Home Mangalorean News Kannada News ಮನವಿ ನೀಡಲು ಹೋದ ಸಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಪೋಲಿಸರು!

ಮನವಿ ನೀಡಲು ಹೋದ ಸಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಪೋಲಿಸರು!

Spread the love

ಮನವಿ ನೀಡಲು ಹೋದ ಸಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಪೋಲಿಸರು!

ಮಂಗಳೂರು: ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳೆನ್ನಲಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ಸದಸ್ಯರು ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಯ ಎದುರು ತನ್ನ ಸದಸ್ಯರುಗಳ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಶ್ರೀನಿವಾಸ ಕಾಲೇಜಿನ ಮೂರು ಮಂದಿ ವಿದ್ಯಾರ್ಥಿಗಳನ್ನು ರ್ಯಾಂಗಿಂಗ್ ಹೆಸರಿನಲ್ಲಿ ಬಂಧಿಸಲಾಗಿದೆ ಎನ್ನುವುದು ಅವರ ಆರೋಪವಾಗಿದೆ.

ಪೋಲಿಸ್ ಮೂಲಗಳ ಪ್ರಕಾರ ಶ್ರೀನಿವಾಸ ಕಾಲೇಜಿನ ಪ್ರಾಂಶುಪಾಲರು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

image001cfi-police-20160910-001

ಆದರೆ ವಿದ್ಯಾರ್ಥಿಗಳ ವಾದವೇ ಬೇರೆ, ಕಳೆದ ವಾರ ಸಂಘಟನೆಯ ವತಿಯಿಂದ ಹುಡುಗಿಯರಿಗೆ ಕಾಲೇಜಿನಲ್ಲಿ ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಲಾಗಿತ್ತು. ಅದನ್ನೇ ಗುರಿಯಾಗಿರಿಸಿಕೊಂಡು ಪ್ರಾಂಶುಪಾಲರು  ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಮಾಡಲಾಗಿದೆ ಎಂದು ಸುಳ್ಳು ದೂರನ್ನು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ನೀಡಲಾಗಿದೆ ಅಲ್ಲದೆ ಮೂರು ಅಮಾಯಕ ವಿದ್ಯಾರ್ಥಿಗಳನ್ನು ಅವರ ಮನೆಯಿಂದ ಬಂಧಿಸಿ ಠಾಣೆಗೆ ಕರೆದೊಯ್ಯಲಾಗಿದೆ.

ಇದನ್ನು ಖಂಡಿಸಿ ಠಾಣೆಯ ಅಧಿಕಾರಿಗಳಿಗೆ ಅಮಾಯಕ ವಿದ್ಯಾರ್ಥಿಗಳನ್ನು ಬಿಡುಗಡಗೊಳಿಸುವಂತೆ ಮನವಿ ನೀಡಲು ಸಂಘಟನೆಯ ವತಿಯಿಂದ ಹೋಗಿದ್ದು ಠಾಣೆಯಲ್ಲಿ ಪೋಲಿಸರು ಸಂಘಟನೆಯ ಸದಸ್ಯರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಸದಸ್ಯರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದು ಬಂದಿದ್ದು ಅದೇ ವೇಳೆ ಪೋಲಿಸರು ಕೂಡ ಸುಳ್ಳು ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲು ನಾವು ಆಸ್ಪತ್ರೆಗೆ ಬಂದರೂ ಕೂಡ ಆಸ್ಪತ್ರೆಯವರು ಪೋಲಿಸರಿಗೆ ಚಿಕಿತ್ಸೆ ನೀಡಿದ ಬಳಿಕ ನಮಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ವಿದ್ಯಾರ್ಥಿಗಳ ಮುಕಾಂತ ಸುಳ್ಳು ರ್ಯಾಗಿಂಗ್ ದಾಖಲಿಸಿದ ವಿದ್ಯಾರ್ಥಿಗಳು ದೂರನ್ನು ವಾಪಾಸು ಪಡೆಯಲು ಸಿದ್ದರಿದ್ದಾರೆ ಎಂದರು.


Spread the love

Exit mobile version