ಮಲಗಿದ್ದಲ್ಲೇ ಹೃದಯಾಘಾತ: ಕನೀರುತೋಟ ನಿವಾಸಿ 28ರ ವಿವಾಹಿತ ಸಾವು
ಉಳ್ಳಾಲ: ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ.
ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು ಜಿತೇಶ್ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಬೆಳಿಗ್ಗೆ ಏಳದ ಸಂದರ್ಭ, ಮನೆಮಂದಿ ವಿಚಾರಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.