ಮತ್ತೆ ನಾಲಿಗೆ ಹರಿಯಬಿಟ್ಟ ಅರಣ್ಯಧಿಕಾರಿ ಸಂಜೀವ ಪೂಜಾರಿ – ಹಿಂದೂ ಜಾಗರಣ ವೇದಿಕೆಯಿಂದ ಪೊಲೀಸರಿಗೆ ದೂರು
ಮಂಗಳೂರು: ಬಿಲ್ಲವ ಸಮಾಜದ 1ಲಕ್ಷ ಹುಡುಗಿಯರು ವೇಶ್ಯೆಯಾಗಲು ಹಿಂದೂ ಸಂಘಟನೆಯ ಯುವಕರು ಕಾರಣ ಮತ್ತು ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದು ಹುಡುಗರು ಎಂದು ಹೇಳಿಕೆ ನೀಡಿರುವ ಕಾಣಿಯೂರಿನ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ದ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಅರಣ್ಯಧಿಕಾರಿಯಾಗಿ ಪಂಜದಲ್ಲಿ ಸೇವೆ ಸಲ್ಲಿಸುತಿದ್ದ ಸಂಜೀವ ಪೂಜಾರಿ ಹಿಂದೂ ಸಮಾಜದ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನ ಕಾರಿಯಾಗಿ ಮಾತನಾಡಿದ್ದು ಈ ಮಾತುಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನಲೆ ಹಿಂದು ಜಾಗರಣ ವೇದಿಕೆಯ ಗಮನಕ್ಕೆ ಬಂದ ಕೂಡಲೇ ಬೆಳ್ಳಾರೆ ಠಾಣೆಯಲ್ಲಿ ಮತ್ತು ಮಂಗಳೂರು ಅರಣ್ಯ ಅಧಿಕಾರಿ ಅಂತೋಣಿ ಮರಿಯಪ್ಪ ಇವರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಿದ್ದಾರೆ. ನನ್ನ ಬಳಿ ಇದಕ್ಕೆ ಹತ್ತು ಸಾವಿರ ದಾಖಲೆ ಇದೆ. ಹಿಂದುತ್ವದ ಹುಡುಗರು ಇವರನ್ನು ಸೂಳೆಯರಾಗಿ ಮಾಡಿದ್ದಾರೆ. ಭಜನೆ ಮಾಡಿ ರಾತ್ರಿ ವೇಳೆ ಅವರನ್ನು ಮರದಡಿಯಲ್ಲಿ ಮಲಗಿಸುತ್ತಾರೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಅಪಘಾತವಾದಲ್ಲಿ ಮುಸ್ಲಿಂ ಯುವಕರು ಸಹಾಯಕ್ಕೆ ಬರುತ್ತಾರೆ. ಹಿಂದು ಹುಡುಗರು ಫೋಟೊ ತೆಗೆದು ಹಂಚುತ್ತಾರೆ ಇತ್ಯಾದಿಯಾಗಿ ಹಿಂದು ಧರ್ಮದವರನ್ನು ಅವಾಚ್ಯವಾಗಿ ಮಾತನಾಡಿದ್ದಾರೆ.
ಈತ ಈ ಹಿಂದೆಯೂ ಇಂತಹ ವಿಕೃತ ಮನಸ್ಥಿತಿಯಿಂದ ಹಿಂದುಗಳ ಭಜನೆ ಬಗ್ಗೆ ಟೀಕೆ ಮಾಡಿ ಸೇವೆಯಿಂದ ಅಮಾನತು ಆಗಿದ್ದರು. ಆನಂತರ, ಸೇವೆಗೆ ಸೇರಿದ್ದ ಸಂಜೀವ ಪೂಜಾರಿ ಸಮಯದಲ್ಲಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಹಿಂಜಾವೇ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಮತ್ತಿತರರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.