Home Mangalorean News Kannada News ಮನೆ ಹಸ್ತಾಂತರಿಸಿದ ಶಾಸಕ ಜೆ.ಆರ್.ಲೋಬೊ

ಮನೆ ಹಸ್ತಾಂತರಿಸಿದ ಶಾಸಕ ಜೆ.ಆರ್.ಲೋಬೊ

Spread the love

ಮನೆ ಹಸ್ತಾಂತರಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಸೂರ್ಯನಾರಾಯಣ ದೇವಸ್ಥಾನದ 37 ನೇ ವಾರ್ಡ್ ನಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮನೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಮನೆಯನ್ನು ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆ ಹಸ್ತಾಂತರಿಸಿತು.

ಶಾಸಕ ಜೆ.ಆರ್.ಲೋಬೊ ಅವರ ವಿಶೇಷ ಶಿಫಾರಸು ಮೇರೆಗೆ ಕಲ್ಯಾಣಿ ಅವರಿಗೆ 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆ ಮನೆ ನಿರ್ಮಿಸಿ ಕೊಟ್ಟಿತು.

ನೂತನ ಮನೆಯ ಕೀಲಿ ಕೈಯನ್ನು ಕಲ್ಯಾಣಿ ಅವರಿಗೆ ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ನಗರಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸವಿತಾ ಮಿಸ್ಕಿತ್,ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಕೇಶವ ಮರೋಳಿ, ಪ್ರವೀಣ್ ಚಂದ್ರ ಆಳ್ವ, ಪ್ರಕಾಶ್ ಸಾಲ್ಯಾನ್, ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version