Home Mangalorean News Kannada News ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!

ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!

Spread the love

ಮಸ್ಕತ್ ಕರ್ನಾಟಕ  ಸಂಘದ ಯುಗಾದಿ ಸಂಭ್ರಮ!

“ಎಲ್ಲಾದರೂ ಇರು ಎಂತಾದರೂ ಇರು

ಎಂದೆಂದಿಗೂ ನೀ ಕನ್ನಡವಾಗಿರು…” ಎಂಬ ಕವಿವಾಣಿಯನ್ನು ಅಕ್ಷರಷ ಪಾಲಿಸಿ ಓಮಾನಿನ ಮರುಭೂಮಿಯಲ್ಲಿ ಕನ್ನಡದ ಕಂಪನ್ನು ಹರಿಸುತ್ತಿರುವವರು ಮಸ್ಕತ್ ಕನ್ನಡಿಗರು. ಅವರಿಗೆ ಈ ಕಾಯಕಕ್ಕೆ ಅವಕಾಶವನ್ನು ಇಲ್ಲಿನ ಭಾರತೀಯ ಸಾಮಾಜಿಕವೇದಿಕೆಯ ಕರ್ನಾಟಕ ವಿಭಾಗ ಒದಗಿಸುತ್ತಿದೆ.

ಇತ್ತೀಚೆಗೆ ಆಯ್ಕೆಯಾದ ಹೊಸ ಆಡಳಿತ ಮಂಡಳಿಯ ಮೊದಲ ಕಾರ್ಯಕ್ರಮವಾಗಿ 28/04/2017 ರ ಶುಕ್ರವಾರದಂದು ಮಸ್ಕತ್ತಿನಲ್ಲಿ  “ಯುಗಾದಿ ಸಂಭ್ರಮ” ಕಾರ್ಯಕ್ರಮವನ್ನು ಇಲ್ಲಿನ ರುವಿಯಲ್ಲಿರುವ ಅಲ್ ಮಾಸಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.  ಈ ಕಾರ್ಯಕ್ರಮದ ಪ್ರಯುಕ್ತ ಸಂಘದ ವಿವಿಧ ತಂಡಗಳಿಂದ ನಾಡಗೀತೆಯ ಗಾಯನ,ಜಾನಪದ ನೃತ್ಯ , ಭರತನಾಟ್ಯ, ಯಕ್ಷಗಾನ, ಕಿರುನಾಟಕ,  -ಮುಂತಾದ ಕಾರ್ಯಕ್ರಮಗಳಿಗೆ ಭರದಿಂದ ಅಭ್ಯಾಸ  ನಡೆದಿದೆ. ಬೆಳಿಗ್ಗೆಯಿಂದ ಮದ್ಯಾಹ್ನದ ತನಕ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳ ಬಳಿಕ ಸದಸ್ಯರಿಗೆ ಸಾಂಪ್ರದಾಯಿಕ ಹಬ್ಬದ ಔತಣವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕಾಗಿ  ಸಂಘದ ಸದಸ್ಯರು ಉತ್ಸಾಹದಿಂದ ಸಿದ್ಧತೆ ನಡೆಸುತ್ತಿದ್ದಾರೆ , ಈಗಷ್ಟೇ  ಶಾಲೆಯ ಪರೀಕ್ಷೆಗಳನ್ನು ಮುಗಿಸಿ ಬಿಡುವಿನಲ್ಲಿರುವ ಮಕ್ಕಳು ಆಸ್ಥೆಯಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ  ಎಂದು ಸಂಘದ ಪ್ರಸಕ್ತ ಅಧ್ಯಕ್ಷರಾದ ಶ್ರೀ ಕರುಣಾಕರ್ ರಾವ್ ಅವರು ತಿಳಿಸಿದ್ದಾರೆ.

ವರದಿ- ಸುಧಾ ಶಶಿಕಾಂತ್


Spread the love

Exit mobile version