ಮಹಾನಗರಪಾಲಿಕೆ ನೂತನ ಮೇಯರ್ ಆಗಿ ಕವಿತಾ ಸನಿಲ್, ರಜನೀಶ್ ಉಪಮೇಯರ್
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ 19 ನೇ ಅವಧಿಯ ನೂತನ ಮೇಯರ್ ಆಗಿ ಪಚ್ಚನಾಡಿ ವಾರ್ಡಿನ ಸದಸ್ಯೆ ಕವಿತಾ ಸನಿಲ್ ಆಯ್ಕೆಯಾಗಿದ್ದಾರೆ.
ಗುರುವಾರ ಬೆಳಿಗ್ಗೆ ಮಂಗಳೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಚುನಾವಣೇಯಲ್ಲಿ 38 ಮತಗಳನ್ನು ಪಡೆಯುವ ಮೂಲಕ ನೂತನ ಮೇಯರ್ ಆಗಿ ಆಯ್ಕೆಯಾಗದರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು. ಇದೇ ವೇಳೆ ದೆರೆಬೈಲ್ ಉತ್ತರ ವಾರ್ಡಿನ ರಜನೀಶ್ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಇಬ್ಬರು, ಸಿಪಿಎಂ, ಎಸ್ ಡಿ ಪಿಐ ಹಾಗೂ ಪಕ್ಷೇತರ ತಲಾ ಒಬ್ಬ ಸದಸ್ಯರು ತಟಸ್ಥರಾಗಿದ್ದರು. ಮಂಗಳೂರು ನಗರಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2 ಸಿಪಿಎಂ, ಎಸ್ ಡಿ ಪಿಐ ಹಾಗೂ ಪಕ್ಷೇತರ ತಲಾ ಒಂದು ಸ್ಥಾನವನ್ನು ಹೊಂದಿದೆ.
ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ ಆರ್ ಲೋಬೊ, ಮೋಯ್ದಿನ್ ಬಾವ ಉಪಸ್ಥಿತರಿದ್ದು, ಕವಿತಾ ಸನಿಲ್ ಪರ ಮತ ಚಲಾಯಿಸಿದರು.