ಮನಾಪ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ನಿಧನ
ಮಂಗಳೂರು : ಮಹಾನಗರಪಾಲಿಕೆಯ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 79 ವರ್ಷ ವಯಸ್ಸಾಗಿತ್ತು.
ಮೃತ ಯೂನಿಸ್ 1936 ರಲ್ಲಿ ಬೆಳ್ಮಣ್ ಮಥಾಯಸ್ ಮನೆತನದಲಲ್ಲಿ ಜನಿಸಿದ ಅವರು ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು. ಪ್ರಮುಖವಾಗಿ ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ, ರಾಷ್ಟ್ರೀಯ ಕೆಥೊಲಿಕ್ ಮಹಿಳಾ ಸಂಘಟನೆಯ ಉಪಾಧ್ಯಕ್ಷೆಯಾಗಿ ಕೂಡ ಸೇವೆ ಸಲ್ಲಸಿದ್ದರು.
1993-1994 ಅವಧಿಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದರು.
ಅವರ ಅವಧಿಯಲ್ಲಿ ಮನಾಪ ವ್ಯಾಪ್ತಿಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮನಪಾದಲ್ಲಿ ದೂರು ಮತ್ತು ವಿಚಾರಣೆಗಾಗಿ ಟೋಲ್ ಫ್ರೀ 105 ಸಂಖ್ಯೆಯನ್ನು ಆರಂಭಿಸಿದ್ದರು.