Home Mangalorean News Kannada News ಮಣಿಪಾಲ: ಗಿಫ್ಟ್ ಹೆಸರಿನಲ್ಲಿ 46 ಲಕ್ಷ ಕಳೆದು ಕೊಂಡ ಪೆರಂಪಳ್ಳಿ ಮಹಿಳೆ

ಮಣಿಪಾಲ: ಗಿಫ್ಟ್ ಹೆಸರಿನಲ್ಲಿ 46 ಲಕ್ಷ ಕಳೆದು ಕೊಂಡ ಪೆರಂಪಳ್ಳಿ ಮಹಿಳೆ

Spread the love

ಮಣಿಪಾಲ: ವಿದೇಶದಲ್ಲಿ ಕೆಲಸ ಮಾಡಿಕೊಂಡ ಮಹಿಳೆಯೋರ್ವರು ಕ್ರಿಸ್ಮಸ್ ಗಿಫ್ಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಳೆದು ಕೊಂಡ ಘಟನೆ ಮಣಿಪಾಲ ಸಮೀಪದ ಪೆರಂಪಳ್ಳಿಯಲ್ಲಿ ವರದಿಯಾಗಿದೆ

ಪೆರಂಪಳ್ಳಿ ಸಮೀಪದ ಅಲ್ಫೋನ್ಸ್ ಡಿಸೋಜಾರ ಪತ್ನಿ ಮೆಟಿಲ್ಡಾ ಹಿಲ್ಡಾ ಡಿಸೋಜಾ ಮೋಸ ಹೋದ ಮಹಿಳೆ

ಮೆಟಿಲ್ಡಾ ಡಿಸೋಜಾ  ಇಸ್ರೇಲ್‌ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದವರು ಫೇಸ್ ಬುಕ್ ನಲ್ಲಿ ಟೈಲರ್ ಮೈಕ್ ಎಂಬವರ ಪರಿಚಯ ಆಗಿ ರಾಯಲ್ ಎಕ್ಸ್‌‌‌ಪ್ರೆಸ್ ಸರ್ವೀಸ್‌ ಎಂಬ ಕಂಪೆನಿಯಿಂದ ಕ್ರಿಸ್‌ಮಸ್ ಗಿಪ್ಡ್‌ ಕಳುಹಿಸಿದ್ದು, ಅದರ ಎಲ್ಲಾ ಚಾರ್ಜನ್ನು ಅವರೇ ಕಟ್ಟಿರುವುದಾಗಿ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ ತಿಳಿಸಿದ್ದು, ಹಾಗೂ ಪೋನ್ ನಂಬ್ರ 00447937452474 ಎಂಬುದಾಗಿ ನಂಬ್ರವನ್ನು ನೀಡಿ ನಿಮ್ಮ ಪಾರ್ಸೆಲ್‌ ಕಸ್ಟಮ್‌ನಲ್ಲಿ ಹೋಲ್ಡ್‌ ಮಾಡಿದ್ದಾರೆ ಅದನ್ನು ಕ್ಲಿಯರೆನ್ಸ್ ಮಾಡಲು ರೂ. 900 ಡಾಲರ್ ಹಣವನ್ನು ಕಳುಹಿಸಬೇಕಾಗಿ ರಾಯಲ್ ಎಕ್ಸ್‌‌‌ಪ್ರೆಸ್ ಸರ್ವೀಸ್ ನಿಂದ ಮೇಲ್ ಹಾಗೂ ಪೋನ್ ಮಾಡಿ ತಿಳಿಸಿದ್ದು, ಅದರಂತೆ ಮೆಟಿಲ್ಡಾ ಮನಿಗ್ರಾಮ (GMT) 900 ಡಾಲರನ್ನು ಇಸ್ರೇಲ್‌ ನಿಂದ ಮನಿಗ್ರಾಮ್ ಮಾಡಿ ನಂತರ ಅದೇ ಕಂಪೆನಿಯಿಂದ ಇನ್ನೂ ಹಣ ಬೇಕೆಂದು ಕೇಳಿದಾದ 2,800 ಡಾಲರ್ ಮತ್ತು ಇನ್ನೊಮ್ಮೆ 3,700 ಡಾಲರನ್ನು Nelly Wayne ಎಂಬವರ ಹೆಸರಿಗೆ ಮೊದಲಿನಿಂದ ಟ್ರಾನ್ಸ್‌ ‌‌‌ಫರ್ ಮಾಡಿದ್ದು, ನಂತರ ಭಾರತಕ್ಕೆ ಬಂದ ಬಳಿಕ ಪುನಃ ಹಣ ಕೊಡಬೇಕೆಂದು ಬೇಡಿಕೆ ಇಟ್ಟಾಗ ರೂ. 1,40,000/- ಹಣವನ್ನು ಅದೇ ಕಂಪೆನಿಯ ಏಜೆಂಟ್ ಅಗಸ್ಟಿನ್ ಡೀನ್ ಎಂಬವರ ಅಕೌಂಟಿಗೆ ಹಣವನ್ನು ಕಟ್ಟಿದ್ದು, ಅಲ್ಲದೆ ನಂತರದ ದಿನಗಳಲ್ಲಿಯೂ ಒಟ್ಟು 46 ಲಕ್ಷ ಹಣವನ್ನು ಅದೇ ಕಂಪೆನಿಯ ಅಕೌಂಟಿಗೆ ಮನಿ ಟ್ರಾನ್ಸ್‌‌‌ಫರ್‌‌ ಮಾಡಿದ್ದರು ಆದರೆ ಗಿಫ್ಟ್ ಪಾರ್ಸೆಲ್ ಮಾತ್ರ ಪಡೆಯದೆ ಮೋಸಹೋಗಿದ್ದು ತುಂಬಾ ತಡವಾಗಿ ತಿಳಿದಿದ್ದಾರೆ.

ಈ ಕುರಿತು ಮಣಿಪಾಲ ಠಾಣೆಯಲ್ಲಿ ಮೆಟಿಲ್ಡಾ ದೂರು ದಾಖಲಿಸಿದ್ದು ಅದರಂತೆ ಪೋಲಿಸರು ಐಟಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love

Exit mobile version