ಮತ್ಸ್ಯ ಬಳಕೆಗೆ ಗೊಂದಲ ಬೇಡ: ಹಸಿಮೀನು ಮದ್ಯವರ್ತಿ ಸಂಘಟನೆ

Spread the love

ಮತ್ಸ್ಯ ಬಳಕೆಗೆ ಗೊಂದಲ ಬೇಡ: ಹಸಿಮೀನು ಮದ್ಯವರ್ತಿ ಸಂಘಟನೆ

ಮಂಗಳೂರು: ಇತ್ತೀಚೆಗೆ ವಿವಿಧ ಮಾಧ್ಯಮಗಳಲ್ಲಿ ಮತ್ಸ್ಯಗಳಿಗೆ ರಸಾಯನಿಕ ಬಳಸಿ ವಿತರಿಸಲಾಗುತ್ತಿದೆ ಎಂಬುದಾಗಿ ಅಪಪ್ರಚಾರ ನಡೆಸಲಾಗುತ್ತಿದ್ದು, ಈ ಬಗ್ಗೆ ಮತ್ಸ್ಯ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಹಸಿಮೀನು ಮಧ್ಯವರ್ತಿಗಳ ಸಂಘಟನೆ ಮಂಗಳೂರು ಗ್ರಾಹಕರಿಗೆ ಕರೆ ನೀಡಿದೆ.

ಮಂಗಳೂರು ನಗರದ ಬಂದರಿನ ಧಕ್ಕೆಯು ಕರಾವಳಿಯಲ್ಲಿ ಪ್ರಮುಖ ಸಮುದ್ರೋತ್ಪನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಈ ಬಂದರಿನಿಂದ ವಿತರಿಸಲ್ಪಡುವ ಯಾವುದೇ ಮತ್ಸ್ಯೋತ್ಪನ್ನಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಮತ್ಸ್ಯ ಶೇಖರಣೆಗೆ ಸಾಂಪ್ರಾದಾಯಿಕ ಪದ್ದತಿಯಾದ ಶೀತಲೀಕರಣ ವ್ಯವಸ್ಥೆಯನ್ನೇ ಉಪಯೋಗಿಸಲಾಗುತ್ತದೆಯೇ ಹೊರತು, ಯಾವುದೇ ಕಾರಣಕ್ಕೂ ಆರೋಗ್ಯ ಮಾರಕ ರಸಾಯನಿಕಗಳನ್ನು ಉಪಯೋಗಿಸಲಾಗುವುದಿಲ್ಲ.ಆದುದರಿಂದ ಕರಾವಳಿಯಿಂದ ವಿತರಿಸಲಾಗುತ್ತಿರುವ ಮತ್ತು ಮಾರಾಟ ಮಾಡಲಾಗುತ್ತಿರುವ ಮತ್ಸ್ಯಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗಬಾರದು ಮತ್ತು ಮತ್ಸ್ಯವು ಉತ್ತಮ ಪೌಷ್ಟಿಕ ಆಹಾರವಾಗಿ ಲಭ್ಯವಿರುವುದರಿಂದ ಯಥೇಚ್ಚವಾಗಿ ಗ್ರಾಹಕರು ಯಾವುದೇ ಭಯವಿಲ್ಲದೆ ಬಳಕೆ ಮಾಡಬಹುದು ಎಂದು ಮಂಗಳೂರು ಬಂದರಿನ ಮೀನು ಮಾರಾಟ ಮತ್ತು ಕಮಿಷನ್ ಎಂಜೆಟ್‌ರ ಸಂಘದ ಅಧ್ಯಕ್ಷರಾದ ಭರತ್ ಭೂಷಣ್ ರವರು ಹೇಳಿಕೆ ನೀಡಿರುತ್ತಾರೆ.


Spread the love