Home Mangalorean News Kannada News ಮಲಾಡ್ :  10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಮಲಾಡ್ :  10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Spread the love

ಮಲಾಡ್ :  10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಮುಂಬಯಿ: ಲಕ್ಷ್ಮೀನಾರಾಯಣರ ಜೋಡಿಯು ಯಾವತ್ತೂ ವಿಚ್ಛೇದನವಾಗದ ಜೋಡಿಯಾಗಿದ್ದು ಕೇವಲ ಲಕ್ಷ್ಮಿಯನ್ನು ಪೂಜಿಸಿದರೆ ಅದು ಫಲಪ್ರದವಾಗುವುದಿಲ್ಲ. ಅದುದರಿಂದ ಲಕ್ಷ್ಮೀನಾರಾಯಣರನ್ನು ಒಂದಾಗಿ ಪೂಜಿಸಿದರೆ ಅದರಿಂದ ಪೂರ್ಣ ಫಲ ಸಿಗುತ್ತದೆ. ವರಮಹಾಲಕ್ಷ್ಮಿ ಎಂದರೆ ವರನಿಂದ ಕೂಡಿದಂತ ಮಹಾಲಕ್ಷ್ಮಿ ಎಂದರ್ಥ. ಕಳೆದ ಹತ್ತು ವರ್ಷಗಳಿಂದ ನೀವೆಲ್ಲರೂ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಬಹಳ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದೀರಿ. ಮಹಾನಗರದಲ್ಲಿ ತುಳು ಕನ್ನಡಿಗರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಉನ್ನತ ಮಟ್ಟಕ್ಕೇರಿದ್ದು ಮತ್ತಷ್ಟು ಬೆಳೆಯುವಂತಾಗಲಿ ಎಂದು ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ಆಸ್ರಣ್ಣರು ನುಡಿದರು.

ಆ 18 ರಂದು ಮಲಾಡ್ ಪೂರ್ವದ ಬಚ್ಚಾನಿ ನಗರ ಚಿಲ್ಡ್ರನ್ಸ್ ಅಕಾಡೆಮಿಯ ಸಭಾಗೃಹದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಹತ್ತನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಧಾರ್ಮಿಕ ಸಭೆಯಲ್ಲಿ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡುತ್ತಾ ಯಕ್ಷಗಾನ ಅದು ಶ್ರೇಷ್ಠವಾದ ಕಲೆ. ಅಂತಹ ಯಕ್ಷಗಾನವನ್ನು ಈ ಸಮಿತಿಯ ಸದಸ್ಯರೆಲ್ಲರೂ ಸೇರಿ ಗೆಜ್ಜೆ ಕಟ್ಟಿ ಪ್ರದರ್ಶನವನ್ನು ನೀಡಿದ್ದೀರಿ. ಯಕ್ಷಗಾನವನ್ನು ಕಲಿಯುವ ಇಲ್ಲವೇ ಕಲಿಸುವ ಮೂಲಕವಾಗಿ ಮುಂಬಯಿ ಮಹಾನಗರದಲ್ಲಿ ಕಲೆ-ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದರು.

ಸಭೆಗೆ ಗೌರವ ಅತಿಥಿಯಾಗಿ ಆಗಮಿಸಿದ ಉತ್ತರ ಮುಂಬಯಿ ಸಂಸದರಾದ ಗೋಪಾಲ್ ಶೆಟ್ಟಿ ಅವರು ಮಾತನಾಡುತ್ತಾ ಸಾವಿರಾರು ಸಂಖ್ಯೆಯಲ್ಲಿ ತುಳು ಕನ್ನಡಿಗರನ್ನು ಒಂದುಗೂಡಿಸಿ ನಮ್ಮ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ತುಳು ಕನ್ನಡಿಗರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಅಭಿಮಾನವಾಗುತ್ತಿದೆ ಎಂದರು.

ನಗರದ ತುಂಗಾ ಹಾಸ್ಪಿಟಲ್ ಇದರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಅವರು ಮಾತನಾಡಿ ಜೀವನದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕಾಳಜಿಯನ್ನು ವಹಿಸಿಕೊಳ್ಳಬೇಕು. ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ನಮ್ಮ ನಾಡಿನ ಧಾರ್ಮಿಕ ಆಚರಣೆ ಸಂಸ್ಕೃತಿ-ಕಲೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಂದು ಬೆಳಿಗ್ಗೆ ಸದಾನಂದ ಕೋಟ್ಯಾನ್ ಮತ್ತು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಉದ್ಘಾಟನಾ ಸಮಾರಂಭ ನಡೆದಿದ್ದು ಮಲಾಡ್ ಕುರಾರ್ ವಿಲೇಜ್ ಶ್ರೀ ಶನೀಶ್ವರ ದೇವಸ್ಥಾನದ ವೇದಮೂರ್ತಿ ರಾಘವೇಂದ್ರ ತುಂಗ ಭಟ್, ಮಲಾಡ್ ಪೂರ್ವ ತಾನಾಜಿ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಘವೇಂದ್ರ ಭಟ್, ಸೂಡ, ಮಲಾಡ್ ಪೂರ್ವ ತತಾಸ್ತು ಪೌಂಡೇಶನ್ ನ ಅಧ್ಯಕ್ಷರಾದ ವೇದಮೂರ್ತಿ ಸತೀಶ್ ಭಟ್, ಮಲಾಡ್ ಪೂರ್ವ ಶಿವಭವಾನಿ ಶಂಕರ್ ದೇವಸ್ಥಾನದ ಸದಾಶಿವ ಆಚಾರ್ಯ, ಮಲಾಡ್ ಪೂರ್ವ ಕುರಾರ್ ಶ್ರೀ ಮೂಕಾಂಭಿಕ ದೇವಸ್ಥಾನದ ವೇದಾನಂದ ಸ್ವಾಮೀಜಿ, ಕುರಾರ್ ಶ್ರೀ ಮಹಾಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ರವಿ ಸ್ವಾಮೀಜಿ, ಇರಾನಿ ಚಾಲ್ ಶ್ರೀ ಶನೀಶ್ವರ ದೇವಸ್ಥಾನದ ಎಸ್. ಯು. ಬಂಗೇರ (ಭುವಾಜಿ), ಮಾಲಾಡ್ ಪೂರ್ವ ಗೋವಿಂದ ನಗರ ಶ್ರೀ ಅಂಬಿಕಾ ದೇವಸ್ಥಾನದ ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.

ಯಕ್ಷಗುರು ನಾಗೇಶ್ ಪೊಳಲಿ ಇವರ ನಿರ್ದೇಶನದಲ್ಲಿ ಸಮಿತಿಯ ಸದಸ್ಯರಿಂದ “ಮಹಿಷ ಮರ್ಧಿನಿ” ಯಕ್ಷಗಾನ ಪ್ರದರ್ಶನಗೊಂಡಿತು. ಬಾಗವತಿಕೆಯಲ್ಲಿ ಗಣೇಶ್ ಮಯ್ಯ ಗಣೇಶ್ ಮಯ್ಯ ವರ್ಕಾಡಿ, ಚೆಂಡೆ-ಮದ್ದಳೆಯಲ್ಲಿ ದಯಾನಂದ ಶೆಟ್ಟಿಗಾರ್ ಮೀಜಾರ್ ಮತ್ತು ಶ್ರೀಧರ್ ಎಡಮಲೆ ಸಹಕರಿಸಲಿರುವರು. ಇದಕ್ಕೆ ರವೀಂದ್ರನಾಥ್ ಭಂಡಾರಿ, ಬಾಬು ಶೆಟ್ಟಿ ಪೆರಾರ, ಅಶೋಕ ಶೆಟ್ಟಿ ಪೆರ್ಮುದೆ, ಸಿಎ ಸುರೇಂದ್ರ ಶೆಟ್ಟಿ, ಶೇಖರ ಪೂಜಾರಿ ಬ್ರಹ್ಮಾವರ, ಶ್ರೀನಿವಾಸ ಸಾಫಲ್ಯ, ಹರೀಶ್ ಎಸ್. ಶೆಟ್ಟಿ (ಮಲಾಡ್ ಕನ್ನಡ ಸಂಘ) ಇವರು ಪ್ರಾಯೋಜಕರಾಗಿ ಸಹಕರಿಸಿದ್ದಾರೆ.

ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಮುಂಬಯಿ ಬಿಲ್ಲವರ ಅಸೋಷಿಯೇಶನಿನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ರಾಜಪುರ ಸಾರಸ್ವತ್ ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಸುಮಾ ನಾಯಕ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭ ಎಸ್. ಆಚಾರ್ಯ ಉಪಸ್ಥಿತರಿದ್ದರು.

ಯುವಪ್ರತಿಭೆಗಳಾದ ಪ್ರೀಯಾ ಡಾನ್ಸ್ ಸ್ಟುಡಿಯೋ, ಕುರಾರ್ ನ ಕುಮಾರಿ ಪ್ರೀಯಾ ಪೂಜಾರಿ, ರಾಷ್ಟ್ರಮಟ್ಟದ ಸಿಬಿಸಿಐ ಅವಾರ್ಡ್ ವಿಜೇತ ವಿಕ್ರಮ್ ಪಾಟ್ಕರ್ ಮತ್ತು ರಾಜ್ಯ ಮಟ್ಟದ ಜೂಡೋ ಕುರಶ್ ವಿಜೇತ ಸೂರಜ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು. ಈ ಸಮಾರಂಭವು ಕೇವಲ ಯುವ ಜನಾಂಗಕ್ಕೆ ಮೀಸಲಾಗಿದ್ದು ಗೌರವ ಅತಿಥಿಗಳಾಗಿ ದಂತ ತಜ್ನ ಡಾ. ಶಶಿನ್ ಕೆ. ಆಚಾರ್ಯ, ನಟ, ನಿರ್ದೇಶಕ ಅತೇಶ್ ಪೂಜಾರಿ, ಪೇಸ್ ಆಫ್ ತುಳುನಾಡು 2019 ವಿಜೇತೆ ಮೇಘಾ ಶೆಟ್ಟಿ, ನಲ್ಲಾಸೋಪಾರ ಕುಮಾರಿ ಸೃಷ್ಟಿ ಎಸ್. ಶೆಟ್ಟಿ, ಕುಮಾರಿ ತೃತಿ ಆರ್. ಶೆಟ್ಟಿ, ರಾಜ್ಯ ಮಟ್ಟದ ನೃತ್ಯ ಕಲಾವಿದೆ ಸಾಕ್ಷಿ ಪಿ. ಶೆಟ್ಟಿ, ಟೈಮ್ಸ್ ಎನ್ ಐ ಇ ಸ್ಟಾರ್ ಕರೆಸ್ಪೋಡೆಂಟ್ ವಿಜೇತೆ ದಿವ್ಯಾ ಎಸ್. ಸಾಫಲ್ಯ ಉಪಸ್ಥಿತರಿದ್ದರು. ಆ ನಂತರ ಸಂಜೆ 5.30 ರ ತನಕ ಸ್ಥಳೀಯ ಮಕ್ಕಳಿಂದ ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ ನಡೆಯಿತು.

ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ಕಾಂದಿವಲಿ ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಲ್ಲಾರ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಗಣ್ಯರು ಶ್ರೀ ವರಮಹಾಲಕ್ಷೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ ಎನ್. ಶೆಟ್ಟಿ, ಸಂಚಾಲಕರಾದ ಬಿ. ದಿನೇಶ್ ಕುಲಾಲ್, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಪೂಜಾರಿ ಬ್ರಹ್ಮಾವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಇವರನ್ನು ಸನ್ಮಾನಿಸಿದರು

ಕಾರ್ಯಕ್ರಮವನ್ನು ಬಾಬಾಪ್ರಸಾದ್ ಅರಸ್, ರತ್ನಾ ದಿನೇಶ್ ಕುಲಾಲ್ ಮತ್ತು ಪ್ರಣೀತಾ ವರುಣ್ ಶೆಟ್ಟಿ ನಿರ್ವಹಿಸಿದರು. ಭಾರತಿ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆ ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ನಡೆ್ಯಿತು. ಜರಿಮರಿಯ ದಿನೇಶ್ ಕೋಟ್ಯಾನ್ ಇವರು ಚೆಂಡೆ ವಾದ್ಯದಲ್ಲಿ ಸಹಕರಿಸಿದರು.

ಈ ಸಮಾರಂಭಕ್ಕೆ ನಲಾಸೋಪಾರ ಗ್ರಾಂಡ್ ರೀಜೆನ್ಸಿ ಹೋಟೇಲಿನ ಶಶಿಧರ ಕೆ. ಶೆಟ್ಟಿ, ನಿತ್ಯಾನಂದ ಪೂಜಾರಿ, ಡಾ. ಎಂ. ಜೆ. ಪ್ರವೀಣ್ ಭಟ್, ಸತೀಷ್ ಭಟ್, ಪ್ರನೀತಾ ವರುಣ್ ಶೆಟ್ಟಿ, ಹರೀಶ್ ಶೆಟ್ಟಿ, ಸಂತೋಷ್ ಕೆ ಪೂಜಾರಿ, ಉಮೇಶ್ ಅಂಚನ್ ಮಾರ್ನಾಡ್, ಐತು ಆರ್. ಮೂಲ್ಯ, ಮುಂಡ್ಕೂರು, ದಿನೇಶ್ ಕಾಮತ್ ಮೊದಲಾದವರು ವಿವಿಧ ರೀತಿಯಲ್ಲಿ ಪ್ರಾಯೋಜಕರಾಗಿ ಸಹಕರಿಸಿದ್ದಾರೆ.


Spread the love

Exit mobile version