Home Mangalorean News Kannada News ಮರಳುಗಾರಿಕೆ ವಿಚಾರದಲ್ಲಿ ತನ್ನ ಮೇಲೆ ಮಾಡುವ ಆಧಾರರಹಿತ ಆರೋಪಗಳನ್ನು ಸಹಿಸಲ್ಲ; ಪ್ರಮೋದ್ ಮಧ್ವರಾಜ್

ಮರಳುಗಾರಿಕೆ ವಿಚಾರದಲ್ಲಿ ತನ್ನ ಮೇಲೆ ಮಾಡುವ ಆಧಾರರಹಿತ ಆರೋಪಗಳನ್ನು ಸಹಿಸಲ್ಲ; ಪ್ರಮೋದ್ ಮಧ್ವರಾಜ್

Spread the love

ಮರಳುಗಾರಿಕೆ ವಿಚಾರದಲ್ಲಿ ತನ್ನ ಮೇಲೆ ಮಾಡುವ ಆಧಾರರಹಿತ ಆರೋಪಗಳನ್ನು ಸಹಿಸಲ್ಲ; ಪ್ರಮೋದ್ ಮಧ್ವರಾಜ್

ಉಡುಪಿ: ತಾನು ಯಾವುದೇ ಎಮ್ ಸ್ಯಾಂಡ್ ಪರವಾಗಿಲ್ಲ ನನ್ನ ಉದ್ದೇಶ ಕೇವಲ ಬಡವರಿಗೆ ಕಡಿಮೆ ದರದಲ್ಲಿ ಕಾನೂನು ರೀತಿಯಲ್ಲಿ ಪರವಾನಿಗೆ ಪಡೆದು ಮರಳುಗಾರಿಕೆ ನಡೆಸಬೇಕು ಎನ್ನುವುದು ನನ್ನ ಉದ್ದೇಶ ಬಿಟ್ಟರೆ ಯಾವುದೇ ರೀತಿಯ ತುಘಲಕ್ ದರ್ಬಾರ್ ನಡೆಸುತ್ತಿಲ್ಲ. ಅನಾವಶ್ಯಕವಾಗಿ ತನ್ನ ಮೇಲೆ ಇಲ್ಲ ಸಲ್ಲದ ಸುಳ್ಳ ಆರೋಪಗಳನ್ನು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸೊಲ್ಲ ಎಂದು ಪ್ರತಿಪ್ರಕ್ಷದವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಅವರು ಸೋಮವಾರ ಜಿಲ್ಲಾ ಭೂವಿಜ್ಞಾನ ಮತ್ತು ಗಣಿ ಇಲಾಖೆಗೆ ಅನೀರಿಕ್ಷಿತ ಭೇಟಿ ನೀಡಿದ ಅವರು ಇದುವರೆಗೆ ಮರಳುಗಾರಿಕೆಗೆ ನೀಡಿದ ಪರವಾನಿಗೆ ಜಿಪಿಎಸ್ ಅಳವಡಿಕೆ, ಇತ್ಯಾದಿಗಳ ಮಾಹಿತಿಯನ್ನು ಪಡೆದುಕೊಂಡ ಬಳಿಕ ಮಾತನಾಡಿದರು.

ಹಸಿರು ಪೀಠದ ಆದೇಶದ ಪ್ರಕಾರ ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಯಾವುದೇ ರೀತಿಯ ಪರವಾನಿಗೆ ಇಲ್ಲ ಆದರೆ ದೋಣಿಗಳ ಸಂಚಾರಕ್ಕೆ ತೊಂದರೆಯಾಗದಂತೆ ನದಿಯಲ್ಲಿ ಮರಳು ಶೇಖರಣೇಯಾಗಿದ್ದ ಸ್ಥಳದಲ್ಲಿ ಮರಳಿನ ದಿಬ್ಬದಗಳನ್ನ ತೆರವುಗೊಳಿಸಲು ಮಾತ್ರ ಆದೇಶ ನೀಡಿದೆ. ಅದರಂತೆ ಎನ್ ಐಟಿಕೆ ಸುರತ್ಕಲ್ ಇವರ ನೇತೃತ್ವದ ತಜ್ಞರ ಸಮಿತಿ ಅಂತಹ ದಿಬ್ಬಗಳನ್ನು ಗುರುತಿಸಿದ್ದು ಅಂತಹ ಭಾಗದಲ್ಲಿ ಹಿಂದೆ ಸಾಂಪ್ರಾದಾಯಿಕ ಮರಳುಗಾರಿಕೆ ಮಾಡಿಕೊಂಡವರಿಗೆ ಕಾನೂನಿನ ಅಡಿಯಲ್ಲಿ ಪರವಾನಿಗೆ ನೀಡುತ್ತಿದ್ದೆವೆ. ಅದರಂತೆ ಪರವಾನಿಗೆ ಪಡೆದುಕೊಂಡವರು ಕಾನೂನಿನಂತೆ ತಮ್ಮ ದೋಣಿಗಳಿಗೆ ಹಾಗೂ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಒಂದು ದೋಣಿಗೆ ಜಿಪಿಎಸ್ ಅಳವಡಿಸಲು ರೂ 19000 ಖರ್ಚಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಮೂಲಕ ಎಜೆನ್ಸಿ ಗುರುತಿಸಲಾಗಿದೆ. ಕೆಲವೊಂದು ವ್ಯಕ್ತಿಗಳು ಅನಗತ್ಯವಾಗಿ ರೂ 3000 ಕ್ಕೆ ಜಿಪಿಎಸ್ ಅಳವಡಿಸಲು ಸಾಧ್ಯವಿದೆ ಎಂಬ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಆದರೆ ಅಂತಹ ಅವಕಾಶ ಇದ್ದವರು ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಪ್ರಸ್ತುತ ಟೆಂಡರ್ ಪಡೆದುಕೊಂಡವರು ಜಿಪಿಎಸ್ ವ್ಯವಸ್ಥೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ದೋಣಿಗಳಿಗೆ ಜೋಡಿಸುವುದು ಮಾತ್ರವಲ್ಲದೆ ಜಿಲ್ಲಾ ಭೂವಿಜ್ಞಾನ ಮತ್ತು ಗಣಿ ಕಚೇರಿಯಿಂದಲೇ ನಿರ್ವಹಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಇದರಿಂದ ಯಾವುದೇ ರೀತಿಯ ಮೋಸ ಆಗುವುದನ್ನು ತಡೆಗಟ್ಟಲು ಸಾಧ್ಯವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಜಿಪಿಎಸ್ ಅಳವಡಿಕೆಗೆ ಕೂಡ ರೂ 19000 ಹಣವನ್ನು ನಿಗದಿ ಮಾಡಿದ್ದು ಕೆಲವರು ಉದ್ದೇಶಪೂರ್ವಕವಾಗಿ ಮತ್ತೋಮ್ಮೆ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಕೋರ್ಟಿಗೆ ಹೋಗಿ ನಿಲ್ಲಿಸುವ ಹುನ್ನಾರದಲ್ಲಿ ತೊಡಗಿದ್ದಾರೆ. ಕೇಂದ್ರದ ಹಸಿರು ಪೀಠ ಉಡುಪಿ ಜಿಲ್ಲೆಯ ಮರಳುಗಾರಿಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದು ನಾವೂ ಸಹ ಯಾವುದೇ ರೀತಿಯ ವ್ಯವಸ್ಥೆ ಮಾಡಿಕೊಳ್ಳುವಾಗ ಸೂಕ್ಷ್ಮವಾಗಿ ಗಮನಿಸಿಕೊಂಡು ಪರವಾನಿಗೆ ನೀಡಬೇಕು ಎಂದರು.

ಅಲ್ಲದೆ ನಿಜವಾಗಿಯೂ ಯಾರು ಮರಳುಗಾರಿಕೆ ಮಾಡಲು ಉತ್ಸುಕರಾಗಿದ್ದಾರೋ ಅವರಿಗೆ ಆದ್ಯತೆ ನೀಡುವಂತಹ ಕೆಲಸ ಆಗಬೇಕು ಇಲ್ಲವಾದರೆ ಕೇವಲ ಪರವಾನಿಗೆ ಪಡೆದು ಮರಳುಗಾರಿಕೆ ಆರಂಭಿಸದೇ ಇದ್ದವರಿಗೆ ಕಾಲವಕಾಶ ನೀಡಿ ಅದರ ನಂತರವೂ ಅವರು ಮರಳುಗಾರಿಕೆ ಆರಂಭಿಸದಿದ್ದರೆ ಬೇರೆಯವರಿಗೆ ಅವಕಾಶ ನೀಡುವಂತೆ ಪ್ರಮೋದ್ ಸೂಚಿಸಿದರು.

ಮರಳುಗಾರಿಕೆಗೆ ಪರವಾನಿಗೆ ನೀಡುವುದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೇವಲ ಜಿಲ್ಲೆಯ ಮರಳು ಬೇರೆ ಜಿಲ್ಲೆಗೆ ಹೋಗದಂತೆ ಉಡುಪಿಗೆ ಜಿಲ್ಲೆಗೆ ಸಿಗಬೇಕು ಎಂದು ಹೇಳಿರುವುದು ಬಿಟ್ಟರೆ ಬೇರೆ ಯಾವುದೇ ರೀತಿಯ ಹಸ್ತಕ್ಷೇಪಕ್ಕೂ ತಾನು ಹೋಗಿಲ್ಲ. ಉಳಿದ ಎಲ್ಲಾ ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಮರಳು ಸಮಿತಿಯೇ ಕೈಗೊಂಡಿದೆ. ವೃಥಾ ಆರೋಪ ಮಾಡುವ ವ್ಯಕ್ತಿಗಳು ಈ ಕುರಿತು ಗಮನಹರಿಸಬೇಕು. ಕೆಲವೊಂದು ವ್ಯಕ್ತಿಗಳಿಗೆ ಹೇಗಾದರೂ ಮಾಡಿ ಈಗ ಆರಂಭಗೊಂಡಿರುವ ಮರಳುಗಾರಿಕೆಯನ್ನು ಕೋರ್ಟಿನ ಮೂಲಕ ನಿಲ್ಲಿಸುವ ಷಡ್ಯಂತ್ರ ಹೂಡಿದ್ದಾರೆ ಆದರೆ ತಾನು ಯಾವುದೇ ಲಾಭಿಯ ಹಿಂದೆ ಇಲ್ಲ ನನಗೆ ನನ್ನ ಜಿಲ್ಲೆಯ ಜನತೆಯ ಅಭಿವೃದ್ಧಿ ಮಾತ್ರ ಬೇಕು. ಲಾರಿ ಮ್ಹಾಲಕರು, ಮರಳು ಮಾಲಕರ ಸಂಘದವರು ಮರಳುಗಾರಿಕೆಗೆ ಪ್ರತಿಭಟನೆ ಮಾಡುವುದರ ಬದಲು ಸಿಕ್ಕದ ಮರಳುಗಾರಿಕೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಇನ್ನು ಮುಂದೆ ಅನಾವಶ್ಯಕವಾಗಿ ತನ್ನ ವಿರುದ್ದ ಸುಳ್ಳು ಆಪಾದನೆ ಹೊರಿಸಿದರೆ ತಾನೂ ಕೂಡ ಸುಮ್ಮನಿರುವುದಿಲ್ಲ ಸೂಕ್ತ ಉತ್ತರ ನೀಡುತ್ತೇನೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಕೋದಂಡರಾಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love

Exit mobile version