Home Mangalorean News Kannada News ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವಕ್ಕೆ ತೋರಿದ ಅವಮಾನ; ಸುಧೀಂದ್ರ ಕುಲಕರ್ಣಿ

ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವಕ್ಕೆ ತೋರಿದ ಅವಮಾನ; ಸುಧೀಂದ್ರ ಕುಲಕರ್ಣಿ

Spread the love

ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವದ ಪ್ರತಿಮೆಗೆ ತೋರಿದ ಅವಮಾನ ಎಂದು ಹಿರಿಯ ಪತ್ರಕರ್ತ ಎಲ್ ಕೆ ಆಡ್ವಾಣಿ ಅವರ ಮಾಧ್ಯಮ ಸಲಹೆಗಾರ ಸುಧೀಂದ್ರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

Sudheendra_kulakarni_in_manipal 17-10-2015 11-48-21

ಅವರು ಶನಿವಾರ ಮಣಿಪಾಲದಲ್ಲಿ ಮಾಧ್ಯಮವ್ಯಕ್ತಿಗಳೊಂದಿಗೆ ಮಾತನಾಡಿ ಶಿವಶೇನೆಯವರು ನನಗೆ ಕಪ್ಪು ಮಸಿ ಬಳಿದಿದ್ದಲ್ಲ ಬದಲಾಗಿ ದೇಶದ ಪ್ರತಿಮೆಗೆ ಅವರು ಅಗೌರವ ತೋರಿದ್ದಾರೆ ಈ ತರದ ಪ್ರಜಾಪ್ರಭುತ್ವ ವಿರೋಧಿ ಪ್ರವತ್ತಿಗಳೂ ತಲೆ ಎತ್ತಬಾರದು ಇದರಿಂದ ನಮ್ಮ ದೇಶದ ಪ್ರಜಾಪ್ರಭುತ್ವದ ಘನತೆಗೆ ದಕ್ಕೆ ತರುತ್ತದೆ. ನಮ್ಮದು ಧಾರ್ಮಿಕ ಸಹಿಷ್ಟುತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿದ ದೇಶ ಅದಕ್ಕೆ ಅವರು ಮಸಿ ಬಳಿದಿದ್ದಾರೆ. ನಾವು ಆಯೋಜಿಸಿದ ಕಾರ್ಯಕ್ರಮ ಮಹತ್ವದ ವಿಷಯಕ್ಕಾಗಿ ಮಾಡಿದ್ದು ಯಾವುದೇ ಕಾನೂನಿನ ವಿರುದ್ದ ವಾಗಿ ಮಾಡಿಲ್ಲ ಅದು ನಮ್ಮ ಅಧಿಕಾರ. ತಾನೂ ಕಾರ್ಯಕ್ರಮದ ಹಿಂದಿನ ದಿನ ಶಿವಶೇನೆಯ ನಾಯಕ ಉದ್ಭವ್ ಠಾಕ್ರೆಯವರನ್ನು ಭೇಟಿಯಾಗಲು ಹೋದಾಗ ಅವರಿಗೆ ನಾನು ಹೇಳಿದ್ದೆ ಪ್ರತಿಭಟನೆ ಮಾಡುವುದು ನಿಮ್ಮ ಅಧಿಕಾರ ನಿಮ್ಮ ಪ್ರತಿಭಟನೆ ಕಾನೂನಾತ್ಮಕ ರೀತಿಯಲ್ಲಿ ಮಾಡಲು ನಿಮಗೆ ಸಂಪೂರ್ಣ ಅಧಿಕಾರ ಇದೆ ನಿಮ್ಮ ಅಧಿಕಾರವನ್ನು ನಾವು ಸನ್ಮಾನಿಸುತ್ತೇವೆ ಅದರಂತೆ ನಮ್ಮ ಅಧಿಕಾರವನ್ನೂ ನೀವೂ ಸನ್ಮಾನಿಸಿ ಇದು ಪ್ರಜಾಪ್ರಭುತ್ವ ದೇಶ ಎಂದು ಹೇಳಿದ್ದೆ ಆದರೆ ನನ್ನ ಮಾತು ಅವರಿಗೆ ಸರಿ ಅನಿಸಿಲ್ಲ ಇರಬಹುದು ಅದಕ್ಕೆ ಅವರು ತಮ್ಮ ಪ್ರತಿಭಟನೆಯನ್ನು ತೋರಿಸಿದ್ದಾರೆ ಅದಕ್ಕೆ ಮುಂಬೈ ಹಾಗೂ ದೇಶದ ಜನ ಪ್ರತಿಕ್ರಿಯೆ ನೀಡಿದ್ದಾರೆ, ಅಡ್ವಾಣಿಜಿಯವರು ಈ ಘಟನೆಯನ್ನು ತೀವ್ರ ಮಾತುಗಳಿಂದ ನಿಂದಿಸಿದ್ದಾರೆ ಶಿವಶೇನೆಯಿಂದ ತನಗೆ ಯಾವುದೇ ರೀತಿಯ ಬೆದರಿಕೆ ಕರೆ ಬಂದಿಲ್ಲ ಆದರೂ ಕೂಡ ಮಹಾರಾಷ್ಟ್ರ ಸರಕಾರ ತಾವಾಗಿಯೇ ತಮಗೆ ಭಧ್ರತೆಯನ್ನು ಒದಗಿಸಿದ್ದಾರೆ.

ಘಟನೆಯಿಂದ ಭಾರತ ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಯ ಮೇಲೆ ಏನಾದರೂ ಪರಿಣಾಮ ಬೀರಿದೆಯೇ ಎಂದು ಕೇಳಿದ ಪ್ರಶ್ನೆಗೆ ನಿಜವಾಗಿಯೂ ಪರಿಣಾಮ ಬೀರಿದೆ. ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರವಲ್ಲದೆ ಭಾರತ ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆ ವಿಷಯದ ಬಗ್ಗೆ ಚರ್ಚೆ ನಡೆಯಲು ಅವಕಾಶವಾಗಿದೆ. ಇದರ ಬಗ್ಗೆ ಹೆಚ್ಚಿನ ಜನ ವಿರೋದ ಮಾಡುತ್ತಿರಬಹುದು ಅದಕ್ಕಿಂತಲೂ ಹೆಚ್ಚು ಜನ ಭಾರತ ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆ ಮುಂದುವರೆಯಬೇಕು ಅಲ್ಲದೆ ಎನಾದರೂ ಪರಿಹಾರ ಸಿಗಬೇಕು ಎಂದು ಬಯಸುತ್ತಿದ್ದಾರೆ. ಈ ಘಟನೆಯಿಂದ ಪಾಕಿಸ್ತಾನಕ್ಕೂ ಕೂಡ ಒಂದು ಸಂದೇಶ ಹೋಗಿದೆ ಅದೇನೆಂದರೆ ಭಾರತದಲ್ಲಿಯೂ ಕೂಡ ಕೆಲವೊಂದು ಜನರಿದ್ದಾರೆ ಅವರು ಪಾಕಿಸ್ತಾನದ ದ್ವೇಶಿಗಳಲ್ಲ ಅವರು ಕೂಡ ಪಾಕಿಸ್ತಾನವನ್ನು ಪ್ರೀತಿಸುತ್ತಾರೆ ಎಂಬ ಸಂದೇಶ ಹೋಗಿದೆ ಎಂದರು.

ಮುಂದಿನ ಮಾರ್ಚನಲ್ಲಿ ಸಾರ್ಕ್ ಸಮ್ಮೇಳನ ಇಸ್ಲಾಮಾಬಾದ್‍ನಲ್ಲಿ ನಡೆಯಲಿದ್ದು ನಮ್ಮ ದೇಶದ ಪ್ರಧಾನಿ ಮೋದಿ ಅಲ್ಲಿಗೆ ಹೋಗಲೇ ಬೇಕು. ಅಲ್ಲದೆ ರಷ್ಯಾದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಅವರನ್ನು ಭೇಟಿಯಾದಾಗ ಷರಿಪ್ ಅವರ ಆಮಂತ್ರಣವನ್ನು ಸ್ವಿಕರಿಸಿದ್ದಾರೆ ಅವರ ಭೇಟಿ ಯಶಸ್ವಿಯಾಗಿ ಹೊಸ ಆಶಯ ವಾತಾವರಣ ನಿರ್ಮಿಸಬೇಕು.

ಭಾರತ ಪಾಕಿಸ್ತಾನಗಳ ನಡುವಿನ ಸಮಸ್ಯೆಗಳಿಗೆ ಯುದ್ದ ಪರಿಹಾರವೇ ಅಲ್ಲ ಭಾರತ ಪಾಕಿಸ್ಥಾನವನ್ನು ಯುದ್ದದಲ್ಲಿ ಸೋಲಿಸಲು ಸಾಧ್ಯವಿಲ್ಲ ಅಂತೆಯೇ ಪಾಕಿಸ್ತಾನ ಭಾರತವನ್ನು ಸೊಲಿಸಲು ಸಾಧ್ಯವಿಲ್ಲ ಸೋಲಿಸಿ ನಮಗೆ ಬೇಕದನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಎರಡು ದೇಶಗಳ ಕಡೆ ಅಣ್ವಸ್ತ್ರಗಳಿವೆ ಒಂದು ವೇಳೆ ಯುದ್ದವಾದರೆ ಅದು ಅಣ್ವಸ್ತ್ರ ಯುದ್ದವಾಗಲಿದೆ ಈ ಒಂದು ಮಾತನ್ನು ಎಲ್ಲರೂ ತಿಳಿದುಕೊಳ್ಳಬೇಕು ಆದ್ದರಿಂದ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಬೇಕು.

ಕಲ್ಬುರ್ಗಿ ಹತ್ಯೆಯ ಹಿನ್ನಲೆಯಲ್ಲಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಾಸು ಮಾಡುವ ಕುರಿತು ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಬೆಳೆಯಬಾರದು ಕಲ್ಬುರ್ಗಿ ಹತ್ಯೆ ನಿಂದನಿಯ ಕ್ರತ್ಯ ಯಾರೇ ಮಾಡಿದರೂ ಶಿಕ್ಷೆ ಆಗಬೇಕು ಇಂತಹ ಘಟನೆಗಳು ದೇಶದ ಇತರ ಕಡೆಗಳಲ್ಲಿ ಕೂಡ ನಡೆದಿದೆ ಅಸಹಿಷ್ಣುತೆ ನಮ್ಮ ದೇಶದ ಸಂಸ್ಕøತಿಯ ಲಕ್ಷಣ ಕುಡ ಅಲ್ಲ ಸರಕಾರ ಸಮಾಜ ನಮ್ಮ ಸಂಸ್ಕøತಿಯನ್ನು ಸಂರಕ್ಷಿಸಬೇಕು. ಪ್ರಶಸ್ತಿಯನ್ನು ವಾಪಾಸು ಮಾಡುವುದು ಅವರ ಅವರ ಸ್ವಾತಂತ್ರ್ಯವಾಗಿದೆ ಅಲ್ಲದೆ ದಾದ್ರಿಯಲ್ಲಿ ನಡೆದ ಘಟನೆ ಕೂಡ ಒಂದು ದೇಶಕ್ಕೆ ಕಳಂಕ ತರುವ ಘಟನೆಯಾಗಿದ್ದು, ಅದನ್ನು ಪ್ರಧಾನಿಯವರು ಇನ್ನಷ್ಟು ಕಟುಶಬ್ದಗಳಲ್ಲಿ ವಿರೋಧಿಸುವುದರೋಂದಿಗೆ ಇನ್ನು ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು.

ದಾವೂದ್ ಇಬ್ರಾಹಿಂ 1993 ರಲ್ಲಿ ನಡೆದ ಭಯೋತ್ಪಾಧನಾ ಕ್ರತ್ಯದಲ್ಲಿ ಆರೋಪಿಯಾಗಿದ್ದು ಅವನನ್ನು ಭಾರತಕ್ಕೆ ಪಾಕಿಸ್ತಾನ ಕಳುಹಿಸಬೇಖು ಇದರಿಂದ ಭಾರತ ಪಾಕಿಸ್ತಾನ ಸಂಬಂಧಕ್ಕೆ ಹೊಸ ಮುನ್ನುಡಿ ಬರೆದಂತಾಗುತ್ತದೆ ಅಂತಹ ವ್ಯಕ್ತಿಗಳನ್ನು ಇಟ್ಟು ಮೈತ್ರಿಯ ಪ್ರಕ್ರಿಯೆಗೆ ಏನು ಕೆಲಸ ಮಾಡಲು ಸಾಧ್ಯವಿಲ್ಲ. ಶಾಂತಿ ಮಾತುಕತೆಗೆ ಇಂದಿನ ಸರಕಾರದಂತೆ ಹಿಂದಿನ ಸರಕಾರಗಳೂ ಕೂಡ ತಮ್ಮ ಸೇವೆಯನ್ನು ನೀಡಿದ್ದಾರೆ. ವಾಜಪೇಯಿ ಅವರು ಶಾಂತಿ ಸುಧಾರಿಸಲು ಬಸ್ ಯಾತ್ರೆ ಆರಂಭಿಸಿದರು ಅದರಲ್ಲಿ ತಾನೂ ಕೂಡ ಭಾಗಿಯಾಗಿದ್ದೆ ಅದರ ಬಳಿಕ ಬಂದ ಮನಮೋಹನ್ ಸಿಂಗ್ 10 ವರುಷ ಶಾಂತಿ ಸಂಧಾನಕ್ಕಾಗಿ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡರು. ಪ್ರಧಾನಿ ನರೇಂದ್ರ ಮೋದಿ ಹಿಂದೆ ವಾಜಪೇಯಿ ಮತ್ತು ಸಿಂಗ್ ನಡೆಸಿದ ಹೋಂ ವರ್ಕ್ ಮುಂದುವರೆಸಿಕೊಂಡು ಹೋಗಬೇಕು ಎಂದರು.


Spread the love

Exit mobile version