Home Mangalorean News Kannada News ಮಠದಲ್ಲಿ ಇಫ್ತಾರ್ ; ಕೃಷ್ಣ ದೇವಳವನ್ನು ಗೋಮೂತ್ರ ಹಾಕಿ ಶುದ್ದಿ ಮಾಡಿ ;...

ಮಠದಲ್ಲಿ ಇಫ್ತಾರ್ ; ಕೃಷ್ಣ ದೇವಳವನ್ನು ಗೋಮೂತ್ರ ಹಾಕಿ ಶುದ್ದಿ ಮಾಡಿ ; ಹಿಂದೂ ಜನಜಾಗೃತಿ ಸಮಿತಿ

Spread the love

ಮಠದಲ್ಲಿ ಇಫ್ತಾರ್ ;  ಕೃಷ್ಣ ದೇವಳವನ್ನು  ಗೋಮೂತ್ರ ಹಾಕಿ ಶುದ್ದಿ ಮಾಡಿ ; ಹಿಂದೂ ಜನಜಾಗೃತಿ ಸಮಿತಿ

ಉಡುಪಿ: ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿರುವುದರೊಂದಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿರ್ಧಾರ ಖಂಡನೀಯವಾಗಿದ್ದು ಇದಕ್ಕಾಗಿ ಪೇಜಾವರ ಶ್ರೀಗಳು ಕ್ಷಮೆ ಕೇಳಬೇಕು ಮತ್ತು ಗೋಮೂತ್ರದಿಂದ ಮಠವನ್ನು ಶುದ್ಧಿಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಹಿಂದೂ ಜನಜಾಗೃತಿ ಸಮಿತಿ ಇದರ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಅವರು ಮೊಘಲರ ಆಕ್ರಮಣದ ಕಾಲದಿಂದ ಹಿಂದೂ ಧರ್ಮದ ರಕ್ಷಣೆಯನ್ನು ಉಡುಪಿ ಮಠದ ಮಧ್ವಾಚಾರ್ಯರು ಮಾಡಿದ್ದರು. ಆದರೆ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಗಳು ಮಠದ ಆವರಣದಲ್ಲಿ ಇಪ್ತಾರ ಪಾರ್ಟಿ ಆಯೋಜಿಸಿ ಮತ್ತು ನಮಾಜ ಮಾಡಿಸಿರುವುದು ಖಂಡನೀಯವಾಗಿದೆ. ಇದರಿಂದ ಹಿಂದೂ ಸಮಾಜಕ್ಕೆ ತುಂಬಾ ನೋವಾಗಿದೆ. ಗೋಪಾಲಕ ಭಗವಾನ ಶ್ರೀಕೃಷ್ಣನ ಮಂದಿರದ ಆವರಣದಲ್ಲಿ ಗೋಭಕ್ಷಕರನ್ನು ಕರೆಸಿ ಇಪ್ತಾರ ಪಾರ್ಟಿ ಮತ್ತು ನಮಾಜದಿಂದ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಈ ಘಟನೆಯಿಂದ ನೂರಾರು ವರ್ಷಗಳ ದೇವಸ್ಥಾನ ಪಾವಿತ್ರ್ಯವೇ ಭಂಗವಾಗಿದೆ. ಶ್ರೀಕೃಷ್ಣನ ದೇವಸ್ಥಾನವು ಸಮಜದ ಧಾರ್ಮಿಕ ಆಸ್ತಿಯಾಗಿದೆ. ಹಾಗಾಗಿ ಪೇಜಾವರ ಶ್ರೀಗಳು ಕೂಡಲೇ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಮತ್ತು ಮಠದ ಗೌರವ ಉಳಿಸಲು ಗೋಮೂತ್ರ ಸಿಂಪಡಿಸಿ ಮಠದ ಶುದ್ಧಿ ಮಾಡಬೇಕು. ಇಲ್ಲದಿದ್ದರೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳು ಉಡುಪಿ ಶ್ರೀಕೃಷ್ಣ ಮಠದ ಎದುರು ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಮಾಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version