ಮಣಿಪಾಲದಲ್ಲಿ ಜಿಲ್ಲೆಯ ಪ್ರಥಮ ಇಂದಿರಾ ಕ್ಯಾಂಟಿನಿಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ
ಉಡುಪಿ: ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಯೋಜನೆ ದೇವಳಗಳ ನಗರಿಗೂ ವಿಸ್ತರಿಸಿದ್ದು, ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಿರ್ಮಿಸಿರುವ ಜಿಲ್ಲೆಯ ಪ್ರಥಮ ಇಂದಿರಾ ಕ್ಯಾಂಟಿನ್ ಗೆ ಚಾಲನೆ ನೀಡಿದರು.
ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ತೆರಳುವ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಮಾಡಿದ ಸಚಿವರು ಅಲ್ಲಿ ಉಪ್ಪಿಟ್ಟು ಕೇಸರಿ ಬಾತ್ ಸವಿದರು.
ಇಂದಿರಾ ಕ್ಯಾಂಟಿನ್ ಉದ್ಘಾಟನೆ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಕಾಂಗ್ರೆಸ್ ನಾಯಕರಾದ ಕ್ರಿಸ್ಟನ್ ಡಿ’ಆಲ್ಮೇಡಾ, ಪ್ರಶಾಂತ್ ಪೂಜಾರಿ, ಸುನೀಲ್ ಬಂಗೇರಾ, ರಮೇಶ್ ಕಾಂಚನ್, ಸೆಲಿನ ಕರ್ಕಡ, ಯುವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ಕ್ಯಾಂಟೀನ್ಗಳಲ್ಲಿ ಒಂದು ಹೊತ್ತಿಗೆ 500 ಜನರಿಗೆ ಬೇಕಾಗುವಷ್ಟು, ಅಂದರೆ ಒಂದು ದಿನಕ್ಕೆ 1,500ರಷ್ಟು ಜನರಿಗೆ ಆಹಾರವನ್ನು ಪ್ರತಿದಿನ ವಿತರಿಸಲು ನಿರ್ಧರಿಸಲಾಗಿದೆ.