Home Mangalorean News Kannada News ಮತಗಳಿಕೆಯ ಉದ್ದೇಶದಿಂದ ಬಿಜೆಪಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ; ಎಐಸಿಸಿ ಸದಸ್ಯ ಅಮೃತ್ ಶೆಣೈ

ಮತಗಳಿಕೆಯ ಉದ್ದೇಶದಿಂದ ಬಿಜೆಪಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ; ಎಐಸಿಸಿ ಸದಸ್ಯ ಅಮೃತ್ ಶೆಣೈ

Spread the love

ಮತಗಳಿಕೆಯ ಉದ್ದೇಶದಿಂದ ಬಿಜೆಪಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ; ಎಐಸಿಸಿ ಸದಸ್ಯ ಅಮೃತ್ ಶೆಣೈ

ಉಡುಪಿ: ಬಿಜೆಪಿ ಪಕ್ಷದವರು ಮತಗಳಿಕೆಯ ಉದ್ದೇಶದಿಂದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಮಾಡುತ್ತಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಐದು ವರ್ಷಗಳ ಆಡಳಿತದಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಂಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ ಅಮೃತ್ ಶೆಣೈ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಬಿಜೆಪಿಗರು ಕೋಮುದ್ವೇಷವನ್ನು ಹರಡುವುದರೊಂದಿಗೆ ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದೇ ಅವರ ಮುಖ್ಯ ಗುರಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಭಾಗದ ಸಂಸದರಾದ ಶೋಭಾ ಕರಂದ್ಲಾಜೆಯವರು ಈ ಕ್ಷೇತ್ರಕ್ಕೆ ಏನನ್ನು ಮಾಡದೇ ಹೋದರೂ ಕೂಡ ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ.

ಹಿಂದೂ ದೇವಾಲಯಗಳೀಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಬಿಜೆಪಿಗರು ಹೇಳುತ್ತಿರುವುದು ಶುದ್ದ ಸುಳ್ಳೂ, ಚುನಾವಣಾ ಸಮಯದಲ್ಲಿ ಕೇವಲ ಮತಗಳಿಕೆಯ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ಅವರು ನೀಡುವುದು ಬಿಟ್ಟರೆ ವಾಸ್ತವ ಸಂಗತಿಯೇ ಬೇರೆ ಇದೆ. ದೇವಾಲಯಗಳಿಗೆ ಸರಕಾರ ನೀಡುವ ತಸ್ತಿಕ್ ಹಣ ಹಿಂದಿನ ಬಿಜೆಪಿ ಸರಕಾರ 2008-2013 ವರೆಗಿನ ಅವಧಿಯಲ್ಲಿ ರೂ. 24000 ದಂತೆ ನೀಡುವುದಾಗಿ ಹೇಳಿತ್ತು ಆದರೇ ಯಾವುದೇ ಹಣ ಬಿಡುಗಡೆ ಮಾಡದೇ ಬಾಕಿ ಇರಿಸಿತ್ತು. ಬಳಿಕ ಬಂದ ಕಾಂಗ್ರೆಸ್ ಸರಕಾರ ಅದನ್ನು ರೂ. 48000 ಕ್ಕೆ ಏರಿಸಿದ್ದಲ್ಲದೆ ಹಿಂದಿನ ಬಿಜೆಪಿ ಸರಕಾರದ ಬಾಕಿಯನ್ನು ಕೂಡ ಪಾವತಿ ಮಾಡಿದೆ.

ನೀಲಾವರ ಗೋಶಾಲೆಗೆ ಅನುದಾನ ನೀಡಿರುವುದು ಬಿಜೆಪಿ ಸರಕಾರ ಅಲ್ಲ ಬದಲಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎನ್ನುವುದು ಬಿಜೆಪಿಗರಿಗೆ ತಿಳಿಯಬೇಕಾದ ವಿಚಾರ. ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಕಲ್ಯಾಣಮಂಟಪಗಳಿಗೆ ಯಾವುದೇ ರೀತಿಯ ತೆರಿಗೆಯನ್ನು ರಾಜ್ಯ ಸರಕಾರ ಹಾಕುತ್ತಿಲ್ಲ ಆದರೆ ಬಿಜೆಪಿ ನೇತೃತ್ವದ ಮೋದಿ ಸರಕಾರ ಮಾತ್ರ ಕಲ್ಯಾಣಮಂಟಪಗಳಿಗೆ ಜಿಎಸ್ ಟಿಯನ್ನು ಹಾಕುತ್ತಿದೆ ಈ ಬಗ್ಗೆ ಯಾಕೆ ಬಿಜೆಪಿಗರು ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಪ್ರತಿಬಾರಿ ಗೋಹತ್ಯಾ ನಿಷೇಧ ಕಾಯಿದೆಯ ಬಗ್ಗೆ ಮಾತನಾಡುವ ಬಿಜೆಪಿಗರು ಆಯ್ದ ರಾಜ್ಯಗಳಿಗೆ ಮಾತ್ರ ಗೋಹತ್ಯ ನಿಷೇಧ ಕಾಯ್ದೆ ಬರಬೇಕು ಎಂದು ವಾದಿಸುತ್ತಾರೆ. ಕೇರಳ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ವಿಚಾರದ ಬಗ್ಗೆ ಬಿಜೆಪಿಗರು ಮೌನ ವಹಿಸಿದ್ದಾರೆ. ಅಲ್ಲದೆ ಗೋ ಮಾಂಸ ರಫ್ತಿನಲ್ಲೂ ಕೂಡ ಭಾರತ ಮೊದಲ ಸ್ಥಾನದಲ್ಲಿದೆ ಅದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಚುನಾವಣೆಯಲ್ಲಿ ರಾಮ ಮಂದಿರದ ಪ್ರಸ್ತಾಪವನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಕಳೆದ 25 ವರ್ಷಗಳಿಂದ ಇದೊಂದು ಕೇವಲ ಚುನಾವಣಾ ವಿಚಾರವಾಗಿದೆ ಬಿಟ್ಟರೆ ಯಾವುದೇ ರೀತಿಯ ಅಭಿವೃದ್ಧಿಯನ್ನು ಕಂಡಿಲ್ಲ. ಕಳೆದ 4 ವರ್ಷಗಳಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ರಾಮಮಂದಿರದ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ಕೂಡ ಯಾವುದೇ ರೀತಿಯ ಪ್ರಯತ್ನ ಮಾಡದೆ ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೇವಲ ಚುನಾವಣೆಯ ಸಮಯದಲ್ಲಿ ಮತಗಳಿಕೆಯ ಉದ್ದೇಶವನ್ನು ಇಟ್ಟುಕೊಂಡು ಪರಸ್ಪರ ಜನರ ಮಧ್ಯೆ ದ್ವೇಷ ಭಾವನೆಯನ್ನು ಹರಡುವುದನ್ನು ಬಿಟ್ಟು ಬಿಜೆಪಿ ನೈಜ ವಿಚಾರವನ್ನು ಜನತೆಗೆ ತಿಳಿಸಲಿ ಎಂದು ಅವರು ಹೇಳಿದ್ದಾರೆ.


Spread the love

Exit mobile version