ಮತ್ಸ್ಯಸಂಪತ್ತಿನ ಸಂರಕ್ಷಣೆಗೆ ಕಾನೂನು ಪಾಲಿಸಿ- ಪ್ರಮೋದ್ ಮಧ್ವರಾಜ್ 

Spread the love

ಮತ್ಸ್ಯಸಂಪತ್ತಿನ ಸಂರಕ್ಷಣೆಗೆ ಕಾನೂನು ಪಾಲಿಸಿ- ಪ್ರಮೋದ್ ಮಧ್ವರಾಜ್ 

ಉಡುಪಿ :ಮೀನುಗಾರಿಕೆ ವೃತ್ತಿ ನಿರಂತರವಾಗಿರಬೇಕಾದರೆ ವಿಜ್ಞಾನಿಗಳು ಹೇಳುವುದನ್ನು ಕೇಳುವುದರ ಜೊತೆಗೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಇದೆ ಎಂದು ಮೀನುಗಾರಿಕೆ ,ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಶುಕ್ರವಾರ ಮೀನುಗಾರಿಕೆ ಇಲಾಖೆ ಮತ್ತು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಅಒಈಖI) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನೀಲಿಕ್ರಾಂತಿ ಯೋಜನೆಯಡಿ ಸಮುದ್ರ ಮೀನುಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿವಿಧ ಕಾರಣಗಳಿಂದ ಮತ್ಸ್ಯ ಸಂಪತ್ತು ಅಳಿವಿನ ಅಂಚಿನಲ್ಲಿದ್ದು, ಮೀನುಗಾರರು ಮೀನು ಸಂರಕ್ಷಣೆಗೂ ಮುಂದಾಗಬೇಕಿದೆ. ನಿಷೇಧಿತ ಮೀನುಗಾರಿಕೆ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾವೆಲಿಂಗ್, ಅವೈಜ್ಞಾನಿಕ ಮೀನುಗಾರಿಕೆ, ಹಾಗೂ ನೀತಿ-ನಿಯಮದ ಬಗ್ಗೆ ಅರಿವು ಮೂಡಿಸುವುದು ನೀಲಿಕ್ರಾಂತಿ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮೀನುಗಾರ ಮಹಿಳೆಯರು ಪಡೆದ ಸಾಲದ ಮೇಲಿನ ಬಡ್ಡಿ ಸಹಾಯಧನ ಒಟ್ಟು 14.72ಕೋಟಿ ರೂ. ನೀಡಿದ್ದು ಉಡುಪಿ ತಾಲೂಕಿನಲ್ಲಿ ಪೂರ್ಣ ಪಾವತಿಯಾಗಿದೆ.

ಜನವರಿ ತಿಂಗಳ ಡೀಸೆಲ್ ಸಹಾಯಧನ ಪಾವತಿ ಬಿಲ್ಲು ಸಿದ್ಧವಾಗಿದ್ದು ಖಾತೆಗೆ ಶೀಘ್ರ ಜಮೆಯಾಗಲಿದೆ. ಬಜೆಟ್ ಘೋಷಣೆಯಂತೆ ಏ. 1ರಿಂದ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ದೊರೆಯಲಿದೆ. ಮೀನು ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಾಗಲಿದ್ದು ಮಾರಾಟವಾಗದೆ ಉಳಿದ ಮೀನನ್ನು ಮರುದಿನ ಮಾರಬಹುದು. ಬಳಿಕ ಮೀನುಗಾರರಿಗೆ ಮೀನುಗಾರಿಕಾ ಕಿಟ್‍ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಮಂಗಳೂರು ಸಂಶೋಧನಾ ಸಂಸ್ಥೆಯ ಕೇಂದ್ರೀಯ ಸಮುದ್ರ ಮೀನುಗಾರಿಕಾ ಮುಖ್ಯಸ್ಥರಾದ ಡಾ.ಪ್ರತಿಭಾ ರೋಹಿತ್ ಉಪಸ್ಥಿತರಿದ್ದರು.

ಉಡುಪಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಾಶ್ರ್ವನಾಥ್.ಪಿ ಸ್ವಾಗತಿಸಿ, ವಂದಿಸಿದರು, ಶಿವಕುಮಾರ್ ನಿರೂಪಿಸಿದರು.


Spread the love