ಮನಾಪಾದಿಂದ ಹೋಟೆಲುಗಳ ಮೇಲೆ ಧಾಳಿ; 60000 ದಂಡ ವಿಧಿಸಿದ ತಂಡ
ಮಂಗಳೂರು: ಮಹಾನಗರಪಾಲಿಕೆ ಮಂಗಳೂರು ಇದರ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನೀಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಸಂಜೆ ನಗರದ ಬಿಜೈ ಬಳಿಯ 10 ಹೋಟೇಲುಗಳ ಮೇಲೆ ಧೀಡಿರ್ ಧಾಳಿ ನಡೆಸಿ ಶುಚಿತ್ವ ಕಾಪಾಡದ 6 ಹೋಟೆಲುಗಳಿಗೆ ನೋಟಿಸ್ ನೀಡಿ ದಂಡ ವಿಧಿಸಲಾಯಿತು.
ಧಾಳಿಯ ಕುರಿತಂತೆ ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಕವಿತಾ ಸನೀಲ್ ಅವರು ಇಂದು ನಾವು 10 ಹೋಟೇಲುಗಳ ಮೇಲೆ ಧಾಳಿ ಮಾಡಿದ್ದು, ಸ್ವಚ್ಚತೆ ಹಾಗೂ ಪೌಷ್ಟಿಕಾಂಶದ ಕುರಿತು ಪರೀಶೀಲನೆ ನಡೆಸಿದ ವೇಳೆ 6 ಹೋಟೆಲುಗಳ ನಿಯಮ ಪಾಲಿಸದಿರುವುದು ಕಂಡುಬಂದಿದ್ದು, 4 ಹೋಟೆಲುಗಳಿಗೆ ನೋಟಿಸ್ ನೀಡಿ ಇನ್ನು 2 ಹೋಟೆಲುಗಳಿಗೆ ಬೀಗ ಹಾಕಲಾಗಿದೆ. ಅಲ್ಲದೆ 6 ಹೋಟೆಲುಗಳಿಗೆ ರೂ 10000 ದಂತೆ ದಂಡ ವಿಧಿಸಲಾಗಿದೆ.
ಅಲ್ಲದೆ ನಮ್ಮ ತಂಡ ಒಂದು ಬ್ಯೂಟಿ ಪಾರ್ಲರಿನ ಮೇಲೆ ಕೂಡ ಧಾಳಿ ನಡೆಸಿದ್ದು ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದ ಗಮನಕ್ಕೆ ಬಂದಿದ್ದು, ಮೂರು ಮಂದಿ ಪುರುಷರು ಧಾಳಿಯ ವೇಳೆ ತಪ್ಪಿಸಿಕೊಂಡು ಹೋಗಿರುತ್ತಾರೆ, ತಂಡ ಅವರಿಗೂ ಕೂಡ ನೋಟಿಸ್ ನೀಡಲಾಗಿದೆ ಅಲ್ಲದೆ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಬಳಿ ಫಾಸ್ಟ್ ಫುಡ್ ಟೆಂಪೊವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದರು.