Home Mangalorean News Kannada News ಮದುವೆ ಸಮಾರಂಭದಲ್ಲಿ ಅಶಕ್ತ ಕುಟುಂಬಕ್ಕೆ ನೆರವಾಗುವ‌ ಮೂಲಕ ಇತರರಿಗೆ ಪ್ರೇರಣೆಯಾದ ಸಂಜೀವಿನಿ ದಂಪತಿಗಳು

ಮದುವೆ ಸಮಾರಂಭದಲ್ಲಿ ಅಶಕ್ತ ಕುಟುಂಬಕ್ಕೆ ನೆರವಾಗುವ‌ ಮೂಲಕ ಇತರರಿಗೆ ಪ್ರೇರಣೆಯಾದ ಸಂಜೀವಿನಿ ದಂಪತಿಗಳು

Spread the love

ಮದುವೆ ಸಮಾರಂಭದಲ್ಲಿ ಅಶಕ್ತ ಕುಟುಂಬಕ್ಕೆ ನೆರವಾಗುವ‌ ಮೂಲಕ ಇತರರಿಗೆ ಪ್ರೇರಣೆಯಾದ ಸಂಜೀವಿನಿ ದಂಪತಿಗಳು

ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಮೂಲಕ ಹಿಂದುತ್ವದ ಪರಿಕಲ್ಪನೆಯನ್ನು ಮೂಡಿಸಿಕೊಂಡು ಅಮೃತಸಂಜೀವಿನಿ® ಮಂಗಳೂರು ಸಂಸ್ಥೆಯ ಮೂಲಕ ಸೇವೆಯನ್ನೇ ಉಸಿರಾಗಿಸಿಕೊಂಡವರು ಗಣೇಶ್ ಕುಲಾಲ್….

ಗಣರಾಜ್ ಭಟ್ ಕೆದಿಲ ಇವರ ಗರಡಿಯಲ್ಲಿ ಪಳಗಿ ಸದಾ ಹಸನ್ಮುಕಿಯಾದ ಇವರು ಹಿಂದುತ್ವದ ವಿಚಾರಗಳಿಗೆ ಬಂದಾಗ ನಿಷ್ಠುರವಾಗಿರುತ್ತಾರೆ.

ಅಮೃತಸಂಜೀವಿನಿ® ಮಂಗಳೂರು ಸಂಸ್ಥೆ ಅಶಕ್ತ ಸಮಾಜವನ್ನು ಸಶಕ್ತಗೊಳಿಸುವ ಉದ್ದೇಶದಿಂದ ಜನ್ಮ‌ ಪಡೆದ ಸಂಸ್ಥೆ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಗಣೇಶ್ ಕುಲಾಲ್ ಅವರದ್ದು ಸಿಂಹ ಪಾಲು. ಸಂಸ್ಥೆಯ ಯೋಜನಾ ಸಮಿತಿಯ ಜವಬ್ದಾರಿ ವಹಿಸಿಕೊಂಡಿರುವ ಇವರು ಸಂಸ್ಥೆಯಿಂದ ಯಾವುದೇ ಫಲಾಪೇಕ್ಷೆಗಳಿಲ್ಲದೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಸಂಚರಿಸಿ ಅಶಕ್ತ ಕುಟುಂಬಗಳನ್ನು ಹುಡುಕಿ ನಿಜವಾದ ಅಶಕ್ತರಿಗೇ ಸಂಸ್ಥೆಯ ಸಹಾಯ ಧನ ತಲುಪುವಂತೆ ನೋಡಿಕೊಳ್ಳುತ್ತಾರೆ.

ಇಂತಹ ಅಪರೂಪ ವ್ಯಕ್ತಿತ್ವದ ಗಣೇಶ್ ಕುಲಾಲ್ ಇಂದು ಅಂದರೆ 26-08-2018 ಭಾನುವಾರ ಮಾಧವಿ ಎಂಬ ಹುಡುಗಿಯನ್ನು ಶುಭ ಗಳಿಗೆಯಲ್ಲಿ ವಿವಾಹವಾದರು. ಈ ವಿವಾಹವು ವೈವಿಧ್ಯಮಯವಾಗಿ ಇರಬೇಕೆಂಬ ಉದ್ದೇಶದಿಂದ ತನ್ನದೇ ಊರಿನ ಮಗನ ಅಗಲುವಿಕೆಯ ನೋವಿನಲ್ಲೇ ಇಹಲೋಕ ತ್ಯಜಿಸಿದ ದಿ|| ಮುದರ ಎಂಬವರ ಕುಟುಂಬ ಮನೆಯೊಡೆಯನ ಅಗಲುವಿಕೆಯಿಂದ ತೀರಾ ಸಂಕಷ್ಟದಲ್ಲಿ ಇದ್ದು ಪ್ರಾಯಕ್ಕೆ ಬಂದ ಮನೆ ಮಗಳೇ ಮದುವೆ ಆಗದೆ ತನ್ನ ತಮ್ಮ ಹಾಗೂ ತಾಯಿಯ ಜವಬ್ದಾರಿ ನೋಡಿಕೊಳ್ಳುವಂತಾಗಿದ್ದು ಈ ಕುಟುಂಬಕ್ಕೆ ವಧು-ವರರು ಧನ ಸಹಾಯ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದು ಇತರರಿಗೂ ಪ್ರೇರಣೆಯಾದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ, ಅಮೃತಸಂಜೀವಿನಿ® ಸಂಸ್ಥೆಯ ಪ್ರಮುಖರಾದ ಸುಶಾಂತ್ ಅಮೀನ್ ಚಕ್ರತೀರ್ಥ, ಕಾರ್ತಿಕ್ ಶೆಟ್ಟಿ ಬರ್ಕೆ, ಹಿಂದೂ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು ಉಪಸ್ಥಿತರಿದ್ದರು.


Spread the love

Exit mobile version