ಮಣಿಪಾಲದಲ್ಲಿ ಸರಣಿ ಅಂಗಡಿ ಕಳ್ಳತನ: ಮೂವರ ಬಂಧನ

Spread the love

ಮಣಿಪಾಲದಲ್ಲಿ ಸರಣಿ ಅಂಗಡಿ ಕಳ್ಳತನ: ಮೂವರ ಬಂಧನ

ಮಣಿಪಾಲ: ಮಣಿಪಾಲ ಠಾಣೆ ವ್ಯಾಪ್ತಿಯ ಎರಡು ಅಂಗಡಿಗಳಿಗೆ ನುಗ್ಗಿ ನಗದು ಸಹಿತ ಇತರ ಸೊತ್ತುಗಳನ್ನು ದೋಚಿದ್ದ ಕಳ್ಳರನ್ನು ಪೊಲೀಸರು ನ. 6ರಂದು ಮಣಿಪಾಲ ಶೀಂಬ್ರ ಸೇತುವೆಯ ಬಳಿ ಬಂಧಿಸಿದ್ದಾರೆ.

ಕೊಪ್ಪಳ ಗಜೇಂದ್ರಗಢದ ಮಂಜುನಾಥ್ ಚಿದಾನಂದಪ್ಪ ನರತೆಲಿ (24), ಹಟ್ಟಿಯಂಗಡಿಯ ಪ್ರಸಾದ್ (22) ಮತ್ತು ಕಿಶನ್(20) ಬಂಧಿತರು.

ಅವರು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪಿಐ ಟಿ.ವಿ. ದೇವರಾಜ್ ನೇತೃತ್ವದಲ್ಲಿ ಎಸ್ಸೆ„ ಅಕ್ಷಯಾ ಕುಮಾರಿ, ಎಎಸ್ಐ ವಿವೇಕಾನಂದ, ಪ್ರಸನ್ನ ಕುಮಾರ್, ಇಮ್ರಾನ್, ರಘು ಹಾಗೂ ಮಂಜುನಾಥ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಣಿಪಾಲದ ಅನಂತನಗರ ದಲ್ಲಿರುವ ಕೊಡವೂರಿನ ಪ್ರಜ್ವಲ್ ಅವರ ಬೇಕರಿಗೆ ಅ. 31ರಂದು ರಾತ್ರಿ ಶೆಟರ್ ಮುರಿದು ಕ್ಯಾಶ್ ಬಾಕ್ಸ್ನಲ್ಲಿಟ್ಟಿದ್ದ 30 ಸಾವಿರ ರೂ. ಹಾಗೂ ಕ್ಯಾಶ್ ಡ್ರಾವರ್ನಲ್ಲಿ ಇರಿಸಿದ್ದ 2 ಸಾವಿರ ರೂ.ಗಳನ್ನು ಆರೋಪಿಗಳು ಕಳವು ಮಾಡಿದ್ದರು. ಇನ್ನೊಂದು ಪ್ರಕರಣದಲ್ಲಿ ಮಣಿಪಾಲ ಈಶ್ವರನಗರದ ಜನರಲ್ ಸ್ಟೋರ್ಗೆ ನುಗ್ಗಿದ್ದ ಆರೋಪಿತರು ಸಾವಿರಾರು ರೂ. ನಗದು ಹಾಗೂ ದಾಖಲೆಪತ್ರಗಳನ್ನು ಕಳ್ಳತನ ಮಾಡಿದ್ದರು. ಈಶ್ವರನಗರದ ರೀಗಲ್ ಎಂಬಸಿ ಅಪಾರ್ಟ್ಮೆಂಟ್ನ ನೆಲ ಅಂತಸ್ತಿನಲ್ಲಿ ರಾಘವೇಂದ್ರ ಅವರು ಆದಿಶಕ್ತಿ ಜನರಲ್ ಸ್ಟೋರ್ ಇಟ್ಟುಕೊಂಡಿದ್ದರು.

ಅ. 31ರ ರಾತ್ರಿ ಕಳ್ಳರು ಅಂಗಡಿಯ ಶೆಟರ್ ಮುರಿದು ಒಳಗೆ ಹೋಗಿ ಕ್ಯಾಶ್ ಡ್ರಾವರ್ನಲ್ಲಿರಿಸಿದ್ದ 30 ಸಾವಿರ ರೂ. ನಗದು ಹಾಗೂ ಅವರ ವೋಟರ್ ಐಡಿ, ಆರ್ಸಿ, ಡಿಎಲ್ ಮತ್ತು ಎಟಿಎಂ ಕಾರ್ಡ್ ಇರುವ ಪರ್ಸ್ ಕಳವು ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಮಣಿಪಾಲ ಪೊಲೀಸರಿಗೆ ಎರಡೂ ಪ್ರಕರಣದಲ್ಲಿ ಆರೋಪಿಗಳು ಕಾರಿನಲ್ಲಿ ಬಂದಿದ್ದು ಗೊತ್ತಾಗಿತ್ತು. ಈ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love