ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥ ಮಾಡಿಕೊಂಡು ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಹಾಕಿ- ಸತ್ಯನಾರಾಯಣಾರ್ಯ
ಮಂಗಳೂರು : ಇತ್ತಿಚೀನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದರ ಬಗ್ಗೆ ಕಳವಳ ಉಂಟಾಗಿದೆ. ನಾಗರೀಕರು ಒಂದಾಗಿ ಅದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಕಡ್ಲೂರು ಸತ್ಯನಾರಾಯಣಾರ್ಯ ಹೇಳಿದರು.
ಶನಿವಾರ ದ.ಕ.ಜಿ. ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೈಲಾಸ್ ಸತ್ಯಾರ್ಥಿ ನವದೆಹಲಿ, ಸ್ಪಂದನಾ ಬೆಳಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಜಿಲ್ಲೆ, ದ.ಕ. ಜಿಲ್ಲಾ ಪಂಚಾಯತ್ ಪಡಿ, ಮಕ್ಕಳ ಮಾಸೋತ್ಸವ ಸಮಿತಿ ದ.ಕ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಾಗಾಣಿಕೆ ಹಾಗೂ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಕ್ಕಳು ಬೇರೆ ಬೇರೆ ಕಾರಣದಿಂದ ಅವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಸಮ್ಯಸೆಗೆ ಬಡತನ ಕೂಡ ಒಂದು ಕಾರಣ, ಜೊತೆಗೆ ಶ್ರೀಮಂತಿಕೆಯೂ ಮುಖ್ಯ ಕಾರಣವಾಗಿದೆ. ಮಕ್ಕಳ ಕೈಗೆ ಸುಲಭವಾಗಿ ದೊರೆಯುವ ಸ್ಮಾಟ್ ಪೋನ್, ಮಾದಕ ವಸ್ತುಗಳಿಂದ ಮಕ್ಕಳು ದಾರಿ ತಪ್ಪುತ್ತಿರುವುದು ಸಮಾಜದಲ್ಲಿ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವ ಗುಣ ಪೋಷಕರಿಗೆ ಹಾಗೂ ಸಮಾಜಕ್ಕೆ ಇರಬೇಕು. ಯಾವ ಕಾರಣದಿಂದ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ಪೋಷಕರು ಅರಿತು ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕಾಗಿದೆ. ನಮ್ಮ ಸಮಾಜವು ಮಾನವೀಯತೆಯನ್ನು ಮರೆಯುತ್ತಿದೆ, ದಿನದಿಂದ ದಿನಕ್ಕೆ ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಹಿರಿಯ ಸಿವಿಲ್ ನ್ಯಾಯಾಧೀಶ ಗಂಗಾಧರ, ಎ.ಜೆ. ಬಾಲನ್ಯಾಯ ಮಂಡಳಿ ಅಧ್ಯಕ್ಷರು ಮತ್ತು ಜೆಎಂಎಫ್ಸಿ ಎರಡನೇ ನ್ಯಾಯಾಲಯದ ನ್ಯಾಯಧೀಶ ಮಹೇಶ್, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಪರಶುರಾಮ, ಬಾಲನ್ಯಾಯ ಮಂಡಳಿ ಸರಕಾರಿ ಹಿರಿಯ ಸಹಾಯಕ ಅಭಿಯೋಜಕ ದೇವೇಂದ್ರ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಉಸ್ಮಾನ್, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ವಾಲ್ಟರ್ ಡಿ ಮೆಲ್ಲೋ, ಜಿಲ್ಲಾ ಆರೋಗ್ಯಧಿಕಾರಿ ಡಾ. ಎಂ ರಾಮಕೃಷ್ಣ ರಾವ್ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ವಿವಿಧ ಸ್ವಯಂ ಸೇವಾಸಂಸ್ಥೆಗಳ ಪ್ರತಿನಿಧಿಗಳಾದ ದೇಶರಾಜ್ ಸಿಂಗ್, ವಿ.ಸುಶೀಲಾ, ಝಾಕಿರ್ ಹುಸೈನ್, ಸುರೇಶ್ ಶೆಟ್ಟಿ, ನಿಖಿಲ್ ಶೆಟ್ಟಿ ಹೀಲ್ಡಾರಾಯಪ್ಪನ್ ಮೊದಲಾದವರು ಉಪಸ್ಥಿತರಿದ್ದರು.ದ.ಕ.ಜಿಲ್ಲಾ ಕಲ್ಯಾಣ ಸಮಿತಿ ಅಧಕ್ಷ ರೆನ್ನಿ ಡಿಸೋಜ ಸ್ವಾಗತಿಸಿದರು.