Spread the love
ಮದ್ಯ ಮಾರಾಟ ಆರಂಭಿಸಿದಕ್ಕೆ ಉಡುಪಿ ಮಹಿಳೆಯಿಂದ ಮುಖ್ಯಮಂತ್ರಿಗೆ ತರಾಟೆ
ಉಡುಪಿ: ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ ಸರಕಾರದ ಕ್ರಮವನ್ನು ಉಡುಪಿಯ ಹಿರಿಯ ಮಹಿಳೆ ಯೋರ್ವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆಯವರೆಗೆ ಯಾರು ಊಟಕ್ಕೂ ಹಣ ಇಲ್ಲ ಎಂದು ಅಂಗಲಾಚುತ್ತಿದ್ದರು ಇಂದು ಅವರೆಲ್ಲ ವೈನ್ ಶಾಪ್ ಗಳ ಮಂದೆ 500 ರೂಪಾಯಿಯ ನೋಟು ಹಿಡಿದು ಸಾಲು ನಿಂತಿದ್ದಾರೆ. ಸರಕಾರ ಇಂಥವರಿಗೆ ಅಕ್ಕಿ ಹಣ್ಣುಹಂಪಲು ಹಾಲು ಮೊದಲಾದವುಗಳನ್ನು ನೀಡಿ ಇಷ್ಟು ದಿನ ಸಾಕುತ್ತಿತ್ತು. ಆದರೆ ನಮ್ಮಂತಹ ಬಡವರು ಚಹಾ ಮಾರಿ ಜೀವನ ಸಾಗಿಸುತ್ತೇವೆ ಎಂದರೆ ನಮಗೆ ಅಂಗಡಿ ತೆರೆಯಲು ಕೂಡ ಅವಕಾಶ ಕೊಡುತ್ತಿಲ್ಲ ಎಂದು ಸರಕಾರದ ನೀತಿಯ ಬಗ್ಗೆ ಉಡುಪಿಯ ಕಟಪಾಡಿ ನಿವಾಸಿ ಸುಲತಾ ಕಾಮತ್ ಎಂಬವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮ್ಯಾರಥಾನ್ ಓಟಗಾರ್ತಿ ಯಾಗಿರುವ ಸುಲತಾ ಕಾಮತ ಅವರಿಗೆ ಹಿಂದೆ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಅಣ್ಣಮಲೈ ಅವರು ಚಾ ಅಂಗಡಿ ತೆರೆಯಲು ಸಹಾಯ ಮಾಡಿದ್ದರು. ಅವರ ಅಂಗಡಿ ಈಗ ಲಾಕ್ ಡೌನ್ ಕಾರಣ ಮುಚ್ಚಲ್ಪಟ್ಟಿದೆ.
Spread the love