೆ ನೀಡಬೇಕು ಎಂದರು.
ಮಂಗಳೂರು ಪ್ರಭಾರ ಸಾರಿಗೆ ಅ„ಕಾರಿ ಎಸ್.ಜಿ.ಹೆಗಡೆ ಮಾತನಾಡಿ, ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಚಾಲಕರು ಮಕ್ಕಳ ಸುರಕ್ಷತೆ ಜತೆಗೆ ರಸ್ತೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಲ್ಲದೆ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯಲು ಕೆಎಸ್ಸಾರ್ಟಿಸಿ ಬಸ್ ಬಂದರೆ ಅನುಕೂಲ. ಇನ್ನು ಖಾಸಗಿ ವಾಹನಗಳು ಯಾವುದೇ ಕಾರಣಕ್ಕೂ ಬಾಡಿಗೆ ಮಾಡಲೇಬಾರದು. ಅಲ್ಲದೆ ಆಟೋ ರಿಕ್ಷಾಗಳಲ್ಲೂ ಮಕ್ಕಳನ್ನು ಕರೆದೊಯ್ಯಲು ಅವಕಾಶ ಇಲ್ಲ. ಪ್ರಸ್ತುತವಿರುವ ಖಾಸಗ ವಾಹನಗಳಿಗೆ ಕಡ್ಡಾಯವಾಗಿ ಹಳದಿ ಬಣ್ಣ ಬಳಿಯಬೇಕು. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ತಿಳಿಸಿದರು.

ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಹಾಕಿಕೊಂಡು ಹೋಗುವುದರಿಂದ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತದೆ. ಹೆಚ್ಚು ಮಕ್ಕಳನ್ನು ತುಂಬಿಸುವಾಗ ಅವರ ಬ್ಯಾಗ್‍ಗಳನ್ನು ವಾಹನದ ಹಿಂದಕ್ಕೆ ಹಾಕಬೇಕಾಗುತ್ತದೆ. ಈ ವೇಳೆ ಹಿಂದೆ ವಾಹನಗಳು ಬರುವುದು ಗೋಚರಿಸುವುದಿಲ್ಲ. ಇದರಿಂದ ಸಂಚಾರದ ವೇಳೆ ಅಪಘಾತಗಳಾಗುವ ಸಾಧ್ಯತೆಗಳಿವೆ. ಪೋಷಕರು ಕೂಡಾ ಹಣದ ಸಮಸ್ಯೆಯಿದೆ ಎಂದು ಒಂದೇ ವಾಹನದಲ್ಲಿ ಮಕ್ಕಳನ್ನು ಮಿತಿ ಮೀರಿದ ಸಂಖ್ಯೆಯಲ್ಲಿ ಹಾಕಿಸಿಕೊಂಡು ಕಳುಹಿಸುವುದು ತಪ್ಪು. ಮಕ್ಕಳ ಜೀವ ಮುಖ್ಯವೇ ಹೊರತು ಹಣವಲ್ಲ ಎಂದು ಎಸಿಪಿ ಉದಯ ನಾಯಕ್ ಅವರು ಹೇಳಿದರು.

ನಗರದ ಹಲವೆಡೆ ರಸ್ತೆ ಬದಿಗಳಲ್ಲೇ ಇತರ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಇದರಿಂದಾಗಿ ಸಂಚಾರ ಸಮಸ್ಯೆಯುಂಟಾಗಿ ಶಾಲಾ ಮಕ್ಕಳನ್ನು ಸರಿಯಾದ ಸಮಯಕ್ಕೆ ಕೊಂಡೊಯ್ಯಲು ವಾಹನ ಚಾಲಕರಿಗೆ ಸಮಸ್ಯೆಯುಂಟಾಗುತ್ತದೆ. ಬಳಿಕ ವೇಗದಿಂದ ಅವರು ಚಲಿಸುವುದರಿಂದ ಹೆಚ್ಚಿನ ಅಪಘಾತಗಳಾಗಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಗಳ ಪ್ರಾರಂಭದ ಸಮಯವನ್ನು ಅರ್ಧ ಗಂಟೆ ವಿಳಂಬವಾಗಿಸಬೇಕು. ಅಲ್ಲದೇ, ನಗರ ವ್ಯಾಪ್ತಿಯಲ್ಲಿ ವಾಹನ ಮಿತಿಯನ್ನು 30-35ಕ್ಕೆ ಇಳಿಸಬೇಕು. ಇದರಿಂದ ಅಪಘಾತಗಳಾಗುವ ಸಾಧ್ಯತೆ ಕಡಿಮೆ ಎಂದು ಮೇಯರ್ ಹರಿನಾಥ್ ತಿಳಿಸಿದರು.

ಶಾಲೆಗಳಲ್ಲಿ ವೀಕ್ಷಣಾ ಸಮಿತಿಯನ್ನು ರಚಿಸಿ, ಅ„ಕಾರ ನೀಡಬೇಕು. ಇದರಿಂದ ಶಾಲೆಗೆ ಮಕ್ಕಳನ್ನು ಬಿಡುವ ವಾಹನಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಅಲ್ಲದೇ, ವಾಹನ ಚಾಲಕರ ಮೊಬÉೈಲ್ ಸಂಖ್ಯೆ, ವಾಹನದ ಸಂಖ್ಯೆಗಳನ್ನು ನೋಂದಾಯಿಸಿಕೊಂಡರೆ ವಾಹನಗಳ ಬಗ್ಗೆ ಪೂರ್ಣ ಮಾಹಿತಿ ದೊರೆಯುತ್ತದೆ ಹಾಗೂ ಮಕ್ಕಳ ಸುರಕ್ಷತೆಯತ್ತ ಕೂಡಾ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಶಾಲಾ ಮಕ್ಕಳನ್ನು ಸುರಕ್ಷತೆಯ ಕುರಿತು ಜಿಲ್ಲಾಡಳಿತ ವತಿಯಿಂದ ಕೈಗೊಂಡಿರುವ ನಿರ್ಧಾರ ಪಾಲಿಸಲು ವಾಹನ ಚಾಲಕರಿಗೆ ಸ್ವಲ್ಪ ಸಮಯವಕಾಶ ನೀಡಬೇಕು. ಬಳಿಕ ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತ ನಮ್ಮನ್ನು ವಿಚಾರಿಸಲಿ. ನಗರದಲ್ಲಿ ಟ್ರಾಫಿಕ್ ಪೋಲೀಸರು ವಾಹನ ಚಾಲಕರನ್ನು ನಿಲ್ಲಿಸಿ ವಿಚಾರಣೆ ನಡೆಸುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಪೋಷಕರು ಕೂಡಾ ಹೆದರಿದಂತಾಗುತ್ತದೆ. ಖಾಸಗಿ ವಾಹನ ಚಾಲಕರು ಮಕ್ಕಳನ್ನು ಹೆಚ್ಚು ಸುರಕ್ಷತೆಯಿಂದ ಮಕ್ಕಳನ್ನು ಶಾಲೆ ಬಿಟ್ಟು ಕರೆದುಕೊಂಡು ಬರುತ್ತಾರೆ. ಅಲ್ಲದೇ, ಶಾಲೆಗಳು ಅವರ ಬಸ್‍ಗಳಲ್ಲಿ ಮಕ್ಕಳನ್ನು ಮಿತಿಗಿಂತ ಹೆಚ್ಚು ಹಾಕಿ ಸಂಚಾರ ಮಾಡುತ್ತಾರೆ ಹಾಗೂ ಹೆಚ್ಚು ಶುಲ್ಕವನ್ನು ಪಡೆಯುತ್ತಾರೆ. ಆದರೆ, ಖಾಸಗಿ ವಾಹನ ಚಾಲಕರು ಸುರಕ್ಷತೆ ಮಾತ್ರವಲ್ಲದೇ, ಪೋಷಕರ ಹಣವನ್ನೂ ಉಳಿಸುತ್ತಿದ್ದಾರೆ ಎಂದು ವಾಹನ ಚಾಲಕರ ಹಾಗೂ ಮಾಲಕರ ಸಂಘದ ಸದಸ್ಯರು ಹೇಳಿದರು.
ಪಿ.ವಿ. ಮೋಹನ್,, ಶಶಿಧರ ಹೆಗ್ಡೆ, ಸಂಚಾರಿ ಪೋಲೀಸ್ ಇನ್ಸ್‍ಪೆಕ್ಟರ್‍ಗಳು, ಬಿಇಒ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version