ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ

Spread the love

ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ

ಮಸ್ಕತ್‍: ಇತ್ತೀಚೆಗೆ ಬಿರುವ ಜವನೆರ್ ಮಸ್ಕತ್ ವತಿಯಿಂದ ಒಮಾನಿನ ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ ಕಾರ್ಯಕ್ರಮವು ದಿನಾಂಕ 10.08.2018 ರಂದು ಬರ್ಕಾ ಫಾರ್ಮ್ ಹೌಸ್ ನಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಆಟಿಡ್ ಒಂಜಿ ದಿನ ಕಾರ್ಯಕ್ರಮಕ್ಕೆ ಜನಸಾಗರವು ಹರಿದು ಬಂದಿತ್ತು, ಆವರಣವು ತುಳುವ ಕಳೆಯಿಂದ ಕಂಗೊಳಿಸುತ್ತಿತ್ತು. ಇಡೀ ವಠಾರ, ಪ್ರವೇಶ ದ್ವಾರ ಹಾಗೂ ವೇದಿಕೆಯನ್ನು ತುಳುವ ಸಂಸ್ಕ್ರತಿಯ ರೀತಿಯಲ್ಲಿ ಸಿರಿ, ಮೊಗಗಳಿಂದ, ರಂಗೋಲಿ ಹಚ್ಚಿ, ಸಿಂಗರಿಸಲಾಗಿತ್ತು. ಅತಿಥಿಗಳಿಗೆ ಪೂರ್ಣ ಕುಂಭ, ವೀಳ್ಯ ನೀಡಿ ಸ್ವಾಗತಿಸಲಾಯಿತು. ಈ ವೇಳೆ ಮಹಿಳೆಯರು ಸಿದ್ದಪಡಿಸಿ ತಂದ ಖಾದ್ಯಗಳ ರುಚಿಯನ್ನು ಎಲ್ಲರೂ ಸವಿದರು.

ತುಳು ಸಂಪ್ರದಾಯದ ಪ್ರಕಾರ ಅತಿಥಿಗಳನ್ನು ವೀಳ್ಯ ನೀಡಿ, ಶಾಲು ಹೊದಿಸಿ, ಮುಟ್ಟಾಲೆ (ಹಾಳೆ ಟೋಪಿ) ತೊಡಿಸಿ ವೇದಿಕೆಗೆ ಬರಮಾಡಿಕೊಂಡು ಸತ್ಕರಿಸಲಾಯಿತು. ಬಿ. ಜೆ. ಮಸ್ಕತ್‍ನ ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ತಿತರಿದ್ದರು. ಬಾಲೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ತುಳುನಾಡಿನಿಂದ ಕರ್ಮಭೂಮಿಯಾದ ಮಸ್ಕತ್‍ಗೆ ಸನ್ಮಾನ ಸ್ವೀಕರಿಸಲು ಅತಿಥಿಯಾಗಿ, ಕಳೆದ ಬಾರಿ ಕ್ರಾಂಪಸ್ ಹಾಲಿವುಡ್ ಚಿತ್ರದ ‘ಕ್ರಾಂಪಸ್’ ವೇಷ ಧರಿಸಿ ಪ್ರಶಂಶೆ ಪಡೆದ ವೇಷ ಭೂಷಣಗಳ ಸರದಾರ, ಸಮಾಜ ಸೇವಕ, ಕಟಪಾಡಿಯ ರಿಯಲ್ ಹೀರೋ ರವಿ ಕಟಪಾಡಿ ಅವರನ್ನು ಬಿ. ಜೆ. ಮಸ್ಕತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬಿ ಜೆ ಮಸ್ಕತ್ ಬಡ ಜನರ ಸೇವೆಗೆ ನಿಂತ ಒಂದು ಸಣ್ಣ ಪರಿವಾರ. ಈ ಪರಿವಾರದಿಂದ ಆರೋಗ್ಯ ಸೇವೆ, ಆನಾರೋಗ್ಯ ಪೀಡಿತರಿಗೆ ವೈದ್ಯಕೀಯವಾಗಿ ಆರ್ಥಿಕ ಸೇವೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಬಡ ಹೆಣ್ಣು ಮಕ್ಕಳ ಕಲ್ಯಾಣ, ರಕ್ತದಾನ ಶಿಬಿರ ಇತ್ಯಾದಿ ಬಿ. ಜೆ. ಮಸ್ಕತ್ ಉದ್ದೇಶ.

ನೊಂದ ಬಡ ಜನರ ಆಶೋತ್ತರ ಗಳನ್ನು ಈಡೇರಿಸುವ ಹಾಗೂ ಅವರ ಕಣ್ಣೀರನ್ನು ಒರೆಸುವಂತಹ ಒಂದು ಸಣ್ಣ ಪ್ರಯತ್ನವನ್ನು ಬಿ ಜೆ ಮಸ್ಕತ್, ತಮ್ಮ ಕೈಯಲ್ಲಾದ ಸೇವೆ ಮಾಡಿ ಕೊಂಡು ಬಂದಿದೆ. ಹಾಗೂ ಮುಂದಿನ ಯುವ ಪೀಳಿಗೆಗೆ ತುಳು ಸಂಸ್ಕ್ರತಿಯ ಆಚಾರ ವಿಚಾರ, ಕಟ್ಟು ಕಟ್ಟಳೆಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು.

ನಮ್ಮ ಮುಖ್ಯ ಉದ್ದೇಶ ಹಿರಿಯರು ಆಚರಿಸಿಕೊಂಡು ಬಂದಂತಹ ತುಳು ಸಂಸ್ಕ್ರತಿ, ಸಂಪ್ರದಾಯಗಳನ್ನು ಮುಂದೆ ಹೇಗೆ ಆಚರಿಸಿಕೊಂಡು ಹೋಗಬಹುದು ಎಂಬ ನಿಟ್ಟಿನಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ಕಾರ್ಯಕ್ರಮಗಳ ಬಗ್ಗೆ ಚಿಂತನೆ. ಈ ಬಿ ಜೆ ಮಸ್ಕತ್ ಪರಿವಾರ ಜನಸೇವೆಗೆ ಮುಂದೆ ಮಾದರಿಯಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಯುವಕರನ್ನು ಮುಂದಿಟ್ಟು ಹಿರಿಯರ ಮಾರ್ಗದರ್ಶನದಲ್ಲಿ, ಯಾವುದೇ ಒತ್ತಡ ಆಮಿಷಗಳಿಲ್ಲದೆ ಮುಂದೆ ಸಾಗುತ್ತಿರುವ ದ್ರಷ್ಟಿ ಯಲ್ಲಿ ಸಮಾಜದ ಬಂಧು ಭಗಿನಿಯರು ಕೈ ಜೋಡಿಸಿ ಸಹಕರಿಸಬೇಕು. ಅದಕ್ಕಾಗಿ ನಿಮ್ಮ ಅಮೂಲ್ಯ ಸಲಹೆ ಸಹಕಾರದ ಅಗತ್ಯವಿದೆ ಎಂಬುದನ್ನು ಪರಿವಾರದ ಸದಸ್ಯರು ವೇದಿಕೆಯಲ್ಲಿ ವಿನಂತಿಸಿಕೊಂಡರು.

ಬಿ. ಜೆ. ಮಸ್ಕತ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳನ್ನು ಹಾಗೂ ನಿಮ್ಮ ಈ ಪ್ರೀತಿಯು ಸದಾ ಬಿ.ಜೆ. ಮಸ್ಕತ್ ಮೇಲೆ ಮುಂದುವರಿಯಲಿ ಎಂದು ಬಿ.ಜೆ.ಮಸ್ಕತ್ ಕೋರಿದೆ. ಇನ್ನೊಂದು ಅಚ್ಚರಿಯ ವಿಶೇಷ ಅಂದರೆ ಮಸ್ಕತ್‍ನಲ್ಲಿ ಮೊಟ್ಟ ಮೊದಲನೆಯದಾಗಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ದಿನ ಜರಗಿರುವುದು ಹೆಮ್ಮೆಯ ಸಂಗತಿ.

ಬಿ.ಜೆ ಮಸ್ಕತ್ 63 ಮಹಿಳಾ ಸದಸ್ಯರು ಆಟಿಯಲ್ಲಿ ತಯಾರಿಸುವ ಸುಮಾರು 35 ತರಹದ ವಿಶೇಷ ಹಾಗೂ ರುಚಿಕರವಾದ ಮೆತ್ತೆದ ಗಂಜಿ, ತೇವುದ ವಡೆ, ಪತ್ರಡ್ಡೆ ರಚ್ಚದ ಚಟ್ನಿ , ಕಪ್ಪ ರುಟ್ಟಿ, ಉಪ್ಪಡಚ್ಚೀರ್, ಕುಡುತ್ತ ಚಟ್ನಿ, ಪೆಲಕಾಯಿದ ಇರೆತ್ತ ಗುಂಡ, ಅಪ್ಪ, ಬೆಲ್ಲ ತಾರೈದ ಪುಂಡಿ, ನೀರ್ ಪುಂಡಿ, ಪರ್ ಸೇಮಿಗೆ, ಅರೆಪುದ ಆಡ್ಡೈ ಇತ್ಯಾದಿ ಅಡುಗೆಯನ್ನು ಮಾಡಿ ತಂದು ಕಾರ್ಯಕ್ರಮಕ್ಕೆ ಪೆÇ್ರೀತ್ಸಾಹಿಸಿದರು.

ಬಿ. ಜೆ.ಮಸ್ಕತ್ ಸದಸ್ಯರು ಎಲ್ಲಾ ಪುರುಷರಿಗೆ ಮತ್ತು ಮಹಿಳೆಯರಿಗೆ ಅವರ ರುಚಿಕರವಾದ ಅಡುಗೆಗೆ “ಬಿರುವ ಜವನೇರ್ ಮಸ್ಕತ್” ಲಾಂಛನದ ನೆನಪಿನ ಕಾಣಿಕೆಯ ಮೂಲಕ ಪ್ರಶಂಸಿಸಿದರು ಅಲ್ಲದೆ ಆಟಿ ತಿಂಗಳ ಪ್ರಾಮುಖ್ಯತೆಯನ್ನು ಹಾಗೂ ಆಟಿ ಕೊಡಂಜೆ ಅಲ್ಲದೆ ಪಾಲೆದ ಕೆತ್ತೆದ ಕಷಾಯ, ಆಟಿದ ಅಮಾವಾಸ್ಯೆಯ ವಿಶೇಷತೆ ಮತ್ತು ಮಹತ್ವವನ್ನು ವಿವರಿಸಿದರು. ಕೊನೆಗೆ ಪ್ರೀತಿ ಭೋಜನದೊಂದಿಗೆ ಮನೋರಂಜನೆಗಾಗಿ ಸಾಂಸ್ಕ್ರತಿಕ ಕಾರ್ಯ ಕ್ರಮ, ಆಟೋಟ ಸ್ಪರ್ದೆಗಳನ್ನು ಏರ್ಪಡಿ ಸಾಲಾಗಿತ್ತು. ಕೊನೆಯಲ್ಲಿ ಲಕ್ಕಿಡಿಪ್ ಮತ್ತು ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮವಿತ್ತು. ಧನ್ಯವಾದ ಅರ್ಪಣೆಯೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.


Spread the love