ಮರಳು ಅಭಾವ: ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಉಪವಾಸ ಸತ್ಯಾಗ್ರಹ : ರವಿ ಶೆಟ್ಟಿ
ಉಡುಪಿ: ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲಾದ್ಯಂತ ತಲೆದೋರಿದ ಮರಳು ಅಭಾವ, ಇದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿ ಕಾರ್ಮಿಕನ ಪರಿಸ್ಥಿತಿ ಅತೀ ದಾರುಣ ಸ್ಥಿತಿಯಲ್ಲಿದ್ದು, ಮತ್ತು ಕಾರ್ಮಿಕನಿಲ್ಲದೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಿದ್ದು, ಇದರಕುರಿತಾಗಿ ಫೆಬ್ರವರಿ 8 ರ ಬುಧವಾರ ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲೆ ಇದರ ವತಿಯಿಂದ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು.
ಮತ್ಸ್ಯ ಉದ್ಯಮ, ಕಟ್ಟಡ ಉದ್ಯಮ ಹೊರತುಪಡಿಸಿದರೆ ಇನ್ಯಾವುದೇ ರೀತಿಯ ಉದ್ಯಮಗಳು ಇಲ್ಲದಿರುವುದು, ಇಂತಹ ಸನ್ನಿವೇಶದಲ್ಲಿ ನಿರ್ಮಾಣ ಕಾರ್ಯಕ್ಕೆ ಮರಳು ಅಭಾವದಿಂದ ಬಿದ್ದ ಹೊಡೆತಕ್ಕೆ ಇಡೀ ಉಡುಪಿಯೇ ತತ್ತರಿಸಿ ಹೋಗಿದ್ದು ಕಾರ್ಮಿಕನಿಗೆ ಬದುಕು ಸಾಗಿಸುವುದೇ ಕಷ್ಟಕರವಾಗಿದೆ.
ಅದಲ್ಲದೆ ಸಾಲ ಮಾಡಿ ಲಾರಿ, ಟೆಂಪೋ,ಖರೀದಿಸಿ ಈಗ ಸಾಲ ತೀರಿಸಲಾಗದೆ ಕಂಗೆಟ್ಟು, ಇತ್ತ ದುಡಿಮೆಯೂ ಇಲ್ಲದೆ, ಅತ್ತ ಸಾಲಗಾರರ ಕಾಟವು ಹೆಚ್ಚಾಗಿ ಬಹಳ ಕಷ್ಟದಿಂದ ದಿನ ದೂಡುವಂತಾಗಿದ್ದು, ಸರಕಾರ ಮತ್ತು ಹಲವು ಸಂಗಟನೆಗಳನ್ನೊಳಗೂಡಿ ಜಿಲ್ಲಾಡಳಿಕ್ಕೆ ಹಲವಾರು ಬಾರಿ ನ್ಯಾಯಯುತವಾಗಿ ಕಟ್ಟ್ಡ ಸಾಮಗ್ರಿ ಸಾಗಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದೆ, ಬಡ ಕಾರ್ಮಿಕರ ಹಿತಕಾಯುವಲ್ಲಿ ವಿಫಲವಾದ ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಲ್ಲಿ “ಕಾರ್ಮಿಕರ ಹಿತ ಮತ್ತು ಉಡುಪಿ ಜಿಲ್ಲೆ ಉಳಿಸಿ” ಎಂಬ ಘೋಷಣೆಯೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಜಿಲ್ಲೆಯ ಒಳಿತಿಗಾಗಿ ನಡೆಸುತ್ತಿರುವ ಈ ಸತ್ಯಾಗ್ರಹಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕಾಗಿ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿಯವರು ತಿಳಿಸಿರುತ್ತಾರೆ.