ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ – 2018 – “ಮೇ 26 ರ ಒಳಗೆ ನೋಂದಾಯಿಸಿ 14 ತಿಂಗಳ ಸೌಲಭ್ಯಗಳನ್ನು ಪಡೆಯಿರಿ”
ಮಂಗಳೂರು, ಮೇ 23: ಮಣಿಪಾಲ ಆರೋಗ್ಯಕಾರ್ಡ್ 2018 ಯೋಜನೆಗೆ ಎ. 4ರಂದು ಡಾ. ಹೆಚ್.ಯಸ್. ಬಲ್ಲಾಳ್ – ಪ್ರೊ. ಚಾನ್ಸೆಲ್ಲ್ಯಾರ್ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರು ಮಣಿಪಾಲದ ಡಾ.ಟಿ.ಎಂ.ಪೈ ಹಾಲ್‍ನಲ್ಲಿ ಚಾಲನೆ ನೀಡಿದರು.
ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವ ಉದ್ದೇಶದಿಂದ 18 ವರ್ಷಗಳ ಮೊದಲು ಮಣಿಪಾಲ ವಿಶ್ವವಿದ್ಯಾಲಯವು ತನ್ನ ಸಾಮಾಜಿಕ ಉಪಕ್ರಮದ ಅಂಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯನ್ನು ಪರಿಚಯಿಸಿತು. ಮಣಿಪಾಲ ಆರೋಗ್ಯ ಕಾರ್ಡ್ ಒಂದು ಕೊಡೆಯಂತೆ ಇದ್ದು ಅಗತ್ಯದ ವೇಳೆಯಲ್ಲಿ ಸಂರಕ್ಷಣೆ ನೀಡುವುದು. ಇದು ಭಾರತದಲ್ಲೇ ಅತೀದೊಡ್ಡ ವಿಮಾರಹಿತ ಮತ್ತು ಸರ್ಕಾರೇತರ ಆರೋಗ್ಯ ಕಾಳಜಿಯ ಯೋಜನೆಯಾಗಿದೆ. 2017ರಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ, 2,54,934 ಸದಸ್ಯರುಗಳನ್ನು ನೋಂದಾಯಿಸಿದೆ. ಈ ಯೋಜನೆ ಕರಾವಳಿ ಕರ್ನಾಟಕದಲ್ಲಿರುವ ಮಣಿಪಾಲ ಸಮೂಹದ ಐದು ಆಸ್ಪತ್ರೆಗಳಾದ ಕೆಎಂಸಿ ಆಸ್ಪತ್ರೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೆಎಂಸಿ ಆಸ್ಪತ್ರೆ ಅತ್ತಾವರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಮಣಿಪಾಲ ಮತ್ತು ಮಂಗಳೂರಿನ ಎರಡು ಡೆಂಟಲ್ ಕಾಲೇಜುಗಳಾದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಇಲ್ಲಿ ಅನ್ವಯವಾಗುವುದು ಹಾಗೂ ಮಣಿಪಾಲ ಆರೋಗ್ಯ ಕಾರ್ಡುದಾರರು ಇಲ್ಲಿ ರಿಯಾಯತಿ ಪಡೆಯಬಹುದು.
2018 ಮೇ 26 ರ ಒಳಗೆ ಆರೋಗ್ಯ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವರಿಗೆ 14 ತಿಂಗಳ ಕಾಲಾವಧಿ ಅಂದರೆ 1 ಜೂನ್ 2018 ರಿಂದ 31 ಜುಲೈ 2019 ರವರೆಗೆ ಸೌಲಭ್ಯಗಳು ಸಿಗಲಿವೆ. ಮಣಿಪಾಲ ಆರೋಗ್ಯಕಾರ್ಡಿನ ನೊಂದಾವಣೆ ಪ್ರಕ್ರಿಯೆಯು ಬಹಳ ಸರಳವಾಗಿದೆ. ಮಣಿಪಾಲ ಆರೋಗ್ಯ ಕಾರ್ಡಿನ ಸದಸ್ಯತನ ಶುಲ್ಕ ವ್ಯಕ್ತಿಗತ ಕಾರ್ಡಿಗೆ (iಟಿಜiviಜuಚಿಟ ಛಿಚಿಡಿಜ) ಕೇವಲ 250 ರೂಪಾಯಿಗಳು ಮತ್ತು ಕೌಟುಂಬಿಕ ಕಾರ್ಡ್‍ಗೆ (ಜಿಚಿmiಟಥಿ ಛಿಚಿಡಿಜ) 520 ರೂಪಾಯಿಗಳು. ಕುಟುಂಬದಲ್ಲಿ- ಕಾರ್ಡ್‍ದಾರರು, ಅವರ ಸಂಗಾತಿ ಮತ್ತು 25 ವರ್ಷ ವಯಸ್ಸಿಗಿಂತ ಕೆಳಗಿನ ಎಲ್ಲಾ ಅವಲಂಬಿತ ಮಕ್ಕಳು ಬರುತ್ತಾರೆ. ಕೌಟುಂಬಿಕ ಕಾರ್ಡ್ ಯೋಜನೆಯ ಅಡಿಯಲ್ಲಿ ಪ್ರೈಮರಿ ಕಾರ್ಡ್ ಅನ್ನು ಹೊಂದಿರುವವರಿಗಾಗಿ, ಪ್ರತಿ ಹೆತ್ತವರಿಗೆ ರೂ.100/- ರಂತೆ ಒಂದು ಹೆಚ್ಚುವರಿ ಕಾರ್ಡ್ ಸಹ ಲಭ್ಯವಿರುತ್ತದೆ. ಈ ಕಾರ್ಡ್ ಮೂಲಕ ಹಲವಾರು ಹೊರರೋಗಿ ಮತ್ತು ಒಳರೋಗಿ ಸೌಲಭ್ಯಗಳನ್ನು ಮಂಗಳೂರು, ಉಡುಪಿ, ಕಾರ್ಕಳ ಮತ್ತು ಮಣಿಪಾಲದಲ್ಲಿ ಪಡೆಯಬಹುದು.