Home Mangalorean News Kannada News ಮಧ್ಯ ವರ್ಜನೆಯಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿ ಸಾಧ್ಯ

ಮಧ್ಯ ವರ್ಜನೆಯಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿ ಸಾಧ್ಯ

Spread the love

ಮಧ್ಯ ವರ್ಜನೆಯಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿ ಸಾಧ್ಯ – ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ

ದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ಆಯುರ್ವೇದದ ಉಗಮ, ಜೀವನ ಶೈಲಿ, ರೋಗ ನಿರೋಧಕ ಪದ್ದತಿಗಳು ಹಾಗೂ ಆಯುರ್ವೇದದ ಉಪಯೋಗಗಳ ಬಗ್ಗೆ ವಿವರಿಸುವ ಧನ್ವಂತರಿ ಮಹಿಮೆ ಯಕ್ಷಗಾನ ಪ್ರಸಂಗವನ್ನು ಶ್ರೀ ಗಣೇಶ ಯಕ್ಷಗಾನ ಮಂಡಳಿ, ಉಪ್ಪಿನ ಕುದ್ರು ಇವರು ಶ್ರೀ ಸುರೇಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಬಹಳ ಚೆನ್ನಾಗಿ ದೆಹಲಿ ಕರ್ನಾಟಕ ಸಂಘದಲ್ಲಿ ಪ್ರಸ್ತುತ ಪಡಿಸಿದರು.

ಡಾ. ಎಂ.ವಿ. ಹೊಳ್ಳ, ಮಾಜಿ ಸದಸ್ಯರು, ಕರ್ನಾಟಕ ಆಯುರ್ವೇದ ಹಾಗೂ ಯುನಾನಿ ವೈದ್ಯ ಮಂಡಳಿ, ಅವರು ಮಾತನಾಡಿ ಆಯುರ್ವೇದವನ್ನು ಯಕ್ಷಗಾನದಲ್ಲಿ ಅಳವಡಿಸಿರುವ ಕುರಿತು ವಿವರಿಸಿದರು. ಕರ್ನಾಟಕ ಸಂಘವು ಹೊಸ ವರ್ಷದ ಸಂದರ್ಭದಲ್ಲಿ ಇಂತಹ ಒಂದು ಸಾಹಿತ್ಯಕ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಕಲಾವಿದರನ್ನು ಅಭಿನಂದಿಸಿ ಮಾತನಾಡಿದ ಡಾ ಆನಂದ ಗುಡಿವಾಡ, ಮೆಡಿಕಲ್ ಸೂಪರಿಟೆಂಡೆಂಟ್, ಸಿ.ಜಿ.ಎಸ್.ಎಸ್. ಆಯುರ್ವೇದಿಕ್ ಹಾಸ್ಪಿಟಲ್ ನವದೆಹಲಿ, ಅವರು ಆಯುರ್ವೇದವನ್ನು ಯಕ್ಷಗಾನದಲ್ಲಿ ಅಳವಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಗಾನದ ಮುಖಾಂತರ ದೇಶವಿಡಿ ಆಯುರ್ವೇದವನ್ನು ಪ್ರಚಾರ ಮಾಡವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಸಾಧ್ಯವಾಗುವ ಎಲ್ಲ ಸಹಕಾರಕ್ಕೆ ಪ್ರಯತ್ನಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಡಾ.ಅಶೋಕ ಈಟಿ, ಚೀಫ್ ಮೆಡಿಕಲ್‍ ಆಫೀಸರ್, ಸಿ.ಜಿ.ಎಚ್.ಎಸ್. (ಆಯುರ್ವೇದ), ನವದೆಹಲಿ ಇವರು ಕಾರ್ಯಕ್ರಮದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕಪಡಿಸಿ, ಈ ಯಕ್ಷಗಾನವನ್ನು ಹಿಂದಿಗೆ ಅಳವಡಿಸಿದರೆ ಇನ್ನೂ ಹೆಚ್ಚು ಜನರನ್ನುತಲುಪಲು ಸಹಕಾರಿಯಾದೀತು ಎಂದು ಅಭಿಪ್ರಾಯಪಟ್ಟರು

delhi-karnataka-sangha

ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಹೊಸ ವರ್ಷದ ಶುಭಾಶಯವನ್ನು ಕೋರಿ ಹೊಸ ವರ್ಷದ ಕಾರ್ಯಕ್ರಮವನ್ನು ಆರೋಗ್ಯದ ಕುರಿತಾಗಿ ಆಯೋಜಿಸಿದ್ದೇವೆ ಎಂದರು. ಅರೋಗ್ಯದ ಕುರಿತು ಪದ್ಮ ವಿಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರು ಹಮ್ಮಿಕೊಂಡಿರುವ ಮಧ್ಯ ವರ್ಜನ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದರು. ಮಧ್ಯಪಾನ ಮತ್ತು ಧೂಮ್ರ ಪಾನವನ್ನು ತ್ಯಜಿಸುವುದರಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿಯ ವಾತಾವರಣ ಉಂಟಾವುದಲ್ಲದೇ ಈ ಮೂಲಕ ದೇಶದ ನೆಮ್ಮದಿಯನ್ನು ನಾವು ಕಾಪಾಡಬಹುದು ಎಂದರು. ಇಂದು ಪ್ರಸ್ತುತಪಡಿಸಲಾದ ಯಕ್ಷಗಾನ ಆಯುರ್ವೇದದ ಕುರಿತಾಗಿದ್ದು, ಆಯುರ್ವೇದವನ್ನು ಬಳಸುವುದರಿಂದ ನಾವೆಲ್ಲ ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ, ನಾವು ಅದನ್ನು ಅಳವಡಿಸಿಕೊಂಡು ಆರೋಗ್ಯವಾಗಿರೋಣ ಎಂದರು.

ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಸಖಾರಾಮ ಉಪ್ಪೂರು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love

Exit mobile version