ಮರಳು ಹಾಗೂ ಮರಳು ಸಾಗಾಟ ಮಾಡುವ ವಾಹನಗಳಿಗೆ ದರ ನಿಗದಿ – ಜಿಲ್ಲಾಧಿಕಾರಿ ಜಗದೀಶ್

Spread the love

ಮರಳು ಹಾಗೂ ಮರಳು ಸಾಗಾಟ ಮಾಡುವ ವಾಹನಗಳಿಗೆ ದರ ನಿಗದಿ – ಜಿಲ್ಲಾಧಿಕಾರಿ ಜಗದೀಶ್

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಮರಳಿನ ಹಾಗೂ ಸಾಗಾಟ ಮಾಡುವ ವಾಹನಗಳಿಗೆ ದರ ನಿಗಧಿಪಡಿಸಲಾಗಿದ್ದು, ಸದರಿ ದರದ ವಿವರವನ್ನು ಸಾರ್ವಜನಿಕರ ಗಮನಕ್ಕೆ ಈಗಾಗಲೇ ಪತ್ರಿಕಾ ಪ್ರಕಟಣೆ ಮೂಲಕ ತರಲಾಗಿದೆ. ಆದಾಗ್ಯೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದ ಮಾಲೀಕರು ಹೆಚ್ಚಿನ ದರದಲ್ಲಿ ಮರಳನ್ನು ಸಾರ್ವಜನಿಕರಿಗೆ ಪೂರೈಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.

ಆದ್ದರಿಂದ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗಧಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಮರಳು ಪರವಾನಿಗೆದಾರರು/ ವಾಹನ ಮಾಲೀಕರ ವಿವರ ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (ಒಆP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮ ಜರುಗಿಸಲಾಗುವುದು.

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿರ್ಧರಿಸಿದ/ ನಿಗಧಿಪಡಿಸಿದ ಮರಳಿನ ದರ ಹಾಗೂ ಮರಳು ಸಾಗಾಟ ದರ/ ವೆಚ್ಚದ ವಿವರಗಳು ಹೀಗಿದೆ.

ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (ಅಖZ ಪ್ರದೇಶದ ಸ್ವರ್ಣಾ, ಸೀತಾ & ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್ಗೆ (ಸಾಗಾಟ ಪರವಾನಿಗೆಯೊಂದಿಗೆ): 550 ರೂ., ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) 5500 ರೂ.

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ (ಓಔಓ ಅಖZ ಪ್ರದೇಶದಲ್ಲಿನ ಕುಂದಾಪುರ ತಾಲ್ಲೂಕಿನ ಮರಳು ಬ್ಲಾಕ್ ಸಂಖ್ಯೆ: 4 ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6 ರ ಜಪ್ತಿ- ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್ಗೆ (ಸಾಗಾಟ ಪರವಾನಿಗೆಯೊಂದಿಗೆ): 650 ರೂ. ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) : 6500 ರೂ.ಗಳು.

ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ (10 ಮೆ.ಟನ್ ಗೆ): ದೊಡ್ಡ ಲಾರಿಗೆ 3000 ರೂ. (20 ಕಿ.ಮೀಟರ್ವರೆಗೆ), ನಂತರದ ಪ್ರತಿ ಕಿ.ಮೀಟರ್ಗೆ 50 ರೂ. ಗಳು. ಮಧ್ಯಮ ಗಾತ್ರದ ವಾಹನಗಳಿಗೆ : 2000 ರೂ. (20 ಕಿ.ಮೀಟರ್ವರೆಗೆ), ನಂತರದ ಪ್ರತಿ ಕಿ.ಮೀಟರ್ಗೆ 40 ರೂ.ಗಳು. ಸಣ್ಣ ವಾಹನಗಳಿಗೆ: 1500 ರೂ. (20 ಕಿ.ಮೀಟರ್ವರೆಗೆ), ನಂತರದ ಪ್ರತಿ ಕಿ.ಮೀಟರ್ಗೆ 35 ರೂ. ಗಳು.

ಮೇಲಿನಂತೆ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802, 1077 (ಟೋಲ್ ಫ್ರೀ), ಮಹೇಶ ಭೂವಿಜ್ಞಾನಿ : 9632742629, ಡಾ. ಮಹದೇಶ್ವರ ಹೆಚ್. ಎಸ್, ಭೂವಿಜ್ಞಾನಿ : 9483096118, ಗೌತಮ್ ಶಾಸ್ತ್ರಿ ಹೆಚ್, ಭೂವಿಜ್ಞಾನಿ : 9008917890, ಸಂಧ್ಯಾಕುಮಾರಿ, ಭೂವಿಜ್ಞಾನಿ: 9901370559, ಹಾಜಿರಾ ಸಜಿನಿ ಎಸ್, ಭೂವಿಜ್ಞಾನಿ : 9663836959 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love