ಮಟಪಾಡಿ ನೀಲಾವರ ಗ್ರಾಮದ ಸೈಬರ ಕುದ್ರುವಿನಲ್ಲಿ ವೈಭವದ ಏಕ ಪವಿತ್ರ ನಾಗಮಂಡಲೋತ್ಸವ
ಬ್ರಹ್ಮಾವರ: ತುಳು ನಾಡಿನಲ್ಲಿ ದೈವ ಆರಾಧನೆಗೂ ನಾಗ ಆರಾಧನೆಗೂ ಹೆಚ್ಚು ಮಹತ್ವವಿದೆ. ಮಟಪಾಡಿ ನೀಲಾವರ ಗ್ರಾಮದ ಸಾಯ್ಬರ ಕುದ್ರುವಿನಲ್ಲಿ ಏಕ ಪವಿತ್ರ ನಾಗಮಂಡಲೋತ್ಸವವು ವೈಭವ ದಿಂದ ನಡೆಯಿತು.
ನಾಗಮಂಡಲದ ಪ್ರಯುಕ್ತ ಮಧ್ಯಾಹ್ನ ಮಹಾ ಅನ್ನ ಸಂರ್ತಪಣೆ ಸಾವಿರಾರು ಜನಭಾಗವಹಿಸಿಅನ್ನ ಪ್ರಸಾದ ಸ್ವೀಕರಿಸಿದರು. ನಾಗಬನದಲ್ಲಿ ಹಾಲಿಟ್ಟು ಸೇವೆಯ ನಂತರ ಏಕ ಪವಿತ್ರ ನಾಗಮಂಡಲೋತ್ಸವ ನಡೆಯಿತು.
ಬೆಳಗ್ಗೆ ವೈದಿಕ, ಧಾರ್ಮಿಕ ಕಾರ್ಯಕ್ರಮಗಳಾದ ಉದ್ಯಾನ ಹೋಮ, ಪರಮಾನ ಹೋಮ, ತಿಲಹೋಮ, ಕುಷ್ಮಾಂಡ ಹೋಮ, ಪಂಚವಿಂಶತಿ ಕಲಶ ಸ್ಥಾಪನೆ, ಆಧಿವಾಸ ಹೋಮ, ಸಂಹಿತ ನಾರಾಯಣ ಕಲಶಾಭಿಷೇಕ, ವಟು-ಬ್ರಾಹ್ಮಣ ಆರಾಧನೆ ಕಾರ್ಯಕ್ರಮಗಳು ನಡೆದವು. ನಂತರ ಪಲ್ಲ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ದೇವಮೂರ್ತಿ ರಮೇಶ್ ಭಟ್ ನ್ಯಾರ್ಯ ಬೆಟ್ಟು ದೇವಮೂರ್ತಿ ಸುಬ್ರಹ್ಮಣ್ಯ ಉಂರ್ಗಪಳ್ಳಿ ನಾಗ ಪಾರ್ತಿಗಳಾಗಿ ವೈದ್ಯ ಮೂರ್ತಿ ಲೊಕೇಶ್ ಆಡಿಗ ಬಡಕೆರೆ ವೈದ್ಯರು ಕೃಷ್ಣ ಪ್ರಸಾದ್ ವೈದ್ಯ ಮತ್ತು ಬಳಗ ನಾಗ ಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ನಟರಾಜ್ ವೈದ್ಯ. ಕೂಸು ಪೂಜಾರ್ತಿ ಕುಟುಂಬಸ್ಥರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತಿತರಿದ್ದರು.