Home Mangalorean News Kannada News ಮತದಾರರ ಜಾಗೃತಿಗಾಗಿ ಸ್ವೀಪ್ ವತಿಯಿಂದ ಅತ್ಯಾಕರ್ಷಕ ಪೋಸ್ಟರ್ ಬಿಡುಗಡೆ

ಮತದಾರರ ಜಾಗೃತಿಗಾಗಿ ಸ್ವೀಪ್ ವತಿಯಿಂದ ಅತ್ಯಾಕರ್ಷಕ ಪೋಸ್ಟರ್ ಬಿಡುಗಡೆ

Spread the love

ಮತದಾರರ ಜಾಗೃತಿಗಾಗಿ ಸ್ವೀಪ್ ವತಿಯಿಂದ ಅತ್ಯಾಕರ್ಷಕ ಪೋಸ್ಟರ್ ಬಿಡುಗಡೆ

ಉಡುಪಿ: ಸ್ಥಳೀಯ ಸಂಸ್ಕøತಿ ಮತ್ತು ವೈವಿಧ್ಯವನ್ನು ಹೊಂದಿರುವ ಚಿತ್ರ ಹಾಗೂ ಘೋಷವಾಕ್ಯಗಳೊಂದಿಗಿನ ಪೋಸ್ಟರ್ಸ್ಗಳನ್ನು ಹಾಗೂ ಹೋರ್ಡಿಂಗ್ಸ್ ಡಿಸೈನ್ಗಳನ್ನು ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಬಿಡುಗಡೆ ಮಾಡಿದರು.

ಸ್ವೀಪ್ ಸಮಿತಿಯಡಿ ರಚಿಸ್ಪಲ್ಪಟ್ಟ ಈ ಚಿತ್ರಗಳು ಅತ್ಯಾಕರ್ಷಕವಾಗಿದ್ದು, ಕುಂದಾಪುರದ ಆಡುಭಾಷೆಯ ಸೊಗಡನ್ನು ಕೆಲವು ಘೋಷವಾಕ್ಯಗಳು ಒಳಗೊಂಡಿವೆ. ಸುಮಾರು 15 ಪೋಸ್ಟರ್ಸ್ ಡಿಸೈನ್ಸ್ಗಳನ್ನು ಬಿಡುಗಡೆ ಮಾಡಲಾಯಿತು. ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಸ್ವೀಪ್ ಸಮಿತಿಯಲ್ಲಿರುವ ಪಿಡಿಒಗಳಾದ ಮಹೇಶ್ ಹಾಗೂ ಪ್ರಮೀಳಾ ಅವರು ಇದ್ದರು.

‘ಪ್ರತಿ ಹೆಜ್ಜೆಗೂ ಬೇಕು ಎಚ್ಚರಿಕೆ, ಪ್ರತಿ ಮತವೂ ಮುಖ್ಯ ಬನ್ನಿ ಮತದಾನಕ್ಕೆ, ಕನಸು, ವಿಕಾಸ, ಸುರಕ್ಷತೆಗಾಗಿ ನಮ್ಮ ಮತದಾನ, ಸಂತಸದಿ ಮತದಾನಕ್ಕೆ ತಯಾರಾಗಿ, ಕತ್ತಲಿನಿಂದ ಬೆಳಕಿನೆಡೆಗೆ ಮತದಾನದಿಂದ ಮಂದಹಾಸದೆಡೆಗೆ, ಎಂಥ ಕೆಲ್ಸಿದ್ರೂ ವೋಟ್ ಹಾಕೂದೊಂದು ಮರೂಕಾಗ, ಓಟ್ ಪಾಡೆರೆ ಉಂಡು, ಬೇಗ ಪೋಯಿಯೇ? ಮುಂತಾದ ಅರ್ಥಗರ್ಭಿತ ಘೋಷವಾಕ್ಯ ಹಾಗೂ ಚಿತ್ರಗಳನ್ನೊಳಗೊಂಡ ಪೋಸ್ಟರ್ಗಳು ಮತದಾನ ಜಾಗೃತಿಯಲ್ಲಿ ಪರಿಣಾಮಕಾರಿಯಾಗಲಿದೆ.


Spread the love

Exit mobile version