ಮಸ್ಕುಲರ್ ಡಿಸ್ಟ್ರೊಫಿಯಿಂದ ಬಾಧಿತ ರೋಗಿಗಳಿಗೆ ಸ್ಟೆಮ್ ಸೆಲ್ ಥೆರಪಿ ಹೊಸ ಭರವಸೆ
ಕರ್ನಾಟಕದ 14 ವರ್ಷದ ಕುಶಾಲ್ ಸ್ಟೆಮ್ ಸೆಲ್ ಥೆರಪಿಯಿಂದ ಮರಣವನ್ನು ದೂರ ತಳ್ಳಿದ ಶೂರ
ಕರ್ನಾಟಕದ ಮಸ್ಕುಲರ್ ಡಿಸ್ಟೊಫಿ ರೋಗಿ ಕುಶಾಲ್‍ಎ ಸ್ವತಂತ್ರವಾಗಿ ನಿಲ್ಲಲು ಮತ್ತು ನಡೆದಾಡಲು ನ್ಯೂರೊಜೆನ್ ನೆರವು
ನ್ಯೂರೊಜೆನ್ ಮತ್ತು ಸ್ಪೈನ್ ಇನ್ಸ್‍ಟಿಟ್ಯೂಟ್‍ನಿಂದ ಗುಣಪಡಿಸಲಾಗದ ನಿಮ್ಮ ಜೀವನವನ್ನು ಕಿರಿದುಗೊಳಿಸುವ ರೋಗ ಡ್ಯೂಷೆನ್ ಮಸ್ಕುಲರ್ ಡಿಸ್ಟ್ರೊಫಿಯಿಂದ ಬಾಧಿತ ರೋಗಿಗಳಿಗೆ ಹೊಸ ಭರವಸೆ
ಮಂಗಳೂರು: ಭಾರತದ ಮುಂಚೂಣಿಯ ಸ್ಟೆಲ್ ಸೆಲ್ ಥೆರಪಿ ಮತ್ತು ನೆರುಲ್ ನವಿ ಮುಂಬೈ ಮೂಲದ ನ್ಯೂರೊಜೆನ್ ಬ್ರೈನ್ ಅಂಡ್ ಸ್ಪೈನ್ ಇನ್ಸ್‍ಟಿಟ್ಯೂಟ್ ಸ್ಟೆಮ್ ಸೆಲ್ ಥೆರಪಿ ಹಾಗೂ ಪುನರ್ವಸತಿ ಕೇಂದ್ರವು ಗುಣಪಡಿಸಲಾಗದ ಮಸ್ಕ್ಯುಲರ್ ಡಿಸ್ಟ್ರೊಫಿಯಿಂದ ಬಾಧಿತರಾದ ರೋಗಿಗಳಿಗೆ ಹೊಸ ಭರವಸೆ ನೀಡುತ್ತಿದೆ.
ಕರ್ನಾಟಕ ಮೂಲದ 14 ವರ್ಷದ ಹುಡುಗ ಕುಶಾಲ್ ಮಸ್ಕುಲರ್ ಡಿಸ್ಟ್ರೊಫಿ ಸಮಸ್ಯೆಯಿಂದ ನಿಲ್ಲಲು, ನಡೆಯಲು ಮತ್ತು ಮೆಟ್ಟಿಲು ಹತ್ತಲು ಅಶಕ್ತನಾಗಿದ್ದ ಹಾಗೂ ಹಾಸಿಗೆ ಹಿಡಿದಿದ್ದು ಮುಂಬೈನಲ್ಲಿನ ಸ್ಟೆಮ್ ಸೆಲ್ ಥೆರಪಿ ಹಾಗೂ ಪುನರ್ವಸತಿ ಚಿಕಿತ್ಸೆಯನ್ನು ನ್ಯೂರೊಜೆನ್ ಬ್ರೈನ್ ಅಂಡ್ ಸ್ಪೈನ್ ಇನ್ಸ್‍ಟಿಟ್ಯೂಟ್‍ನಲ್ಲಿ ನೀಡಲಾಯಿತು. ಕುಶಾಲ್ ಈಗ ಸ್ವತಂತ್ರವಾಗಿ ನಿಲ್ಲಬಲ್ಲ ಹಾಗೂ ಸ್ವತಂತ್ರವಾಗಿ ನಡೆದಾಡಬಲ್ಲ ಮತ್ತು ಸ್ಟೆಮ್ ಸೆಲ್ ಥೆರಪಿ ಕುಶಾಲ್‍ಗೆ ಉಡುಗೊರೆಯಾಗಿದೆ ಮತ್ತು ಮಸ್ಕ್ಯುಲರ್ ಡಿಸ್ಟ್ರೊಫಿ ಎನ್ನುವ ಗುಣಪಡಿಸಲಾಗದ ಮತ್ತು ದುರ್ಬಲಗೊಳಿಸುವ ರೋಗದ ವಿಸ್ತರಣೆಯನ್ನು ತಡೆಯುತ್ತದೆ.
ನ್ಯೂರೊಜೆನ್ ಬಿಎಸ್‍ಐ ಅನ್ನು ಗುಣಪಡಿಸಲಾಗದ ನರಸಂಬಂಧಿ ರೋಗಗಳಿಂದ ಸಮಸ್ಯೆಗೊಳಗಾದ ರೋಗಿಗಳಿಗೆ ಅವುಗಳ ಮುನ್ಸೂಚನೆಗಳು ಮತ್ತು ದೈಹಿಕ ಅಂಗವಿಕಲತೆಗಳಿಂದ ರಕ್ಷಿಸಲು ನೆರವಾಗಲು ಪ್ರಾರಂಭಿಸಲಾಗಿದ್ದು ಸ್ಟೆಮ್ ಸೆಲ್ ಥೆರಪಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ನ್ಯೂರೊಜೆನ್ ಬಿಎಸ್‍ಐ ಸ್ಟೆಮ್ ಸೆಲ್ ಥೆರಪಿ ಹಾಗೂ ನರಸಂಬಂಧಿ ಸಮಸ್ಯೆಗಳಾದ ಆಟಿಸಂ, ಸೆರೆಬ್ರಲ್ ಪಾಲ್ಸಿ, ಮೆಂಟಲ್ ರಿಟಾರ್ಡೇಷನ್, ಮೆದುಳಿನ ಪಾಶ್ರ್ವವಾಯು, ಮಸ್ಕುಲರ್ ಡಿಸ್ಟ್ರೊಫಿ, ಬೆನ್ನುಮೂಳೆಯ ಗಾಯ, ಸೆರೆಬೆಲ್ಲರ್ ಅಟಾಕ್ಸಿಯಾ, ಡೆಮೆನ್ಷಿಯಾ, ಮೋಟಾರ್ ನ್ಯೂರಾನ್ ಡಿಸೀಸ್, ಮಲ್ಟಿಪಲ್ ಸ್ಲೆರೋಸಿಸ್ ಮತ್ತು ನ್ಯೂರೊಸೈಕಿಯಾಟ್ರಿಕ್ ಸಮಸ್ಯೆಗಳಿಗೆ ಸಮಗ್ರ ಪುನರ್ವಸತಿ ನೀಡುತ್ತದೆ. ಇಲ್ಲಿಯವರೆಗೂ ಸಂಸ್ಥೆಯು 60ಕ್ಕೂ ಹೆಚ್ಚು ದೇಶಗಳ 6000ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ.
ನ್ಯೂರೊಜೆನ್ ಬ್ರೈನ್ ಮತ್ತು ಸ್ಪೈನ್ ಇನ್ಸ್‍ಟಿಟ್ಯೂಟ್ ಜುಲೈ 15, 2018 ರಂದು ಬೆಂಗಳೂರು ನಗರದಲ್ಲಿ ಕರ್ನಾಟಕದಲ್ಲಿರುವ ನರಸಂಬಂಧಿ ರೋಗಗಳಿಗೆ ಉಚಿತ ಕಾರ್ಯಾಗಾರ ಮತ್ತು ಒಪಿಡಿ ಕನ್ಸಲ್ಟೇಷನ್ ಶಿಬಿರವನ್ನು ಆಯೋಜಿಸಿದೆ. ನ್ಯೂರೊಜೆನ್ ಬೆನ್ನುಮೂಳೆಯ ಗಾಯ, ಮಸ್ಕುಲರ್ ಡಿಸ್ಟ್ರೊಫಿ, ಆಟಿಸಂ, ಸೆರೆಬ್ರಲ್ ಪಾಲ್ಸಿ ಇತ್ಯಾದಿ ಸಮಸ್ಯೆಯುಳ್ಳ ರೋಗಿಗಳಿಗೆ ಆಯೋಜಿಸಲಾಗಿದ್ದು ಬರೀ ಕನ್ಸಲ್ಟೇಷನ್‍ಗಾಗಿ ಮುಂಬೈವರೆಗೂ ಪ್ರಯಾಣಿಸುವುದು ಕಷ್ಟವಾಗುತ್ತದೆ ಎಂದು ಅರ್ಥ ಮಾಡಿಕೊಂಡಿದೆ. ಈ ಎಲ್ಲ ಗುಣಪಡಿಸಲಾಗದ ನರಸಂಬಂಧಿ ಸಮಸ್ಯೆಗಳ ರೋಗಿಗಳು ಈ ಉಚಿತ ಶಿಬಿರಕ್ಕೆ ಮೋನಾ 09920200400/ಪುಷ್ಕಲಾ 09821529653 ಸಂಖ್ಯೆಗಳನ್ನು ಸಂಪರ್ಕಿಸಿ ಕಾಯ್ದಿರಿಸಬಹುದು.
ಮಸ್ಕ್ಯುಲರ್ ಡಿಸ್ಟ್ರೊಫಿ ವಿಶ್ವದಾದ್ಯಂತ ಉಂಟಾಗುತ್ತಿದ್ದು ಎಲ್ಲ ಜನಾಂಗಗಳಿಗೂ ಬಾಧಿಸುತ್ತಿದೆ. ಇದರ ಪ್ರಕರಣಗಳಲ್ಲಿ ಕೆಲ ಬದಲಾವಣೆಗಳಿರಬಹುದು. ಇದು ಮಕ್ಕಳಲ್ಲಿ ಅತ್ಯಂತ ಸಾಮಾನ್ಯ ಮಾದರಿಯ ರೋಗವಾಗಿದೆ. ಡ್ಯೂಷೆನ್ ಮಸ್ಕುಲರ್ ಡಿಸ್ಟ್ರೊಫಿ ಪ್ರತಿವರ್ಷ ಜನಿಸುವ 3,500ರಿಂದ 6,000 ಗಂಡುಮಕ್ಕಳಲ್ಲಿ 1 ಮಗುವಿಗೆ ಬಾಧಿಸುತ್ತದೆ ಎಂದು ಅಮೆರಿಕಾದ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ಸಿಡಿಸಿ) ಹೇಳುತ್ತದೆ. ಭಾರತದಲ್ಲಿ ಕೂಡಾ ಮಸ್ಕುಲರ್ ಡಿಸ್ಟ್ರೊಫಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರತಿವರ್ಷ 3,500 ಗಂಡು ಮಕ್ಕಳಲ್ಲಿ 1ಕ್ಕೆ ಕಾಣಬರುತ್ತಿದೆ. ಕೆಲ ಬಗೆಯ ಮಸ್ಕುಲರ್ ಡಿಸ್ಟ್ರೊಫಿ ವಿಶ್ವದ ಕೆಲ ದೇಶಗಳು ಮತ್ತು ಪ್ರದೇಶಗಳಲ್ಲಿ ಹೆಚ್ಚಾಗಿದೆ. ಹಲವು ಮಸ್ಕುಲರ್ ಡಿಸ್ಟ್ರೊಫಿಗಳು ಕೌಟುಂಬಿಕ ಇತಿಹಾಸವುಳ್ಳವರಲ್ಲಿ ಮರುಕಳಿಸುತ್ತಿವೆ.
ಸಿಯಾನ್ ಮುಂಬೈನ ಎಲ್‍ಟಿಎಂಜಿ ಆಸ್ಪತ್ರೆ ಮತ್ತು ಎಲ್‍ಟಿಎಂ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಮತ್ತು ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥ ಹಾಗೂ ನ್ಯೂರೊಜೆನ್ ಬ್ರೈನ್ ಅಂಡ್ ಸ್ಪೈನ್ ಇನ್ಸ್‍ಟಿಟ್ಯೂಟ್‍ನ ನಿರ್ದೇಶಕ ಡಾ.ಅಲೋಕ್ ಶರ್ಮಾ, `ಮಸ್ಕುಲರ್ ಡಿಸ್ಟ್ರೊಫಿಗಳ ಕುರಿತು ನಮ್ಮ ಜನರಲ್ಲಿ ಬಹಳ ಅಲ್ಪ ಅರಿವಿದೆ. ಹಲವಾರು ಮಂದಿ ಮಕ್ಕಳಲ್ಲಿ ಈ ಬಗೆಯ ಮುನ್ಸೂಚನೆಗಳನ್ನು ತೋರುತ್ತಿದ್ದಾಗ ಡಿಎಂಡಿಯನ್ನು ಪೋಲಿಯೋ ಎಂದು ತಪ್ಪು ತಿಳಿಯುತ್ತಾರೆ. ಹಲವರು ಗಿಡಮೂಲಿಕೆಯ ಔಷಧಗಳ ಮೂಲಕ ತಮ್ಮ ಮಕ್ಕಳನ್ನು ಗುಣಪಡಿಸಬಹುದು ಎಂದೂ ಪ್ರಯತ್ನಿಸುತ್ತಾರೆ’ ಎಂದರು.
ನ್ಯೂರೊಜೆನ್ ಬ್ರೈನ್ ಅಂಡ್ ಸ್ಪೈನ್ ಇನ್ಸ್‍ಟಿಟ್ಯೂಟ್‍ನ ಡೆಪ್ಯುಟಿ ಡೈರೆಕ್ಟರ್ ಮತ್ತು ಹೆಡ್ ಮೆಡಿಕಲ್ ಸರ್ವೀಸಸ್ ಡಾ.ನಂದಿನಿ ಗೋಕುಲ್ ಚಂದ್ರನ್, `ಮಸ್ಕುಲರ್ ಡಿಸ್ಟ್ರೊಫಿ ವೃದ್ಧಿಸುವ ಸ್ಥಿತಿಯಾಗಿದ್ದು ವ್ಯಕ್ತಿಯ ಜೀವಿತಾವಧಿ ಮತ್ತು ಜೀವನದ ಗುಣಮಟ್ಟಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಡ್ಯೂಷೆನ್ ಮಸ್ಕುಲರ್ ಡಿಸ್ಟ್ರೊಫಿ ಗುಣಪಡಿಸಲಾಗದ ರೋಗ ಎಂದು ಗುರುತಿಸಲಾಗಿದ್ದು ಪುಟ್ಟ ಮಕ್ಕಳ ಜೀವನವನ್ನು ಕಿರಿದುಗೊಳಿಸುತ್ತದೆ. ಈ ಗುಣಪಡಿಸಲಾಗದ ರೋಗ ಸ್ನಾಯುಗಳು ನಶಿಸುವಂತೆ ಮಾಡುತ್ತದೆ, ಇದರಿಂದ ಚಲನೆ ಕಡಿಮೆಯಾಗುತ್ತದೆ, ಉಸಿರಾಟದ ಸಮಸ್ಯೆಗಳು, ಹೃದಯ ವೈಫಲ್ಯ ಮತ್ತು ಅಂತಿಮವಾಗಿ ಅಪ್ರಾಪ್ತ ಸಾವಿಗೆ ಕಾರಣವಾಗುತ್ತದೆ’ ಎಂದರು.
ಇಂದು, ನಾವು ಬೆಂಗಳೂರಿನ ಯುವಕ 14 ವರ್ಷದ ಆರ್.ಕುಶಾಲ್ ಅವರು ಮಸ್ಕುಲರ್ ಡಿಸ್ಟ್ರೊಫಿಯಿಂದ ಬಳಲುತ್ತಿದ್ದ ಪ್ರಕರಣವನ್ನು ಮಂಡಿಸುತ್ತಿದ್ದೇವೆ. ಕುಶಾಲ್‍ಗೆ ಬಾಲ್ಯದ ದಿನಗಳಲ್ಲಿ ಬೆಳವಣಿಗೆ ಚೆನ್ನಾಗಿಯೇ ಇತ್ತು, ಆದರೆ ಕುಶಾಲ್ 11 ವರ್ಷ ವಯಸ್ಸಿನಲ್ಲಿ ದೌರ್ಬಲ್ಯ ಕಂಡುಬಂದಿತು, ಆಗ ಆತನಿಗೆ ಮತ್ತು ಆತನ ಪೋಷಕರಿಗೆ ಏನೋ ಸರಿಯಿಲ್ಲ ಎನಿಸಿತು. ಹೆಚ್ಚು ಕಾಲ ತಡೆಯದೆ ಅವರು ಕುಶಾಲ್ ಅವರನ್ನು ಸ್ಥಳೀಯ ವೈದ್ಯರಲ್ಲಿಗೆ ಕರೆದೊಯ್ದರು. ಅಲ್ಲಿ ಆತನಿಗೆ ಮಸ್ಕುಲರ್ ಡಿಸ್ಟ್ರೊಫಿ ರೋಗ ಪತ್ತೆಯಾಯಿತು.
`ಪ್ರಾರಂಭಿಕ ರೋಗದ ಸೂಚನೆಗಳಲ್ಲಿ ದೇಹದ ಕೆಳಭಾಗದ ದೌರ್ಬಲ್ಯ ಕಂಡುಬಂದಿತು. ನನಗೆ ಸುತ್ತ ಮುತ್ತ ತಿರುಗಲು ಮತ್ತು ಬೆಂಬಲದಿಂದ ಕೆಲ ಹೆಜ್ಜೆಗಳು ನಡೆದಾಡಲು ಸಾಧ್ಯವಿತ್ತು. ನಾನು ನಿದ್ರೆಯಲ್ಲಿ ಪಕ್ಕಕ್ಕೆ ತಿರುಗಲು, ಹಾಸಿಗೆಯಿಂದ ಕುರ್ಚಿಗೆ ಬರಲು ಅಥವಾ ಕುರ್ಚಿಯಿಂದ ಹಾಸಿಗೆಗೆ ಬರಲು ಮತ್ತು ದೈನಂದಿನ ಚಟುವಟಿಕೆಗಳಿಗೆ ಬೆಂಬಲ ಅಗತ್ಯವಾಗಿತ್ತು. ನನ್ನ ಪರಿಸ್ಥಿತಿ ಹದಗೆಡಲು ಪ್ರಾರಂಭವಾಯಿತು. ಒಂದು ವರ್ಷದಲ್ಲಿ ನೆಲ ಅಥವಾ ಕುರ್ಚಿಯ ಮೇಲೆ ನಿಲ್ಲುವುದನ್ನು ಸಂಪೂರ್ಣ ಅಸಾಧ್ಯವಾಯಿತು ಮತ್ತು ಮೆಟ್ಟಿಲುಗಳು ಹತ್ತುವುದು ಅಸಾಧ್ಯವಾಯಿತು. ಸ್ನಾನ ಮಾಡಲು, ಶಾಲೆಗೆ ಹೋಗಲು, ಗೆಳೆಯರೊಂದಿಗೆ ಆಡಲು ಅಶಕ್ತನಾಗಿ ಭಾಗಶಃ ಹಾಸಿಗೆಗೆ ಕಟ್ಟುಬಿದ್ದೆ’ ಎಂದು ಕುಶಾಲ್ ಹೇಳುತ್ತಾರೆ.
ಪ್ರಾರಂಭದಲ್ಲಿ ಈ ಸಮಸ್ಯೆಗೆ ಮಾನಸಿಕವಾಗಿ ಹೊಂದಿಕೊಳ್ಳುವುದು ಕಷ್ಟವಾಯಿತು, ಆದರೆ ಕುಶಾಲ್ ಮತ್ತು ಅವರ ಕುಟುಂಬ ಅದನ್ನು ಸವಾಲಾಗಿ ತೆಗೆದುಕೊಂಡರು ಮತ್ತು ರೋಗಪತ್ತೆಯಾದ ಪ್ರಾರಂಭದಿಂದಲೇ ಅದನ್ನು ನಿಭಾಯಿಸುವ ಧೈರ್ಯ ತಳೆದರು. ಪೋಷಕರು ಕುಶಾಲ್ ಬೆಂಬಲಕ್ಕೆ ನಿಂತರು ಮತ್ತು ಸುಧಾರಣೆಗೊಳ್ಳಲು ಉತ್ತೇಜಿಸುತ್ತಿದ್ದರು.
ಕುಶಾಲ್ ಆಯುರ್ವೇದದಿಂದ ಅಲೋಪತಿಯವರೆಗೆ ಅಸಂಖ್ಯ ಔಷಧಗಳನ್ನು ಪ್ರಯತ್ನಿಸಿದರೂ ಯಾವುದೂ ಆತನ ಪರಿಸ್ಥಿತಿ ಸುಧಾರಿಸಲು ಶಕ್ಯವಾಗಿರಲಿಲ್ಲ.
“2017ರಲ್ಲಿ ಒಂದು ದಿನ, ಇಂಟರ್‍ನೆಟ್‍ನಲ್ಲಿ ಮಸ್ಕುಲರ್ ಡಿಸ್ಟ್ರೊಫಿಗೆ ಚಿಕಿತ್ಸೆ ಕುರಿತು ಹುಡುಕಾಟ ನಡೆಸುತ್ತಿದ್ದಾಗ ನಾನು ಮಸ್ಕುಲರ್ ಡಿಸ್ಟ್ರೊಫಿ ಕುರಿತು ಡಾ.ಅಲೋಕ್ ಶರ್ಮಾ ಅವರ ಉಪನ್ಯಾಸವನ್ನು ಗಮನಿಸಿದೆ. ನಾನು ನನ್ನ ರಿಪೋರ್ಟ್‍ಗಳು ಮತ್ತು ವಿಡಿಯೋಗಳನ್ನು ಕಳುಹಿಸಿ ಕನ್ಸಲ್ಟೇಷನ್‍ಗೆ ಪ್ರಯತ್ನಿಸಿದೆ ಮತ್ತು ನನ್ನ ಎಲ್ಲ ಪ್ರಶ್ನೆಗಳಿಗೂ ಕೂಡಲೇ ಉತ್ತರ ದೊರೆಯಿತು. ಇದರಿಂದ ಚಿಕಿತ್ಸೆಯ ಕುರಿತು ನನಗೆ ಸ್ಪಷ್ಟ ಚಿತ್ರಣ ಮೂಡಿತು ಮತ್ತು ಸುಧಾರಣೆಯ ಭರವಸೆಯ ಕಿರಣ ಬೆಳಗಿತು. ನಾನು ಮತ್ತು ನನ್ನ ಕುಟುಂಬ ಮತ್ತಷ್ಟು ಸಮಯ ವ್ಯರ್ಥ ಮಾಡದೆ ನ್ಯೂರೊಜೆನ್ ಬಿಎಸ್‍ಐನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದೆವು” ಎನ್ನುತ್ತಾರೆ.
ಪರೀಕ್ಷೆ ಮಾಡಿದಾಗ ದೇಹದ ಕೆಳಭಾಗದಲ್ಲಿ ದೌರ್ಬಲ್ಯ ತೀವ್ರಗೊಂಡು ಬಳಲಿಕೆ ಹೆಚ್ಚಾಗುತ್ತಿತ್ತು. ಕುಶಾಲ್‍ಗೆ ನೆರವಿಲ್ಲದೆ ನಡೆದಾಡಲು, ಓಡಲು ಮತ್ತು ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ನಡೆಯುವಾಗ ದಿಢೀರ್ ಬೀಳುವಂತಾಗುತ್ತಿತ್ತು. ಹಾಸಿಗೆಯಿಂದ ಎದ್ದು ಬೇರೆ ಕಡೆ ಬದಲಾಗಲು ಸಾಧ್ಯವಾಗುತ್ತಿರಲಿಲ್ಲ. ಆತನ ಚಲನೆ ಸೀಮಿತವಾಗಿತ್ತು.
ನ್ಯೂರೊಜೆನ್ ಬ್ರೈನ್ ಅಂಡ್ ಸ್ಪೈನ್ ಇನ್ಸ್‍ಟಿಟ್ಯೂಟ್‍ನಲ್ಲಿ ಕುಶಾಲ್ ಸ್ಟೆಮ್ ಸೆಲ್ ಥೆರಪಿಯೊಂದಿಗೆ ಕಸ್ಟಮೈಸ್ಡ್ ರಿಹ್ಯಾಬಿಲಿಟೇಷನ್ ಪ್ರೋಗ್ರಾಮ್ ಅನ್ನು ಸೆಪ್ಟೆಂಬರ್ 2017ರಲ್ಲಿ ಪಡೆದುಕೊಂಡರು. ಪಾದ ಮತ್ತು ಹೆಬ್ಬೆರಳುಗಳ ಚಲನೆ ಸುಧಾರಿಸಲು, ಆತನ ದುರ್ಬಲ ಸ್ನಾಯುಗಳನ್ನು ಬಲಗೊಳಿಸಲು, ಮತ್ತು ನಿಲ್ಲುವಾಗ ಸಮತೋಲನಕ್ಕೆ ವ್ಯಾಯಾಮಗಳನ್ನು ನೀಡಲಾಯಿತು. ಅಲ್ಲದೆ ಆತನ ಒಟ್ಟಾರೆ ಸಾಮಥ್ರ್ಯ ವೃದ್ಧಿಸಲು ಮತ್ತು ದೇಹದ ಕೆಳಭಾಗ ಸದೃಢಗೊಳಿಸಲು ಥೆರಪಿಗಳನ್ನು ನೀಡಲಾಯಿತು. ಕುಶಾಲ್‍ಗೆ ಚಿಕಿತ್ಸೆಯ ನಂತರ ಸಲಹೆ ನೀಡಲಾದ ನ್ಯೂರೊ ರಿಹ್ಯಾಬಿಲಿಟೇಷನ್ ಮುಂದುವರೆಸಿದರು ಮತ್ತು ರೋಗದ ಪ್ರಗತಿ ಸ್ಥಗಿತಗೊಂಡಿದ್ದೇ ಅಲ್ಲದೆ ಕ್ರಮೇಣ ರೋಗದಿಂದ ಗುಣವಾಗುತ್ತಾ ಮುನ್ನಡೆದನು.
ಸ್ಟೆಮ್ ಸೆಲ್ ಥೆರಪಿಯ ನಂತರ ಕುಶಾಲ್ ಸಾಕಷ್ಟು ಸುಧಾರಿಸಿದ್ದಾನೆ ಮತ್ತು ಇಂದು ಕುಶಾಲ್ ಯಾರ ಬೆಂಬಲವೂ ಇಲ್ಲದೆ ನಿಲ್ಲಬಲ್ಲ ಮತ್ತು ನಡೆದಾಡಬಲ್ಲ. ಉತ್ತಮ ನಿಲುವು. ದೌರ್ಬಲ್ಯ ಕಡಿಮೆಯಾಗಿದೆ. ಸೊಂಟದ ಮೇಲ್ಭಾಗ ಮತ್ತು ಕುತ್ತಿಗೆಗಳಲ್ಲಿ ಶಕ್ತಿ ಬಂದಿದೆ. ಹಿಂದಿನಂತೆ ಸ್ವತಂತ್ರ ಜೀವನ ನಡೆಸುತ್ತಿದ್ದಾನೆ.
ಕುಶಾಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಮಸ್ಕುಲರ್ ಡಿಸ್ಟ್ರೊಫಿ ಆತ ಹಾಗೂ ಆತನ ಕನಸುಗಳನ್ನು ಬಾಧಿಸದಂತೆ ಸಾಫ್ಟ್‍ವೇರ್ ಎಂಜಿನಿಯರ್ ಆಗುವ ಬಯಕೆ ಹೊಂದಿದ್ದಾನೆ. `ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ, ದೊಡ್ಡ ಕನಸು ಕಾಣಿರಿ ಮತ್ತು ನಿಮ್ಮ ಗುರಿಗಳನ್ನು ಯಾವುದೇ ರೋಗಗಳು ನಿಮ್ಮನ್ನು ತಡೆಯದಂತೆ ಸಾಧಿಸಿಕೊಳ್ಳಿ” ಎಂದು ಕುಶಾಲ್ ಹೇಳುತ್ತಾನೆ.
ಡಾ.ನಂದಿನಿ ಗೋಕುಲ್‍ಚಂದ್ರನ್, `ಡ್ಯೂಷೆನ್ ಮಸ್ಕುಲರ್ ಡಿಸ್ಟ್ರೊಫಿ ಅದರ ತೀವ್ರ ರೀತಿಯಲ್ಲಿ ಈ ಮಕ್ಕಳ ಜೀವಿತಾವಧಿ 20-22 ವರ್ಷಗಳು ಮಾತ್ರ. ಇದಕೀ ಮಕ್ಕಳ ಪೋಷಕರಿಗೆ ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಸಂಕಷ್ಟ ತಂದೊಡ್ಡುತ್ತದೆ. ಈ ರೋಗ ವಿಸ್ತರಣೆಯನ್ನು ತಡೆಯಲು ಯಾವುದೇ ಚಿಕಿತ್ಸೆ ಇಲ್ಲದೇ ಇರುವುದರಿಂದ ಕುಟುಂಬ ಅವರ ಮಗು ಮರಣದತ್ತ ಸಾಗುವುದನ್ನು ಅಸಹಾಯಕವಾಗಿ ನೋಡಬೇಕಾಗುತ್ತದೆ. ಆದ್ದರಿಂದ ನಮ್ಮ ಹೊರನೋಟವನ್ನು ವಿಸ್ತರಿಸಬೇಕಾಗಿದೆ ಮತ್ತು ಹೊಸಬಗೆಯ ಚಿಕಿತ್ಸಾ ಕಾರ್ಯತಂತ್ರಗಳನ್ನು ಆವಿಷ್ಕರಿಸಬೇಕಾಗಿದ್ದು ಕನಿಷ್ಠ ರೋಗದ ವಿಸ್ತರಣೆಯನ್ನು ತಡೆಯಬೇಕು. ಸ್ಟೆಮ್ ಸೆಲ್ ಥೆರಪಿ ಇತ್ತೀಚಿನ ವರ್ಷಗಳಲ್ಲಿ ಚಿಕಿತ್ಸೆಯ ಆಯ್ಕೆಯಾಗಿ ಹೊರಹೊಮ್ಮಿದ್ದು ಈ ರೋಗದ ವಿಸ್ತರಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದರು.
ಡಾ.ಅಲೋಕ್ ಶರ್ಮಾ, `ಲಭ್ಯವಿರುವ ಚಿಕಿತ್ಸೆಯು ಗಾಯದ ಮಟ್ಟದಲ್ಲಿ ಕ್ರಿಯಾಶೀಲವಾಗಲು ವಿಫಲವಾಗುತ್ತದೆ. ರೋಗದ ಪ್ರಗತಿಯನ್ನು ನಿಧಾನಗೊಳಿಸಲು, ಸ್ಥಗಿತಗೊಳಿಸಲು ಅಥವಾ ಹಿಮ್ಮೆಟ್ಟಿಸಲು ಯಾವುದೇ ಚಿಕಿತ್ಸೆಗಳು ಲಭ್ಯವಿಲ್ಲ. ಇದು ವಂಶವಾಹಿ ಸಮಸ್ಯೆಯಾಗಿರುವುದರಿಂದ ಅಂತಿಮ ಉತ್ತರ ಜೀನ್ ಥೆರಪಿಯಲ್ಲಿದೆ, ಅದು ಇನ್ನೂ ಕ್ಲಿನಿಕಲ್ ವ್ಯವಸ್ಥೆಗೆ ಬಂದಿಲ್ಲ. ಸ್ಟೆಮ್ ಸೆಲ್ ಥೆರಪಿ ಜಾಗತಿಕವಾಗಿ ಮಸ್ಕುಲರ್ ಡಿಸ್ಟ್ರೊಫಿಯಲ್ಲಿ ಅದರ ಪಾತ್ರದ ಕುರಿತು ಸಂಶೋಧಕರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಮಸ್ಕುಲರ್ ಡಿಸ್ಟ್ರೊಫಿಗೆ ನಡೆಸಲಾದ ಅಸಂಖ್ಯ ಪ್ರಾಣಿ ಹಾಗೂ ಮನುಷ್ಯರ ಅಧ್ಯಯನಗಳು ಪ್ರಯೋಜನಕಾರಿ ಪರಿಣಾಮಗಳನ್ನು ತೋರಿಸಿವೆ’ ಎಂದರು.
ಡಾ.ಅಲೋಕ್ ಶರ್ಮಾ, `ಸ್ಟೆಮ್ ಸೆಲ್ ಥೆರಪಿಯು ಮಸ್ಕುಲರ್ ಡಿಸ್ಟ್ರೊಫಿಯ ರೋಗಿಗಳ ನಿರ್ವಹಣೆಯಲ್ಲಿ ಉತ್ಪಾದಕ ಮತ್ತು ಸುರಕ್ಷಿತವಾಗಿದೆ. ಇದು ಈ ರೋಗಿಗಳಲ್ಲಿ ಕಾರ್ಯ ನಿರ್ವಹಣೆಯ ಮತ್ತು ರೇಡಿಯೋಲಾಜಿಕಲ್ ಬದಲಾವಣೆಗಳನ್ನು ಈ ರೋಗಿಗಳಲ್ಲಿ ತೋರಿಸಿದ್ದು, ಇದು ಜೀವನದ ಗುಣಮಟ್ಟ ಹೆಚ್ಚಿಸಿದೆ’ ಎಂದರು.
ಡಾ.ಅಲೋಕ್ ಶರ್ಮಾ, `ಹಿಂದೆ ನಾವು ನಿಮ್ಮ ರೋಗಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದಿರುವ ಲಕ್ಷಾಂತರ ಮಂದಿ ರೋಗಿಗಳಿಗೆ ನಾವು ಈಗ ಹೇಳುವುದೇನೆಂದರೆ, ಸ್ಟೆಮ್ ಸೆಲ್ ಥೆರಪಿ ಹಾಗೂ ನ್ಯೂರೊರಿಹ್ಯಾಬಿಲಿಟೇಷನ್‍ನಿಂದ ನಿಮಗೆ ಒಳ್ಳೆಯ ದಿನಗಳು ಬರಲಿವೆ ಎಂದು ನಾವು ಹೇಳುತ್ತಿದ್ದೇವೆ!’ ಎಂದರು.