ಮಲ್ಪೆ ಪೇದೆ ಅಮಾನತು ಹಿನ್ನಲೆ: ಅಣ್ಣಾಮಲೈ ಹೆಸರಲ್ಲಿ ಜಾಲತಾಣಗಳ್ಲಲಿ ಫೇಕ್ ಆಡಿಯೋ, ಸ್ಪಷ್ಟನೆ

Spread the love

ಮಲ್ಪೆ ಪೇದೆ ಅಮಾನತು ಹಿನ್ನಲೆ: ಅಣ್ಣಾಮಲೈ ಹೆಸರಲ್ಲಿ ಜಾಲತಾಣಗಳ್ಲಲಿ ಫೇಕ್ ಆಡಿಯೋ, ಸ್ಪಷ್ಟನೆ

ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಯ ಮಲ್ಪೆ ಠಾಣೆಯ ಪೇದೆಯೊಬ್ಬರ ಅಮಾನತು ಪ್ರಕರಣಕ್ಕೆ ಸಂಬಂಧಿಸಿ ಮೇಲಾಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ನಿಂದಿಸುವ ರೀತಿಯಲ್ಲಿ ಆಡಿಯೋ ಕ್ಲಿಪ್ ಒಂದನ್ನು ರಚಿಸಿ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ ಅವರ ಹೆಸರಿನಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ಪೋಲಿಸ್ ಠಾಣೆಯ ಕಾನ್ಸ್ ಟೇಬಲ್ ಅಗಿದ್ದ ಪ್ರಕಾಶ್ ಎಂಬವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಫ್ಯಾಕ್ಟರಿ ಕಾರ್ಮಿಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದಾರೆ ಎಂಬ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು. ಇದೇ ವಿಷಯವನ್ನು ಎತ್ತಿಕೊಂಡು ಪ್ರತಿಪಕ್ಷದವರು ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಇದಕ್ಕೆ ಪೂರಕವೆಂಬಂತೆ ಕಾನ್ಸ್ ಟೇಬಲ್ ವೊಬ್ಬರು ಪೋಲಿಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡರೊಬ್ಬರ ಜೊತೆ ನಡೆಸಿದ ಸಂಭಾಷಣೆಯನ್ನು ಆಡಿಯೊ ರೆಕಾರ್ಡ್ ಮಾಡಿದ್ದು ದಿ ಗ್ರೇಟ್ ಐಪಿಎಸ್ ಆಫಿಸರ್ ಅಣ್ಣಾಮಲೈ ಸರ್ ಕಮ್ಯುನಿಕೇಟ್ ವಿತ್ ಇನ್ನೊಷೆಂಟ್ ಉಡುಪಿ ಡಿಸ್ಟ್ರಿಕ್ಟ್ ಪೋಲಿಸ್ ಕಾನ್ಸ್ ಟೇಬಲ್ ಎಂಬ ಟ್ಯಾಗ್ ಲೈನಿನೊಂದಗೆ ಕಿಡಿಗೇಡಿಗಳು ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನೀತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದರೊಂದಿಗೆ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿರುವ ಅಣ್ಣಾಮಲೈ ಅವರಿಗೆ ಮುಜುಗರಕ್ಕೆ ಈಡು ಮಾಡಿದ್ದಾರೆ.

ಪೋಲಿಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡರೊಬ್ಬರ ಜೊತೆ ಕಾನ್ಸ್ ಟೇಬಲ್ ಸುಮಾರು 13 ನಿಮಿಷ 45 ಸೆಕೆಂಡ್ ಗಳ ಕಾಲ ಮಾತನಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದು ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ರಾಜಕಾರಣಿಗಳ ಬಗ್ಗೆ ಕೆಟ್ಟ ಭಾಷೆಯಲ್ಲಿ ಬೈದಿರುವುರುದು ಅಣ್ಣಾಮಲೈ ಎಂಬಂತೆ ಆಡಿಯೋದಲ್ಲಿ ಬಿಂಬಿಸಲಾಗಿದೆ.

ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಮಲ್ಪೆ ಠಾಣೆಯ ಪೋಲಿಸ್ ಕಾನ್ಸ್ ಟೇಬಲ್ ಜೊತೆ ತಾನು ಮಾತನಾಡಿರುವಂತೆ ಆಡೀಯೊ  ಕ್ಲಿಪಿಂಗ್ ರಚಿಸಿ ಮೇಲಾಧೀಕಾರಿಗಳಿಗೆ ಹಾಗೂ ರಾಜಕೀಯ ನಾಯಕರುಗಳಿಗೆ ಕೆಟ್ಟದಾಗಿ ಮಾತನಾಡಿದಂತೆ ಬಿಂಬಿಸಲಾಗಿದೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಆದ್ದರಿಂದ ಯಾರೂ ಕೂಡ ಇದನ್ನು ಬೇರೆ ಗ್ರೂಪ್ ಅಥವಾ ಇತರ ಸಾಮಾಜಿಕ ಜಾಲತಾಣಗಳಿಗೆ ಫಾರ್ವಡ್ ಅಥವಾ ಷೇರ್ ಮಾಡದಂತೆ ಕೋರಿಕೊಂಡಿದ್ದಾರೆ.

ಒಟ್ಟಾರೆಯಾಗಿ ಉಡುಪಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಬೇರೊಂದು ಜಿಲ್ಲೆಗೆ ವರ್ಗಾವಣೆಗೊಂಡರೂ ಸಹ ನಿಷ್ಠಾವಂತ ಅಧಿಕಾರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಕೆಲವೊಂದು ಕಿಡಿಗೇಡಿಗಳ ವಿರುದ್ದ ಅಣ್ಣಾಮಲೈ ಬೇಸರ ವ್ಯಕ್ತಪಡಿಸಿದ್ದಂತು ಸತ್ಯ

 


Spread the love